ಖ್ಯಾತ ಪತ್ರಕರ್ತ, ಅಂಕಣಕಾರ,ಅದ್ಭುತ ಭಾಷಣಕಾರ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕ #ರವಿ_ಬೆಳಗರೆ ಇನ್ನಿಲ್ಲ… ಅಸ್ತಂಗತರಾಗಿದ್ದಾರೆ.ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆಯವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬರವಣಿಗೆಯ ಸಂದರ್ಭದಲ್ಲಿ ನಿಧನರಾಗಿರುವುದು ಅತ್ಯಂತ ಶೋಚನೀಯ.
62 ವರ್ಷದ ರವಿ ಬೆಳಗೆರೆಯವರನ್ನು ಕೂಡಲೇ ಸ್ಥಳೀಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕರ್ನಾಟಕದ ಅನೇಕ ಪತ್ರಕರ್ತರು ಅವರ ಗರಡಿಯಲ್ಲಿ ಪಳಗಿದ ವರಾಗಿದ್ದಾರೆ.
ಕರಿಷ್ಮಾ ಹಿಲ್ಸ್ ನಲ್ಲಿರುವ ರವಿಬೆಳಗೆರೆ ನಿವಾಸಕ್ಕೆ ಪಾರ್ಥಿವ ಶರೀರವನ್ನು ಪ್ರಾರ್ಥನಾ ಸ್ಕೂಲ್ ಗ್ರೌಂಡ್ ನಲ್ಲಿ ರವಾನೆ ಮಾಡಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ಬಳ್ಳಾರಿಯ ಸತ್ಯ ನಾರಾಯಣ ಪೇಟೆಯಲ್ಲಿ ಜನಸಿದ್ದ ಬೆಳಗೆರೆ ಇತಿಹಾಸ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. 1995ರಲ್ಲಿ ಹಾಯ್ ಬೆಂಗಳೂರ್ ಪತ್ರಿಕೆ ಪ್ರಾರಂಭಿಸಿದರು. ಭೀಮಾ ತೀರದ ಹಂತಕರು, ಪಾಪಿಗಳ ಲೋಕದಲ್ಲಿ, ಪುಲ್ವಾಮಾ. ಹಲವಾರು ಪುಸ್ತಕ ಬೆರೆದಿರುವ ಇವರು ಕಾದಂಬರಿಗಾರ, ಕವಿ, .ಖಡಕ ಬರವಣಿಗೆ ಲೇಖನಗಳು.ಪುಸ್ತಕಗಳು ತಲೆ ಅಲ್ಲಾಡಿಸಿ ಮಾತನಾಡುವ ಆ ಮಾತುಗಳು ಪತ್ರಿಕೋದ್ಯಮ ಶೈಲಿ ಕವಿ ಎಂದೇ ಖ್ಯಾತಿ ಪಡೆದಿದ್ದರು.
ಪಾರ್ಥನಾ ಸ್ಕೂಲ್ ಮೂಲಕ ಅನೇಕರಿಗೆ ಉಚಿತ ಶಿಕ್ಷಣವನ್ನು ನೀಡಿದ ಕೀರ್ತಿ ರವಿ ಬೆಳಗೆರೆ ಅವರಿಗೆ ಸಲ್ಲುತ್ತದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅವರಿಗೆ ಮೊದಲ ಪತ್ನಿಯಿಂದ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಮತ್ತು ಎರಡನೇ ಪತ್ನಿಯಿಂದ ಒಬ್ಬ ಪುತ್ರನಿದ್ದು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಸಂಜೆ 4 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ.