ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿದೆ. ಮನೆ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಆ ಮಗು ಹುಟ್ಟಿನಿಂದಲೇ ಸಂತಸ.

Share The News

ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ?

ಎಲ್ಲರ ನಿರೀಕ್ಷೆಯಂತೆ ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿಗೆ ಗಂಡು ಮಗು ಜನಿಸಿದೆ. ಮನೆ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಸರ್ಜಾ ಕುಟುಂಬಕ್ಕೆ ಆ ಮಗು ಹುಟ್ಟಿನಿಂದಲೇ ಸಂತಸ ಹೊತ್ತು ತಂದಿದೆ. ಆದ್ರೆ ಮೇಘನಾಗೆ ಗಂಡು ಮಗು ಆಗುತ್ತೆ ಅಂತ ಸರ್ಜಾ ಕುಟುಂಬಕ್ಕೆ ಮೊದಲೇ ತಿಳಿದಿತ್ತೇ…….? ಇಂತಹದೊಂದು ಪ್ರಶ್ನೆಯೊಂದು ಈಗ ಚರ್ಚೆಯಾಗಿದೆ.

ಐದು ತಿಂಗಳ ಹಿಂದೆ ಚಿರು ಸರ್ಜಾ ಇನ್ನಿಲ್ಲ ಎಂಬ ಸುದ್ದಿ ತಿಳಿದ ಇಡೀ ಅಭಿಮಾನಿ ಬಳಗ ಶೋಕಸಾಗರದಲ್ಲಿ ಮುಳುಗಿತ್ತು. ಚಿರು ಇನ್ನು ನೆನಪು ಮಾತ್ರ ಎಂದು ಅಳುತ್ತಿದ್ದ ಸಮಯದಲ್ಲಿ ಮೇಘನಾ ರಾಜ್ ಹೊಟ್ಟೆಯಲ್ಲಿ ಚಿರು ಸರ್ಜಾ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎಂಬ ವಿಚಾರವೂ ಹೊರಬಿತ್ತು. ಮೇಘನಾ ಗರ್ಭಿಣಿ ಎನ್ನುವ ವಿಚಾರ ಅಲ್ಲಿಯವರೆಗೂ ಸರ್ಜಾ ಕುಟುಂಬಕ್ಕೆ ಬಿಟ್ಟು ಹೊರಗಡೆ ಯಾರಿಗೂ ಗೊತ್ತಿರಲಿಲ್ಲ.

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್

ಆ ಕ್ಷಣದಿಂದ ಹೆರಿಗೆ ಆಗುವವರೆಗೂ ಜೂನಿಯರ್ ಚಿರಂಜೀವಿ ಬರ್ತಾನೆ ಎಂದು ಕುಟುಂಬ, ಅಭಿಮಾನಿ ಬಳಗ ಕಾದು ಕುಂತಿತ್ತು. ನಿರೀಕ್ಷೆಯಂತೆ ಮೇಘನಾ ರಾಜ್‌ಗೆ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು ಸರ್ಜಾ ದಂಪತಿಗೆ ಗಂಡು ಮಗು ಆಗುತ್ತೆ ಎಂಬ ವಿಚಾರದ ಬಗ್ಗೆ ಬಲವಾಗಿ ನಂಬಿಕೆ ಹುಟ್ಟಿಸಿದ ಮೂರು ಪ್ರಮುಖ ಘಟನೆಗಳು ನೆನಪಿರಬಹುದು.

ಚಿರು ಸಾವಿನ ದಿನವೇ ತಾರಾ ಹೇಳಿದ್ದರು!
ಮೇಘನಾ ರಾಜ್ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮೇಘನಾ ಹೊಟ್ಟೆಯಲ್ಲಿ ಚಿರು ಸರ್ಜಾ ಮತ್ತೆ ಹುಟ್ಟಿ ಬರಲಿ ಎಂದು ಕೋಟ್ಯಾಂತರ ಅಭಿಮಾನಿಗಳಲ್ಲಿ ಆಸೆ ವ್ಯಕ್ತಪಡಿಸಿದ್ದರು. ಚಿರಂಜೀವಿ ಸರ್ಜಾ ವಿಧಿವಶರಾಗಿದ್ದ ದಿನವೇ ಹಿರಿಯ ನಟಿ ತಾರಾ ಇಂತಹದೊಂದು ನಂಬಿಕೆಯನ್ನು ಹೊರಹಾಕಿದ್ದರು. ‘ಮೇಘನಾ ರಾಜ್ ಹೊಟ್ಟೆಯಲ್ಲಿ ಪುಟ್ಟ ಚಿರಂಜೀವಿ ಮತ್ತೆ ಬರ್ತಿದ್ದಾನೆ’ ಎಂದು ಭಾವುಕರಾಗಿದ್ದರು.

