ಆಬುಧಾಬಿ : ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿ ಬಿ 10ರನ್ ಗಳ ಅಂತರದಿಂದ ಜಯ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಆರ್ ಸಿ ಬಿ 5 ವಿಕೆಟ್ ನಷ್ಟಕ್ಕೆ 164 ರ ಗುರಿ ಬಿಟ್ಟು ಕೊಟ್ಟಿತ್ತು. ಆರ್ ಸಿ ಬಿ ನೀಡಿದ 164 ರನ್ ಗಳ ಗುರಿಯನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಲಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ 153 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನನುಭವಿಸಿತು.
ಸನ್ ರೈಸರ್ಸ್ ಹೈದರಾಬಾದ್ ಪರ ಚಾಹಲ್ 4 ಓವರ್ ನಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನನಲ್ಲಿ ಪ್ರಮುಖ ಪಾತ್ರ ವಹಿಸಿದರು. ನವದೀಪ್ ಸೈನಿ ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದು ಚಾಹಲ್ ಅವರಿಗೆ ಸಾಥ್ ನೀಡಿದರು.
ಆತ್ಮವಿಶ್ವಾಸದಿಂದಲೇ ಗುರಿಯನ್ನು ಬೆನ್ನಟ್ಟಲಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಕೇವಲ 6 ರನ್ ಮಾಡಿ ಔಟಾದರು. ಜಾನಿ ಬೇರ್ಸ್ಟೋವ್ ಗೆ ಜೊತೆಯಾದ ಮನೀಶ್ ಭದ್ರ ಬುನಾದಿಯನ್ನೇ ಹಾಕಿದರು. 34 ರನ್ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತಿದ್ದ ಪಾಂಡೆ ಚಹಾಲ್ ಬೌಲಿಂಗ್ ನಲ್ಲಿ ರಭಸದ ಆಟಕ್ಕೆ ಮುನ್ನುಗಿ ನವದೀಪ್ ಸೈನಿ ಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು. ಈ ಜೋಡಿ ಮೂರನೇ ವಿಕೆಟ್ 71 ರನ್ ಗಳ ಅಮೋಘ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ಆದರೆ ಚಾಹಲ್, ನವದೀಪ್ ಸೈನಿ ಹಾಗೂ ಶಿವಂ ದುಬೆ ಅವರ ಮಾರಕ ಬೌಲಿಂಗ್ ಗೆ ಸನ್ ರೈಸರ್ಸ್ ಹೈದರಾಬಾದ್ 19.4 ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 154 ರನ್ಗಳಿಸಳಷ್ಟೇ ಶಕ್ತವಾಯಿತು