*ಗೋಕಾಕ ಫಾಲ್ಸ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ*

Share The News

ಗೋಕಾಕ್ ಫಾಲ್ಸ್ ಬಳಿ ನವಜಾತ ಗಂಡು ಶಿಸುವೊಂದು ಪತ್ತೆಯಾಗಿದೆ.

ಗೋಕಾಕ ಫಾಲ್ಸ್ ಸಮೀಪದ ರಸ್ತೆ ಪಕ್ಕದಲ್ಲಿ ಅಂದಾಜು 3 ದಿನದ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಲಾಗಿದೆ. ನವ್ಹೆಂಬರ್ 26 ರಂದು, ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶಿಶು ಪತ್ತೆಯಾಗಿದೆ.

ಶಿಶುವನ್ನು ಸ್ಥಳಿಯ ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿ ರಕ್ಷಣೆ ಮಾಡಿ ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಸದ್ಯ ಶಿಶು ಚಿಕಿತ್ಸೆ ಪಡೆಯುತ್ತಿದೆ.

ಮಗುವಿನ  ಪಾಲಕರು ಇದ್ದಲ್ಲಿ ದೂರವಾಣಿ ಸಂಖ್ಯೆ 0831-2474111 ಯನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರವೀಂದ್ರ ರತ್ನಾಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share The News

Leave a Reply

Your email address will not be published. Required fields are marked *

error: Content is protected !!