ಬೆಳಗಾವಿ: ಅಕ್ರಮವಾಗಿ ಬಡಡಾವಣಗೆ ಅನುಮತಿ ನಿಡಿದ್ದಲ್ಲದೇ ಲಕ್ಷ ಲಕ್ಷ ರೂ. ಗಳ ಖಜಾನೆಗೆ ನಷ್ಟ ಮಾಡಿದ್ದಾರೆಂದು ಬೆಳಗಾವಿ ಜಿಲ್ಲೆಯ ಹಾರೂಗೇರಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಹಾಯಕ ಅಭಿಯಂತರರ ವಿರುದ್ದ ಕ್ರಮ ತಗೆದುಕೊಳ್ಳಬೇಕು ಎಂದು ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಆರೋಪಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳ ಪ್ರಕಾರ ಹಾರುಗೇರಿ ಪುರಸಭೆಯ ಅಧಿಕಾರಿಗಳು ಪುರಸಭೆಯ ವ್ಯಾಪ್ತಿಯಲ್ಲಿ ಎರಡು ಬಡಾವಣೆಗಳಲ್ಲಿ ಅನುಮತಿ ನೀಡಿದ್ದು ಅದರಲ್ಲಿ ಒಂದು ಬಡಾವಣೆಯನ್ನು ಅಕ್ರಮವಾಗಿ ಅನುಮೋದನೆ ನಿಡಿದ್ದಾರೆ. ಬಡಾವಣೆಗೆ ತಾಂತ್ರಿಕ ಮಂಜೂರಾತಿ ಪಡೆದಿರುವದಿಲ್ಲಾ ಮತ್ತು ರಿ ಸ ನಂಬರ್ 4/1ಅ/4&150/1ಅ/1ಅ ದಲ್ಲಿ 04 ಎಕರೆ 36 ಗುಂಟೆಗೆ ಬಡಾವಣೆಗೆ ಸಂಬಂದಿಸಿದಂತೆ, ಬಡಾವಣೆಯ ಕಾಮಗಾರಿಗಳ ಒಟ್ಟು ಶುಲ್ಕ 17.5% ರಂತೆ ಶುಲ್ಕ ವಸೂಲಿ ಮಾಡಬೇಕಾಗಿರುತ್ತದೆ. ಆದರೆ, ಇದರಲ್ಲಿ ಅಧಿಕಾರಿಗಳು ಕೇವಲ 9% ರಷ್ಟು ವಸೂಲಿ ಮಾಡಿದ್ದು ಇನ್ನೂ 14.24285-00 ಗಳನ್ನು ವಸೂಲಿ ಮಾಡದೇ ಖಜಾನೆಗೆ ನಷ್ಟ ಮಾಡಿದ್ದು ಅಲ್ಲದೇ ಸಕ್ಷಮ ಪ್ರಾಧಿಕಾರಿಯಿಂದ ಅನುಮೊದನೆ ಪಡೆಯದೇ ಅಕ್ರಮವಾಗಿ ಬಡಾಔನೆಯನ್ನುಅನುಮೊದನೆ ಮಾಡಿರುತ್ತಾರೆಂದು.ಆರೋಪಿಸಿದ್ದಾರೆ.
ಈ ಅಕ್ರಮದಲ್ಲಿ ಭಾಗಿಯಾದ ಪುರಸಭೆಯ ಮುಖ್ಯಾಧಿಕಾರಿ ಜಿ ವಿ ಹಣ್ಣಿಕೇರಿ, ಸಹಾಯಕ ಅಭಿಯಂತರರಾದ ಕೆ ಜಿ ಪೋಳ ಹಾಗೂ ಸಿದ್ರಾಮ ಚೌಗಲಾ ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತು ಮಾಡಡಬೇಕು ಎಂದು ಒತ್ತಾಯಿಸಿದ್ದರೆ.