ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವರ ಖಡಕ ವಾನಿ೯೦ಗ .ಒನ ಟಮ೯ಪ್ರವೇಶ ಶುಲ್ಕ ಮಾತ್ರ ಪಡೆಯಲು ಸೂಚನೆ

Share The News

ಚಾಮರಾಜನಗರ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಖಾಸಗಿ ಶಾಲೆಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದು, ಒಂದು ಅವಧಿಯ (ಟರ್ಮ್‌) ಪ್ರವೇಶ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಬೇಕು ಎಂದು ಸೂಚಿಸಿದ್ದಾರೆ.

‘ಜೂನ್‌ನಿಂದ ಶಾಲೆಗಳು ಆರಂಭವಾಗಿಲ್ಲ. ಅನೇಕ ಖಾಸಗಿ ಶಾಲೆ‌ಗಳ ಶಿಕ್ಷಕರು ಕಷ್ಟದಲ್ಲಿದ್ದಾರೆ. ಹೀಗಾಗಿ, ಮಕ್ಕಳ ದಾಖಲಾತಿಗೆ ಅನುಮತಿ ನೀಡಿ, ಒಂದು ಅವಧಿಯ ಅಧಿಕೃತ ಶುಲ್ಕವನ್ನು ಮಾತ್ರ ಪಡೆಯುವಂತೆ ಸೂಚಿಸಿದ್ದೇವೆ ಮತ್ತು ಸಂಗ್ರಹಿಸಿದ ಶುಲ್ಕವನ್ನು ಶಿಕ್ಷಕರ ವೇತನಕ್ಕೆ ಪಾವತಿಸಲು ಬಳಸುವಂತೆ ತಿಳಿಸಲಾಗಿದೆ ಎಂದಿದ್ದಾರೆ.

ಇನ್ನು ಹೆಚ್ಚಿನ ಶುಲ್ಕ ಪಡೆದರೆ, ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.

 


Share The News

Leave a Reply

Your email address will not be published. Required fields are marked *

error: Content is protected !!