Share
ಮೂಡಲಗಿ: ಮಾಸ್ಕ್ ಇಲ್ಲದೆ ವಾಹನ ಮೇಲೆ ಸಂಚಾರ ಮಾಡುವ ಜನರಿಗೆ ದಂಡ ವಸೂಲಿ ಮಾಡುವ ಮೂಲಕ ಜನರಿಗೆ ಕಡಕ್ ಎಚ್ಚರಿಕೆ ನೀಡಿದ ಹೆಚ್ಚುವರಿ ಪಿಎಸ್ಐ ಕಿರಣ ಮೋಹಿತೆ.
ಕೊರೋನಾ ಮಹಾಮಾರಿ ಸಲುವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಮಾತು ಕಡ್ಡಾಯ ಮಾಡಿದರು ಕೂಡ ಜನರು ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿರುವುದರಿಂದ ದಂಡ ಹಾಕುವ ಮೂಲಕ ಕೊರೋನಾ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ.
ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಮಾಸ್ಕ್ ಇಲ್ಲದೆ ಹಾಗೂ ವಾಹನಗಳ ನಂಬರ್ ಪ್ಲೇಟ್ ಇಲ್ಲದೆ ಇರುವವರಿಗೆ ಬುದ್ಧಿವಾದ ಹೇಳುವ ಮೂಲಕ ದಂಡ ವಸೂಲಿ ಮಾಡಿದ್ದಾರೆ.
ಕಿರಿಯ ವಯಸ್ಸಿನ ಪಿಎಸ್ಐ: ಚಿಕ್ಕೋಡಿ ತಾಲೂಕಿನ ಸದಲಗಾದ ಗ್ರಾಮದ ನಿವಾಸಿಯಾದ ಸುರೇಶ ಮೊಹಿತೆ ಅವರ ಪುತ್ರ ಕಿರಣ 1991ರಲ್ಲಿ ಜನಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸದಲಗಾದಲ್ಲಿ ಮುಗಿಸಿ ಗೋಕಾಕ ನಲ್ಲಿ ಪಿಯುಸಿ ಮತ್ತು ಪದವಿ ಮುಗಿಸಿ, ಉನ್ನತ ಸರ್ಕಾರಿ ಹುದ್ದೆನಲ್ಲಿ ಸೇರಿ ಕೆಲಸ ಮಾಡಬೇಕು ಎಂದು ಚಲಾ ಹಿಡಿದು ಹಗಲು ಇರುಳು ಅಭ್ಯಾಸ ಮಾಡಿರುವ ಪ್ರತಿಫಲವಾಗಿ ಅವರಿಗೆ ಪಿಎಸ್ಐ ಹುದ್ದೆ ದೊರಕಿದೆ.
2016 ರಲ್ಲಿ ಪಿಎಸ್ಐ ಪರೀಕ್ಷೆ ಬರೆದು ಕರ್ನಾಟಕಕ್ಕೆ ಮೊದಲನೆಯ ಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಪಿಎಸ್ಐ ಆಯ್ಕೆಯಾಗಿ ಪೊಲೀಸ್ ತರಬೇತಿ ಕೇಂದ್ರ ಕಲಬುರಗಿ ನಲ್ಲಿ ತರಬೇತಿ ಮುಗಸಿ, ಧಾರವಾಡ ಜಿಲ್ಲೆಯಲ್ಲಿ ವೃತಿಪರ ಸೇವೆ ಮುಗಿಸಿ ಮೂಡಲಗಿಗೆ ಹೆಚ್ಚುವರಿ ಪಿಎಸ್ಐ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.