ಬೆಳಗಾವಿ:ಸವದತ್ತಿ, ಸೆ.19: ಸವದತ್ತಿಯ ಸಮಾಜ ಸೇವಕರು ಹಾಗೂ ರಾಜಕಾರಣಿ, ಸವದತ್ತಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಕಾಂಗ್ರೆಸ್ ಮುಂಖಡ ಆನಂದ ಚೋಪ್ರಾ ಅವರು ಶನಿವಾರ ಹೃದಯಾಘಾತದಿಂದ ಅಸುನೀಗಿದ್ದಾರೆ.
ಮೊದಲಿಗೆ ಅನಾರೋಗ್ಯದಿಂದ ಬಳಲುತ್ತಿದ್ದರು, ಚಿಕಿತ್ಸೆ ನೀಡಲಾಗಿತ್ತು ಆದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ ಶನಿವಾರ ಬೆಳಗಿನ ಜಾವ ಏಕಾಕಿಯಾಗಿ ತೀವ್ರ ಉಸಿರಾಟದ ತೊಂದರೆಯಾಗಿದ್ದು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಅವರು ನಿಧನರಾದರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ವೃದ್ಧ ತಾಯಿ, ಪತ್ನಿ ,ಪುತ್ರಿ ಹಾಗೂ
ಪುತ್ರನನ್ನು ಮತ್ತು ಅಪಾರ ಬಂಧು ಬಳಗವನ್ನು ಅವರು ತಮ್ಮ ಹಿಂದೆ ಬಿಟ್ಟು ಅಗಲಿದ್ದಾರೆ.
ಹಲವು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲನ್ನು ಅನುಭವಿಸಿದ್ದರು.