ಹುಕ್ಕೇರಿ: ಹುಕ್ಕೇರಿ ತಾಲ್ಲೂಕಿನಲ್ಲಿ ಸುಮಾರು ಗ್ರಾಮಗಳಲ್ಲಿ ಅಕ್ರಮ ಅಕ್ಕಿ ಸಾಗಾಟನೇ ಮಾಡುವುದು ಕಂಡು ಬಂದರು ಯಾವದೇ ರೀತಿಯ ಕ್ರಮ ಕೈಗೊಳ್ಳದೆ ಅಕ್ರಮ ಅಂಗಡಿಯ ಮಾಲೀಕರ ಬೆನ್ನ ಹಿಂದೆ ನಿಂತು ಕೊಂಡರಾ ಹುಕ್ಕೇರಿ ಆಹಾರ ಇಲಾಖೆ ಅಧಿಕಾರಿಗಳು ಎಂದು ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದೆ.
ಬಾಗೇವಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಮಾಹಿತಿ ಬಂದಿದ್ದು ನಾವು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು ನಂದು ಸ್ವಲ್ಪ ಕೆಲಸ ಇದೆ ನಾನು ಸುಮಾರು 2 ಘಂಟೆ ಬಿಟ್ಟು ಬರ್ತಿನಿ ತನಿಖೆ ಮಾಡೋನ ಬನ್ನಿ ಅಂತಾರೆ ಮುಂಜಾನೆ ನಾವು ತನಿಖೆಗೆ ಹೋದರೆ ಅಲ್ಲಿ ಅಕ್ಕಿ ಮಾಯವಾಗೀದ್ದವು ಎಲ್ಲಿ ಇದೆ ರಿ ಅಕ್ಕಿ ಅಂತಾ ಪ್ರಶ್ನೆ ಮಾಡುವ ಅಧಿಕಾರಿಗಳು ಹಾಗು ಅಲ್ಲಿ ಬೇಟಿ ನೀಡಿದಾಗ ಸ್ವಲ್ಪ ಅಲ್ಲಿ ಸುಮಾರು ಕಡೆ ಅಕ್ಕಿ ಬಿದ್ದರು ಅವರ ಮೇಲೆ ಯಾವದೇ ಕ್ರಮ ಕೈಗೊಳ್ಳದೆ ಕೆಲಸದ ಮೇಲೆ ಬೇಜವಾಬ್ದಾರಿ ತೋರುತ್ತಿರುವ ಆಹಾರ ಇಲಾಖೆ ಅಧಿಕಾರಿಗಳು.
ಹುಕ್ಕೇರಿ ತಾಲೂಕಿನಲ್ಲಿ ಕೆಲವೊಂದು ಗ್ರಾಮಗಳಲ್ಲಿ ಹುಕ್ಕೇರಿ ಲೋಕಲ ಹಾಗು ಯಾದಗುಡ ಗ್ರಾಮಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಅಂಗಡಿಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕಾಗಿದೆ ಎಷ್ಟೇ ವರದಿ ಮಾಡಿದರು ಹುಕ್ಕೇರಿ ಫುಡ್ ಇನ್ಸ್ಪೆಕ್ಟರ್ ಲೋಕೇಶ್ ಡಂಗೆ ಅಕ್ರಮ ಅಕ್ಕಿ ಗೊಡಾವನಗಳ ಮೇಲೆ ಕ್ರಮ ಕೈಗೊಳ್ಳದೆ ರಾಜ್ಯದಲ್ಲಿ ಹಸಿವು ಮುಕ್ತ ಕರ್ನಾಟಕ ಮಾಡಲು ಸರ್ಕಾರ ಹರಸಾಹಸ ಪಡುತ್ತಿದೆ ಆದರೆ ಹುಕ್ಕೇರಿ ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಟ ಹೆಚ್ಚಾಗಿದ್ದು.
ಹಾಗೆ ಅಕ್ರಮ ಅಕ್ಕಿ ಗೋಡಾವನಗಳಿದ್ದು ಇನ್ಸ್ಪೆಕ್ಟರ್ ಆಹಾರ ಇಲಾಖೆಯ ಅಧಿಕಾರಿ ಲೋಕೇಶ್ ಡಂಗೆ ಇವರು ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ ಮೂರು ಮತ್ತೊಂದು ನಾಲ್ಕು ಅಂದ ಹಾಗೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ತಮ್ಮ ಕುರ್ಚಿ ಭದ್ರಪಡಿಸಿಕೊಂಡು ತಮ್ಮ ಕಚೇರಿಯಲ್ಲಿ ಕಾಲ ಹರಣ ಮಾಡಿ ಮನೆಗೆ ಹೋಗುವದಷ್ಟೇ ಕೆಲಸ ಅಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಎಷ್ಟು ಅಕ್ರಮ ದಾಬಾಗಳು ರಾರಾಜಿಸುತ್ತಿವೆ. ಅಲ್ಲಿ ಅಡುಗೆ ಮನೆ ನೋಡಿದರೆ ಸಾಕು ದೊಡ್ಡ ಗಲೀಜು ವಾತಾವರಣ ಊಟ ಮಾಡಿದರೆ ಇನ್ಫೆಕ್ಷನ್ ಆಗಿ ಆಹಾರ ಪಚನವಾಗದೆ. ರೋಗಿಗಳಾಗುತ್ತಿದ್ದಾರೆ. ಹಾಗಾಗಿ ಅಂತಹ ಅಕ್ರಮ ಧಾಬಾ ಮತ್ತು ಕಲಬೆರೆಕೆ ಆಹಾರ ಮೇಲೆ ನಿಗಾ ಇಡಬೇಕು. ಇನ್ನು ಅಕ್ರಮ ಅಕ್ಕಿ ಗೊಡಾವನಗಳ ಮೇಲೆ ಕಾನೂನಿನ ಸೂಕ್ತ ಕ್ರಮ ತೆಗೆದೆಕೊಂಡು ಕೇಸ್ ದಾಖಲಿಸದೆ ಸುಮ್ಮನಾಗುತ್ತ್ತಿದ್ದರೆ.
ಇನ್ನಾದರು ಅಕ್ರಮ ಅಕ್ಕಿ ಗೊಡಾವನಗಳ ಮೇಲೆ ಕಾನೂನಿನ ಸೂಕ್ತ ಕ್ರಮ ತೆಗೆದೆಕೊಂಡು ಕೇಸ್ ದಾಖಲಿಸದೆ ಸುಮ್ಮನಾಗುತ್ತ್ತಿದ್ದರೆ ಹುಕ್ಕೇರಿ ಆಹಾರ ಇಲಾಖೆ ಅಧಿಕಾರಿಗಳನ್ನು ಯಾರು ಕೇಳುವವರು ಇಲ್ಲವೇ ಎಂದು ಪ್ರಶ್ನೆ ಉದ್ಬವವಾಗುತ್ತಿದೆ.ಅಕ್ರಮ ಅಕ್ಕಿ ಮಾರಾಟ ಹುಕ್ಕೇರಿಯಿಂದ ಮಹಾರಾಷ್ಟ್ರ ಗುಜರಾತ ಬಾಗಲಕೋಟ ಇನ್ನು ಬೇರೆ ಬೇರೆ ರಾಜ್ಯಗಳಿಗೆ ಸಾಗಾಟ ಮಾಡುತ್ತಿದ್ದು.
ತಾಲೂಕ ತಹಸೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಇತ್ ಕಡೆ ಗಂಭೀರವಾಗಿ ಗಮನ ಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.