*ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯಿಂದ ತಾಲೂಕಾ ನೂತನ ಘಟಕವನ್ನು ಉದ್ಘಾಟನಾ ಕಾರ್ಯಕ್ರಮ ಚಿಕ್ಕೋಡಿಯಲ್ಲಿ ನಡೆಯಿತು*

Share The News

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಚಿಕ್ಕೋಡಿ ತಾಲೂಕಾ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಪ್ರವಾಸಿ ಮಂದಿರದಲ್ಲಿ ನಡೆಯಿತು

ಡಿಎಸ್ಎಸ್ ಭೀಮವಾದ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಾರ್ಥ ಸಿಂಗೆಯವರು ಡಾ.ಬಿ.ಆರ ಅಂಬೇಡ್ಕರ ಅವರ ಪ್ರತಿಮೆಗೆ ಹೂ ಮಾಲೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬುದ್ಧ ಬಸವ ಬಾಬಾಸಾಹೇಬ ಅಂಬೇಡ್ಕರರ ವಿಚಾರಗಳನ್ನು ಜನಮಾನಸದಲ್ಲಿ ಪಸರಿಸುವ ಕಾರ್ಯ ಭೀಮವಾದ ಮಾಡುತ್ತಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ದಲಿತ ಗುತ್ತಿಗೆದಾರರಿಗೆ ಅಧಿಕಾರಿಗಳು ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದು ದಲಿತರ ಕೋಟಾದಲ್ಲಿನ ಕಾಮಗಾರಿಗಳನ್ನು ಪ್ಯಾಕೇಜ್ ಮುಖಾಂತರ ಉಳ್ಳವರು ಪಡೆದುಕೊಳ್ಳುತ್ತಿದ್ದಾರೆ ಈ ವ್ಯವಸ್ಥೆಯ ವಿರುದ್ಧ ಡಿಎಸ್ಎಸ್ ಭೀಮವಾದ ವತಿಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸಂಜೀವ ಕಾಂಬಳೆ ಮಾತನಾಡಿ ಇಂದು ಶ್ರೇಣಿಕೃತ ಮನುವಾದಿ ವ್ಯವಸ್ಥೆಯನ್ನು ಪ್ರಭಲವಾಗಿಸಿ ಸಂವಿಧಾನ ನಾಶ ಮಾಡುವ ಹುನ್ನಾರದ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕಾಗಿದೆ ಸಂವಿಧಾನ ಉಳಿದರೆ ದೇಶ ಉಳಿಯುವುದು ಈ ಕಾರಣಕ್ಕಾಗಿ ದೇಶದ ಉಳಿವಿಗಾಗಿ ನಾವು ಸಂವಿಧಾನದ ರಕ್ಷಣೆಯನ್ನು ಮಾಡುವ ಫಣ ತೊಡಬೇಕಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪರಶುರಾಮ ಟೋಣಪೆ, ರಾಘವೇಂದ್ರ ಸಿಂಪಿ, ರಾಯಬಾಗ ತಾಲೂಕಾ ಸಂಚಾಲಕ ಕೃಷ್ಣಾ ಗಸ್ತೆ, ಈರಪ್ಪ ಕಾಂಬಳೆ,,ಸಚೀನ ಸೋನಾವಣೆ, ಮಹಾದೇವ ಈಟೇಕರ ಪಂಡಿತ್ ಕಾಂಬಳೆ ಪುರಸಭೆ ಸದಸ್ಯ ವಿನೋದ ಮಾಳಗೆ ಮುಂತಾದವರು ಭಾಗವಹಿಸಿದ್ದರು.

ಚಿಕ್ಕೋಡಿ ತಾಲೂಕಾ ಸಮೀತಿಯ ಸಂಚಾಲಕರಾಗಿ ಮುತ್ತು ರಾಯಣ್ಣವರ, ಸಂಘಟನಾ ಸಂಚಾಲಕರಾಗಿ ದುರ್ಗಾ ಮೇತ್ರಿ,ಚೇತನಾ ಹೊನ್ನಗೋಳ, ಮಹಾವೀರ ಭಜಂತ್ರಿ, ಆನಂದ ಕಾಂಬಳೆ ಹಾಗೂ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಶಶಿಕಾಂತ ಕಾಂಬಳೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಎಂದು ರಾಜ್ಯ ಸಮಿತಿ ಸದಸ್ಯರಾದ ಸಿದ್ಧಾರ್ಥ ಸಿಂಗೆಯವರು ತಿಳಿಸಿದರು.


Share The News

Leave a Reply

Your email address will not be published. Required fields are marked *

error: Content is protected !!