ಚಿಕ್ಕೋಡಿ: ರಿಪಬ್ಲಿಕನ್ ಸೇನಾ ಸಂಘಟನೆಯು
ಜಿಲ್ಲಾ ಮತ್ತು ತಾಲೂಕಾ ಪದಾದಿರ್ಕಾರಿಗಳ
ಅದೇಶ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಜರೀಗೀತು ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರುಗಳು ಹಾಗು ತಾಲೂಕ ಅಧ್ಯಕ್ಷರುಗಳನ್ನು . ಗೋಕಾಕ .ರಾಮದುರ್ಗ.ಹುಕ್ಕೇರಿ. ತಾಲೂಕಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಈಶ್ವರ ಗುಡಜ ಮಾತನಾಡಿ ಈ ದೇಶ ಸರ್ವ ಜಾತಿ ಸರ್ವಧರ್ಮ ಸಮಾನತೆಯ ದೇಶ ಎತ್ತಿ ಹಿಡಿಯುವಂತಾ ದೇಶ ಈ ದೇಶಕ್ಕೆ ಸಂವಿಧಾನ ಕೊಡಬೇಕಂತ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೇವಲ ದಲಿತರಿಗೆ ಮಾತ್ರ ಕೊಟ್ಟಿಲ್ಲ ಪ್ರತಿಯೊಂದು ಜಾತಿಗೂ ಮೀಸಲಾತಿಯನ್ನು ಕೊಟ್ಟಿದ್ದಾರೆ ಪ್ರತಿಯೊಂದು ಜಾತಿಗಳಿಗೆ ಕಾನೂನು ಕೊಟ್ಟಿದ್ದಾರೆ ಆದ್ದರಿಂದ ನಾವೆಲ್ಲರೂ ಬಾಬಾಸಾಹೇಬರ ಆಶಯದಂತೆ ಬದುಕಬೇಕು ಅಂಬೇಡ್ಕರ್ ಅವರು ತಮ್ಮ ಬುದ್ಧಿಶಕ್ತಿ, ಚೈತನ್ಯ, ಹೋರಾಟವನ್ನು ಸಮಾನತೆಗೆ ಮೀಸಲಿಟ್ಟಿದ್ದರು.
ಜಾತಿ, ಭಾಷೆ, ಪಂಗಡಗಳನ್ನು ಮೀರಿ ಮನುಷ್ಯ ಬೆಳೆಯಬೇಕು ಎಂದು ಕನಸು ಕಂಡಿದ್ದರು. ಸ್ವಾಭಿಮಾನಿ ಮನುಷ್ಯನಿಗೆ ತನ್ನ ಪಕ್ಕದಲ್ಲಿರುವ ವ್ಯಕ್ತಿಯ ಬಗ್ಗೆಯೂ ಗೌರವ ಇರಬೇಕು ಎಂದು ಹಂಬಲಿಸುತ್ತಿದ್ದರು ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ದೇವರಾಜ ಕಾಂಬಳೆ ಉಪಾಧ್ಯಕ್ಷರನ್ನಾಗಿ ಈಶ್ವರ ಗುಡಜ ಹಾಗೂ ಶೇಕ್ಷಣಿಕ ಜಿಲ್ಲಾ ಚಿಕ್ಕೋಡಿ ಅಧ್ಯಕ್ಷರನ್ನಾಗಿ ಮಾಂತೇಶ ದೂಡಮನಿ ಗೋಕಾಕ ತಾಲೂಕ ಅಧ್ಯಕ್ಷರಾಗಿ ಗೋವಿಂದ ಕಣಮಡ್ಡಿ ಉಪಾಧ್ಯಕ್ಷರಾಗಿ ಕಿರಣ ಸರನ್ನವರ ಹಾಗು ಇತರರನ್ನು ಆಯ್ಕೆ ಮಾಡಲಾಯಿತು.
ಆದೇಶ ಪ್ರಮಾಣ ಪತ್ರವನ್ನು ಉತ್ತರ ಕರ್ನಾಟಕ ರಾಜ್ಯ ಅಧ್ಯಕ್ಷರು ಉತ್ತಮ ಕಾಂಬಳೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರವಣ ಕುರನೆ ಗೌರವ ಅಧ್ಯಕ್ಷರು ಮಲ್ಲೇಶ ಕಾಂಬಳೆ. ನಾಗರಾಜ ಪಂಡಿತ ಕರನಿಂಗ .ನೋವಮನ ಕಾಜಸಾಹೇಬ ಮುಲ್ಲಾ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷರು ದೇವರಾಜ ಕಾಂಬಳೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಈಶ್ವರ ಗುಡಜ ಎಲ್ಲರು ಸೇರಿ ವಿತರಿಸಿದರು.