ಅತ್ತಿಗೆಗೆ ಮಗು ಆಗಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದಂತೆ ಆಸ್ಪತ್ಪೆಗೆ ಬಂದ ಧ್ರುವ ಅಣ್ಣ ಮಗುವನ್ನು ಕೈಯಲ್ಲಿ ಹಿಡಿದು ಸಂತೋಷ ಪಟ್ಟಿದ್ದಾರೆ. ಬಹುದಿನಗಳ ಬಳಿಕ ಧ್ರುವ ಮುಖದಲ್ಲಿ ನಗು, ಸಂತಸ ನೋಡಿ ಅಭಿಮಾನಿಗಳ ಸಹ ಖುಷಿ ಪಡುತ್ತಿದ್ದಾರೆ. ಮನೆಗೆ ಮಗು ಆಗಮಿಸಿದ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಧ್ರುವ ಅಣ್ಣನ ಜೊತೆ ಇದ್ದ ಹಾಗೆ ಫೀಲ್ ಆಯ್ತು ಎಂದಿದ್ದಾರೆ.

ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ
ಮನೆಗೆ ಜೂ.ಚಿರು ಆಗಮಿಸಿದ ಬಗ್ಗೆ ನಟ ಧ್ರುವ ಸರ್ಜಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅಣ್ಣನಿಗೆ ಅತ್ತಿಗೆಗೆ ಗಂಡು ಮಗುವಾಗಿದೆ. ಅತ್ತಿಗೆ, ಮಗು ಇಬ್ಬರೂ ಸಹ ಆರಾಮಾಗಿದ್ದಾರೆ. ಎಲ್ಲರೂ ಅವರಿಗೆ ಆಶೀರ್ವಾದ ಮಾಡಬೇಕೆಂದು ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಖುಷಿ ಹೆಚ್ಚಾಗಿದ್ದರಿಂದ ಮಗುವನ್ನು ಕೈಯಲ್ಲಿ ಹಿಡಿದ ತಕ್ಷಣದ ಅನುಭವ ಹೇಗಾಯಿತು ಎಂದು ಹೇಳಲು ಸಾಧ್ಯವಾಗಲ್ಲ. ಆ ಫೀಲ್ ಗೊತ್ತಾಗಲಿಲ್ಲ ಎಂದು ಹೇಳಿದ್ದಾರೆ.

ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು
ಇನ್ನೂ ಬೆಳ್ಳಿ ತೊಟ್ಟಿಲು ಖರೀದಿಸಿದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಯಾರಿಗೂ ಗೊತ್ತಾಗಬಾರದು ಎಂದುಕೊಂಡಿದೆ. ಆದರೆ ಮಾಧ್ಯಮಗಳ ಮೂಲಕ ವೈರಲ್ ಆಯಿತು ಎಂದಿದ್ದಾರೆ. ಮಗುವನ್ನು ಮೊದಲು ಕೈಯಲ್ಲಿ ಹಿಡಿದಾಗ ನಮ್ಮಣ್ಣನ ಜೊತೆ ಇದ್ದ ಫೀಲ್ ಆಯ್ತು ಎಂದು ಸಂತಸ ವ್ಯಕ್ತಪಡಿಸಿದರು.

ಚಿರುಗೆ ರೇಗಿಸುತ್ತಿದ್ದ ವಿಚಾರ ಹಂಚಿಕೊಂಡ ಧ್ರುವ
ನಾನು ಅಣ್ಣನಿಗೆ ರೇಗಿಸುತ್ತಿದ್ದೆ, ಮಕ್ಕಳಾಗುತ್ತೆ ಎಲ್ಲಾ ಓಕೆ, ನಿನ್ನನ್ನು ಶಾಲೆಯಲ್ಲಿ ಫೋಷಕರ ಮೀಟಿಂಗ್ ಕರೆಯುತ್ತಾರಲ್ಲ. ಶಾಲೆಯಲ್ಲಿ ನಿನ್ನ ಮೇಲೆ ಹೆಚ್ಚು ದೂರುಗಳಿದ್ದವು. ಇನ್ನು ನಿನ್ನ ಮಕ್ಕಳದು ಬೇಜಾನ್ ಇರುತ್ತೆ ಮಚಾ ಎಂದಿದ್ದೆ. ಅವನು ನನಗೆ ಮಗಾನೇ ಆಗೋದು, ಅವನದ್ದು ಸಹ ಶಾಲೆಯಲ್ಲಿ ಬೇಜಾನ್ ದೂರುಗಳಿರುತ್ತವೆ ಎಂದು ಹೇಳಿದ್ದ ವಿಚಾರ ಈಗ ನೆನಪಾಗುತ್ತಿದೆ ಎಂದು ಧ್ರುವ ಹೇಳಿದ್ದಾರೆ.


Share The News

Leave a Reply

Your email address will not be published. Required fields are marked *

error: Content is protected !!