ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ‘ಮಹಾನಾಯಕ’ ಇಂದು ಪ್ರಸಾರವಾಗದ ಹಿನ್ನೆಲೆಯಲ್ಲಿ ವೀಕ್ಷಕರು ಆತಂಕಕ್ಕೊಳಗಾಗಿದ್ದಾರೆ.ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡಕ್ಕೆ ಮಹಾನಾಯಕ ಪ್ರಸಾರ ಮಾಡದಂತೆ ಬೆದರಿಕೆ ಕರೆಗಳು ಬಂದಿರುವ ವಿಚಾರ ಸಾಕಷ್ಟು ಚರ್ಚೆಗೀಡಾದ ಬೆನ್ನಲ್ಲೇ ಇಂದು ಮಹಾನಾಯಕ ಪ್ರಸಾರವಾಗದೇ ಇರುವುದು ವೀಕ್ಷಕರ ಆತಂಕಕ್ಕೆ ಕಾರಣವಾಯಿತು.
ಇನ್ನೂ ಈ ವಿಚಾರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜೀ ಕನ್ನಡಕ್ಕೆ ಕರೆ ಮಾಡಿ ವಿಚಾರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಪರ್ಕ ಸಂಖ್ಯೆಯಲ್ಲಿಯೂ ಬಿಝಿ ಟೋನ್ ಕೇಳಿ ಬರುತ್ತಿದೆ. ಸದ್ಯ ದೊರೆಯಿತಿರುವ ಮಾಹಿತಿಯ ಪ್ರಕಾರ, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಪ್ರಸಾರದ ರೈಟ್ಸ್ ಜೀ ಕನ್ನಡ ಈ ಮೊದಲೇ ಪಡೆದುಕೊಂಡಿತ್ತು. ಈ ಕಾರಣದಿಂದಾಗಿ ಧಾರಾವಾಹಿ ಪ್ರಸಾರವಾಗಿಲ್ಲ ಎಂದು ಹೇಳಲಾಗಿದೆ.
ಇನ್ನೂ ಈ ವಾರ ಮಹಾನಾಯಕ ಪ್ರಸಾರವಾಗದಿದ್ದರೂ ವೀಕ್ಷಕರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ, ಮುಂದಿನ ವಾರದಿಂದ ಎಂದಿನಂತೆಯೇ ಮಹಾನಾಯಕ ಪ್ರಸಾರವಾಗಲಿದೆ ಎಂದು ತಿಳಿದು ಬಂದಿದೆ.