ರಾಯಬಾಗ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿರುದ್ದ ತನಿಖೆಗೆ ಆದೇಶ.
ಬೆಳಗಾವಿ: ಕಡ್ಡಾಯ ನಿವೃತ್ತಿಯ ನಂತರವೂ ನೌಕರನ ಸೇವೆಯನ್ನು ಮುಂದುವರೆಸಿದಕ್ಕೆ ಬೆಂಗಳೂರಿನ ಪೌರಾಡಳಿತ ಜಂಟಿ ನಿರ್ದೆಶಕರು ರಾಯಬಾಗದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಜೀವ ಮಾಂಗ ವಿರೂದ್ದ ತನಿಖೆಗೆ ಆದೇಶಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಸಮುದಾಯ ಸಂಘಟಕ ಲಕ್ಷ್ಮೇಶ ಎಂಬುವರು ಶಹಪುರ ಪುರಸಭೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪೌರಾಡಳಿತ ನಿರ್ದೆಶನಾಲಯವು ಕಡ್ಡಾಯ ನಿವೃತ್ತಿಯ ಆದೇಶ ಮಾಡಿತ್ತು, ಆದರೆ ರಾಯಬಾಗದ ಮುಖ್ಯಾಧಿಕಾರಿ ಅವರನ್ನು ಅಕ್ರಮವಾಗಿ ಸೇವೆಯಲ್ಲಿ ಮುಂದುವರಿಸಿದ್ದರು. ಈ ಕುರಿತು ವಕೀಲ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪೌರಾಡಳಿತಕ್ಕೆ ದಾಖಲೆಗಳ ಸಮೇತ ಮುಖ್ಯಾಧಿಕಾರಿ ವಿರುದ್ದ ಕ್ರಮಕ್ಕಾಗಿ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಷ್ಕರಿಸಿದ ನಿರ್ದೇಶನಾಲಯ ಬೆಳಗಾವಿ ಯೋಜನಾಧೀಕಾರಿಗಳ ಮುಂದಾಳತ್ವದಲ್ಲಿ ತನಿಖೆ ಕೈಕೊಂಡು ಕೇವಲ ಒಂದು ವಾರದಲ್ಲಿ ಮಾಹಿತಿ ಸಮೇತ ನಿರ್ದೆಶನಾಲಯಕ್ಕೆ ಮುಟ್ಟಿಸಲು ಆದೇಶಿಸಿದೆ.
ಈ ಕುರಿತು ವಕೀಲ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಯವರು ನಾನು ಈಗಾಗಲೇ ಎಲ್ಲಾ ದಾಖಲೆಗಳನ್ನು ಮನವಿ ಜೊತೆ ಕೊಟ್ಟಿದ್ದರೂ ಮುಖ್ಯಧಿಕಾರಿಯನ್ನು ತಕ್ಷಣವೇ ಅಮಾನತ್ತು ಮಾಡದೇ ಮತ್ತೊಮ್ಮೆ ತನಿಖೆ ಮಾಡಿಸುತ್ತಿರುದವುದು ನೋಡಿದರೆ ಪ್ರಕರಣವನ್ನು ಮುಚ್ಚಿ ಹಾಕುವ ಲೆಕ್ಕಾಚಾರವೇ ಕಾಣುತ್ತಿದೆ ಎನ್ನುತ್ತಾರೆ, ಒಂದೊಮ್ಮೆ ಪ್ರಕರಣವನ್ನು ಮುಚ್ಚಿ ಹಾಕಿದಲ್ಲಿ ಇವರ ವಿರುದ್ಧ ನ್ಯಾಯಾಲಯದ ಮೊರೆ ಹೊಗುವದಾಗಿ ಎಚ್ಚರಿಸಿದ್ದಾರೆ.