ಅಕ್ಷರ ಮಾಂತ್ರಿಕ .ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಪತ್ರಕರ್ತರು ಹಾಗು ಸಂಘಟನೆ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಬೆಳಗಾವಿ : ರಾಯಬಾಗ ತಾಲೂಕಿನ ಪ್ರವಾಸಿ ಮಂದಿರದಲ್ಲಿ ರವಿ ಬೆಳಗೆರೆ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ದೀಪ ಬೆಳಗುವ ಮೂಲಕ ಭಕ್ತಿ ಪುರಕ ಶ್ರದ್ಧಾಂಜಲಿ ಸಲ್ಲಿಸಿದರು ರವಿ ಬೆಳೆಗೆರೆ ಯವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು .ಹಿರಿಯ ಮುಖಂಡ ಮಹಾವೀರ ಸಾನೇ ಹಾಗು ತ್ಯಾಗರಾಜ ಕದಂಬ.ಸುರೇಶ ಐಹೊಳೆ.ಅಪಾಸಬ ಕುರಣಿ ಮಾತನಾಡಿ ಪತ್ರಿಕೋದ್ಯಮ ಮಾತ್ರವಲ್ಲದೆ ಸೀನಿಮಾ ಕ್ಷೇತ್ರದ ಜೊತೆಗೂ ರವಿ ಬೆಳೆಗೆರೆ ರವಿ ಬೆಳಗೆರೆ ನಂಟು ಇತ್ತು .ಸಿನಿಮಾ ಸೆಲೆಬ್ರಿಟಿಗಳೊಂದಿಗೆ ಅವರು ಒಡನಾಟ ಹೊಂದಿದ್ದರು. ತಮ್ಮ ನೇರ-ನಿಷ್ಠುರ ಬರಹಗಳ ಮೂಲಕ ಚಿತ್ರರಂಗದ ಕೆಲವರ ವಿರೋಧವನ್ನೂ ಅವರು ಕಟ್ಟಿಕೊಳ್ಳಬೇಕಾಯಿತು. ಅದೇನೇ ಇರಲಿ, ಅವರ ಬರಹಗಳಿಗೆ ಮರುಳಾಗ ದವರಿಲ್ಲ. ಪತ್ರಿಕಾ ರಂಗದಲ್ಲಿ ಕ್ರಾಂತಿ ಯನ್ನೆ ಮಾಡಿದ್ದರು. ಟಿವಿ,ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು, ಅವರ ನಿಧನ ಅಪಾರ ನಷ್ಟ ಎಂದು ನಿಧನರಾದ ರವಿ ಬೆಳಗೆರೆ ಅವರಿಗೆ ನುಡಿ ನಮನ ಸಲ್ಲಿಸಿದರು.ಕರ್ನಾಟಕ ಅಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲಿ ಇಂದು ವಾರ ಪತ್ರಿಕೆಗೆ ಹೆಸರು ತಂದು ಕೊಟ್ಟವರು ರವಿ ಬೆಳೆಗೆರೆ ಜನಪರ ಕೆಲಸದಲ್ಲಿ ಬಹಳ ಸೇವೆ ಸಲ್ಲಿಸಿದ್ದಾರೆ.ಅವರು ನಮ್ಮನ್ನು ಬಿಟ್ಟು ಹೋದರು ಸದಾ ಅವರು ನಮ್ಮೊಂದಿಗೆ ಇರುತ್ತಾರೆ ಹಾಗು ಅವರ ಕುಟುಂಭಕ್ಕೆ ಆ ಬಗವಂತ ಶಕ್ತಿ ನೀಡಲಿ ಎಂದು ಹೇಳಿದರು.
’
ಅಪಾಸಬ ಕುರಣಿ. ತ್ಯಾಗರಾಜ ಕದಂಬ. ಪರಶುರಾಮ ಟೋಣಪೇ. ದೇವಾನಂದ ದೋಡಮನಿ. ಈಶ್ವರ ಗುಡಜ. ಗಜಾನನ ಮಾಂಗ.ಯಲ್ಲಪ್ಪ ಧಾವನೇ. ಸುರೇಶ ಐಹೊಳೆ. ಸಾಗರ ಜೇ0ಡೇನವರ.ಅನಿಲ ಮೋಹೀತೆ. ಗಜಾನನ ಕೋಕಟೇ.ಸಚಿನ ಸೋನೋವನೇ .ಮತ್ತಿತರರು ಭಾಗವಹಿಸಿದ್ದರು….