ಬೆಳಗಾವಿ-ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ನೂರಾರು ಸಂಖ್ಯೆಯಲ್ಲಿ ಭಕ್ತವೃಂದ ಸೇರಿ ವಿಶೇಷ ಪೂಜೆ ನೆರವೇರಿಸುವ ಘಟನೆ ಕರದಂಟಿನ ನಗರಿ ಗೋಕಾಕಿನಲ್ಲಿ ನಡೆದಿದೆ.
ಗೋಕಾಕ್‌ನ ಬಣಗಾರ ಗಲ್ಲಿಯಲ್ಲಿನ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗ ಮೂರ್ತಿ ಕಣ್ಣು ತೆರೆದಿದೆ ಎಂದು ಭಕ್ತರು ಸೇರಿದ್ದಾರೆ.
ಕಲ್ಲಿನ ಶಿವಲಿಂಗ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎಂದು ಅರ್ಚಕ, ಭಕ್ತರು ಹೇಳುತ್ತಿದ್ದು,ಇದನ್ನ ನೋಡಲು ಶಂಕರಲಿಂಗ ದೇವಸ್ಥಾನಕ್ಕೆ ತಂಡೋಪತಂಡವಾಗಿ ಭಕ್ತರು ಬರುತ್ತಿದ್ದಾರೆ.
2004 ರಲ್ಲಿ ಕೊಡ ಇದೆ ರೀತಿಯ ಶಿವಲಿಂಗ ಕಣ್ಣು ಬಿಟ್ಟಿತ್ತು ಎಂದು ದೇವಸ್ಥಾನದ ಅರ್ಚಕರು ಹೇಳುತ್ತಿದ್ದಾರೆ
ಇಂದು ರಾತ್ರಿ ಸಂಕಷ್ಟಿ ಚಂದ್ರೋದಯ ಸಮಯದಲ್ಲಿ ಕಲ್ಲಿನ ಮೂರ್ತಿಯಲ್ಲಿ ಕಣ್ಣು ಮೂಡಿದೆ ಎನ್ನುತ್ತಿರುವ ಭಕ್ತರು,ಇದು ಶುಭಸಂದೇಶವಾಗಿದ್ದು ಜಗತ್ತಿನಲ್ಲಿರುವ ರೋಗರುಜಿನ ಹೋಗುತ್ತೆ ಎನ್ನುತ್ತಾರೆ ಅರ್ಚಕರು.