ಎನ್ಎಸ್ ಶ್ರೀನಿವಾಸ್ ಸ್ನೇಹ ಬಳಗದಿಂದ ಗಾರ್ಮೆಂಟ್ಸ್ ನೌಕರರಿಗೆ ಆಹಾರದ ಕಿಟ್ ವಿತರಣೆ .
ಹರಿಹರ:-ಹರಿಹರದ ಗುತ್ತೂರು ಇಂಡಸ್ಟ್ರಿಯಲ್ ಏರಿಯಾದ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ನೌಕರರಿಗೆ ಎನ್ಎಸ್ ಸ್ನೇಹ ಬಳಗದಿಂದ ಆಹಾರದ ಸಾಮಗ್ರಿಗಳ ಕಿಟ್ಟನ್ನು ನೀಡಲಾಯಿತು .
ಡಾ॥ಬಿಆರ್ ಅಂಬೇಡ್ಕರ್ ಸಾರ್ವಜನಿಕ ಸೇವಾ ಸಮಿತಿ ಹಾಗೂ ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು,ಕಾರ್ಯಾಧ್ಯಕ್ಷರು ಆಹಾರದ ಕಿಟ್ಗಳನ್ನು ಗಾರ್ಮೆಂಟ್ನಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವಿತರಿಸಿದರು .
ಡಾ॥ಬಿಆರ್ ಅಂಬೇಡ್ಕರ್ ಸಾರ್ವಜನಿಕ ಸೇವಾ ಸಮಿತಿಯ ಅಧ್ಯಕ್ಷರಾದ ಹೆಚ್ ಮಲ್ಲೇಶಪ್ಪ ನವರು ಮಾತನಾಡಿ ಕರೋನಾ ಸಂಕಷ್ಟದ ದಿನದಿಂದ ಇಲ್ಲಿಯವರೆಗೆ ಅಂದರೆ ಕಳೆದ ಏಳು ತಿಂಗಳಿಂದ ನಿರಂತರವಾಗಿ ಎನ್ಎಸ್ ಶ್ರೀನಿವಾಸ್ ಸ್ನೇಹ ಬಳಗದವರು ನಿರಂತರವಾಗಿ ಬಡ ಮಧ್ಯಮ ವರ್ಗದ ಜನರಿಗೆ ಆಹಾರದ ಕಿಟ್ ಗಳನ್ನು ನೀಡುತ್ತಾ ಬಂದಿದ್ದಾರೆ.ನಿಜವಾಗಿಯೂ ಅವರ ಕಾರ್ಯ ಮೆಚ್ಚುವಂಥದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಆ ಕೆಲಸವನ್ನು ಶ್ರೀನಿವಾಸ್ ಮಾಡಿದ್ದಾರೆ ಇವರ ಈ ಕಾರ್ಯ ನಿರಂತರವಾಗಿ ಸಾಗುತ್ತಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಡಾ॥ ಬಿಆರ್ ಅಂಬೇಡ್ಕರ್ ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಎಚ್ಎಸ್ ಕೊಟ್ರೇಶ್ ,ಪ್ರಧಾನ ಕಾರ್ಯದರ್ಶಿ ಹಾಗೂ D.S.S ತಾಲ್ಲೂಕು ಸಂಚಾಲಕರಾದ ಆರ್ ಶ್ರೀನಿವಾಸ್, ಸಹಕಾರ್ಯದರ್ಶಿ ಅಣ್ಣಪ್ಪ ಅಜ್ಜೆರ್ ,ಸುಚೀತ್, ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀನಿವಾಸ, ತಾಲ್ಲೂಕು ಅಧ್ಯಕ್ಷರಾದ ರವಿ ,ಗಾರ್ಮೆಂಟ್ಸ್ನ ಮಾಲೀಕರಾದ ಸುನಿಲ್ ಕುಮಾರ್ ,ಯಮನೂರು,ಗಾರ್ಮೆಂಟ್ಸ್ ನಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ನೌಕರರು ಉಪಸ್ಥಿತರಿದ್ದರು
ವರದಿ ಪ್ರಕಾಶ್ ಮಂದಾರ.