*ಅದ್ದೂರಿ ಸ್ವಾಗತದ ಹಿಂದೆ, ಕುರಿ ಕಡಿಯುವ ತಂತ್ರ .!?*

Share The News

ಅದ್ದೂರಿ ಸ್ವಾಗತದ ಹಿಂದೆ, ಕುರಿ ಕಡಿಯುವ ತಂತ್ರ .!?

ಇತ್ತೀಚಿನ ದಿನದಲ್ಲಿ ಸರ್ಕಾರಿ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗಳಿಗೆ ಸ್ವಾಗತ ಕೋರಿ ಬರಮಾಡಿಕೊಳ್ಳುವುದು ಆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಇತರ ಸಿಬ್ಬಂದಿಗಳ ಶಿಷ್ಟಾಚಾರ ಹಾಗೂ ಅವರ ಕರ್ತವ್ಯ .

ಆದರೆ ಇದೇ ನೆಪವನ್ನಿಟ್ಟುಕೊಂಡು ಇತರೆ ಸಂಬಂಧವಿಲ್ಲದವರು ಅವರನ್ನು ಸ್ವಾಗತಿಸುವುದನ್ನು ನೋಡಿದರೆ ಎಲ್ಲೋ ಒಂದುಕಡೆ ‘ಕುರಿ ಕಡಿಯುವ ತಂತ್ರ’ ನೆನಪಿಗೆ ಬರುತ್ತದೆ.

ಕುರಿಯ ಮಾಲಿಕ ಕುರಿಯನ್ನು ಪ್ರತಿದಿನ ಇತರ ಮೇವುಗಳ ಮೂಲಕ ಕೊಬ್ಬಿಸುತ್ತಾನೆ,ಅವನ ಕೊಬ್ಬಿಸುವಿಕೆಯ ಹಿಂದೆ ನನ್ನನ್ನು ಕಡಿಯುವ ತಂತ್ರ ಅಡಗಿದೆ ಎಂದು ಆ ಕುರಿಗೆ ಗೊತ್ತಿರುವುದಿಲ್ಲ .ಹಾಗೆಯೇ ಸರ್ಕಾರಿ ಅಧಿಕಾರಿಗಳನ್ನು ಸ್ವಾಗತಿಸುವ ನೆಪದಲ್ಲಿ ಬರುವ ಸಂಬಂಧವಿಲ್ಲದವರ ಹಿಂದೆಯೂ ಇದೇ ತರದ ತಂತ್ರ ಅಡಗಿರುತ್ತದೆ.

ಅಧಿಕಾರಿಗಳೇ ಇತರ ನೌಕರರೇ ನೀವು ಸರ್ಕಾರಿ ಕೆಲಸವನ್ನು ಪಡೆಯುವ ಸಂದರ್ಭದಲ್ಲಿ ಸಂಬಂಧಿಸಿದ ಕಾನೂನು ಸಂವಿಧಾನವನ್ನು ಓದಿಕೊಂಡು, ತಿಳಿದುಕೊಂಡು ಆ ಹುದ್ದೆಯನ್ನು ಪಡೆದಿರುತ್ತೀರ ಈ ರೀತಿಯ ಸಂಬಂಧವಿಲ್ಲದವರ ಮಾತುಗಳಿಗೆ,ಸನ್ಮಾನಗಳಿಗೆ, ಸ್ವಾಗತಗಳಿಗೆ.ಮೈ ಮರೆತರೆ ಮುಂದೆ ಕುರಿಗೆ ಆಗುವ ಗತಿಯೇ ನಿಮಗೂ ಆಗಬಹುದು.ಯಾವುದಕ್ಕೂ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ,ಎಚ್ಚರವಾಗಿ ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ತೋರಿ.ಆಗ ಜನಸಾಮಾನ್ಯರೇ ನಿಮ್ಮನ್ನು ಹೊಗಳುತ್ತಾರೆ, ಸನ್ಮಾನಿಸುತ್ತಾರೆ, ಸ್ವಾಗತಿಸುತ್ತಾರೆ.

ಜನಸಾಮಾನ್ಯರ ಸ್ವಾಗತ, ಸನ್ಮಾನ,ಹೊಗಳಿಕೆಯ ಮಾತುಗಳ ಮುಂದೆ ಸಂಬಂಧವಿಲ್ಲದವರ ಹೊಗಳಿಕೆಗಳು ನಗಣ್ಯ ಎಂಬ ಸತ್ಯವನ್ನು ಅರಿತುಕೊಂಡು ನಡೆಯಿರಿ ಎಂಬುದು ನಮ್ಮ ಪತ್ರಿಕೆಯ ಆಶಯವಾಗಿದೆ

ವರದಿ :ಪ್ರಕಾಶ ಮಂದಾರ


Share The News

Leave a Reply

Your email address will not be published. Required fields are marked *

error: Content is protected !!