ಕರ್ನಾಟ ರಾಜ್ಯ ಬಂದ” ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಾದ್ಯಂತ ಮುಂಜಾಗೃತಾ ಕ್ರಮಕ್ಕೆ ಪೊಲೀಸ್ ಆಯುಕ್ತರಿಂದ ಸೂಚನೆ

Share The News

ನಾಳೆ ದಿನಾಂಕ 28 ರಂದು ವಿವಿಧ ರೈತ ಸಂಘಟನೆಗಳು, ಕನ್ನಡ ಪರ ಹಾಗೂ ದಲಿತ ಸಂಘಟನೆಗಳು “ಕರ್ನಾಟಕ  ರಾಜ್ಯ ಬಂದ” ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್‍ರಿಂದ ಎಲ್ಲ ಸುರಕ್ಷತಾ ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇರುತ್ತದೆ. ಇದರೊಂದಿಗೆ ಕಾನೂನು ಬಾಹಿರ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ  ಕಾನೂನು ಕ್ರಮ ಜರುಗಿಸಲಾಗುವುದು. ಈ ಬಂದ ಹಿನ್ನೆಲೆಯಲ್ಲಿ ಸಂಘನೆಗಳು/ ಸಂಘಟಕರು ಮತ್ತು ಸಾರ್ವಜನಿಕರಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ.

ಯಾವುದೇ ವ್ಯಾಪಾರ ವಹಿವಾಟುಗಳನ್ನು ಒತ್ತಾಯ ಪೂರ್ವಕ ಬಂದ ಮಾಡಿಸಕೂಡದು.

ಸುಗಮ ಸಂಚಾರಕ್ಕೆ ಅಡೆತಡೆಯಾಗದಂತೆ ವಿಶೇಷವಾಗಿ ಅಂಬ್ಯುಲೆನ್ಸ, ಸಾರ್ವಜನಿಕ ಸಾರಿಗೆ, ಅಗ್ನಿಶಾಮಕ ವಾಹನ ಮತ್ತು ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಯಾವುದೇ ಅಡೆತಡೆ ಮಾಡತಕ್ಕದ್ದಲ್ಲ.

ಕೋವಿಡ್- 19 ನೇದ್ದರ ಕುರಿತು ಸರ್ಕಾರದಿಂದ ನೀಡಲಾದ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. (ಸಾನಿಟೈಜರ್ ಬಳಕೆ, ಮಾಸ್ಕ ಧರಿಸುವುದು & ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.)

ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಕಛೇರಿಗಳು ಕಾರ್ಯನಿರ್ವಹಿಸುವಲ್ಲಿ ಯಾವುದೇ ಅಡೆತಡೆ ಮಾಡಕೂಡದು.
ಸದರಿ ಸೂಚನೆಗಳನ್ನು ಪಾಲಿಸಲು ಕೋರಲಾಗಿದೆ ಹಾಗೂ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು


Share The News

Leave a Reply

Your email address will not be published. Required fields are marked *

error: Content is protected !!