*ಮಾರಣಾಂತಿಕ ಹಲ್ಲೆ ಮಾಡಿಸಿಕೊಂಡ ಬಲಿಪಶು FIR ಮಾಡಿ ಸಹ ನ್ಯಾಯಕ್ಕಾಗಿ ಪರದಾಡುತ್ತಿರುವ ಪ್ರವೀಣ ಮಹಾವೀರ ಚೌಗಲೆ*
ಕಾಗವಾಡ : ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ರಹವಾಸಿಯಾದ ಪ್ರವೀಣ ಮಹಾವೀರ ಚೌಗಲೆ ಇವರು ಕೆಲವು ದಿನಗಳ ಹಿಂದೆ ತನ್ನ ಅಣ್ಣನಾದ ಪ್ರಕಾಶ ಮಹಾವೀರ ಚೌಗಲೆ ಇಂದ ಕ್ಷುಲ್ಲಕ ಕಾರಣದಿಂದ ರಾತ್ರಿಯ ಸಮಯ ಸ್ವಂತ ತನ್ನ ಅಣ್ಣನಿಂದ ಹಾಗೂ ಅಣ್ಣನ ಬೆಂಬಲಿಗರಾದ ಪಾರೇಶ ಸುರೇಶ ಕವಟಗಿ ಇಬ್ಬರು ಸೇರಿ ಶಸ್ತ್ರಾಸ್ತ್ರದಿಂದ ಅಮಾಯಕ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆಯ ಪರಿಣಾಮ ಎಡಗೈ ಮುರಿದುಕೊಂಡು , ಎಡಗಡೆ ಎದೆಯ ಮೇಲೆ ಗಂಭೀರವಾಗಿ ಗಾಯವಾದ ಕಾರಣ , ಆಸ್ಪತ್ರೆಗೆ ದಾಖಲಾಗಿ ಇಗಷ್ಟೇ ಸ್ವಲ್ಪ ಚೇತರಿಕೆಯಾಗಿ ಆರೋಪಿಗಳ ವಿರುದ್ದ FIR ಮಾಡಿದ್ದರು ಯಾವುದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾರದ ಕಾರಣ ನ್ಯಾಯಕ್ಕಾಗಿ ಪರದಾಡುವ ಪರಿಸ್ಥಿತಿ ಉದ್ಭವ ಅಗಿದೆ. ಈ ಮುಂಚೆ ಅಣ್ಣನಾದ ಪ್ರಕಾಶ ಮಹಾವೀರ ಚೌಗಲೆ ಮೊದನೆಯ ಬಾರಿ ಹಲ್ಲೆ ಮಾಡಿದ್ದ ಅವಾಗಲು FIR ದರ್ಜು ಮಾಡಿದ್ದರು ಸ್ಥಳಿಯ ರಾಜಕೀಯ ಕೈವಾಡ ಇರುವದರಿಂದ ಈ ಬಾರಿಯು ಗಂಭಿರವಾಗಿ ಮಾರಣಾಂತಿಕ ಹಲ್ಲೆಯಾದರು ಆರೋಪಿಗಳ ವಿರುದ್ಧ FIR ದಾಖಲಾದರು ಕಾನೂನಾತ್ಮಕವಾಗಿ PSI ಅವರು ಯಾವುದೇ ಸರಿಯಾದ ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತಿಲ್ಲವೆಂದು ಹಾಗೂ ಮುಂದೆ ಸಹ ನನ್ನ ಕೋಲೆ ಆಗಬಹುದೆಂದು ತನ್ನ ಜೀವ ರಕ್ಷಣೆಗಾಗಿ ಬಲಿಪಶುವಾದ ಪ್ರವೀಣ ಮಹಾವೀರ ಚೌಗಲೆ ಬೆಳಗಾವಿಯ SP ಕಛೇರಿಗೆ ಬೇಟಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಹಾಗೂ ನನಗೆ ಪೋಲಿಸ ಇಲಾಖೆಯವರು ಆದಷ್ಟು ಬೇಗ ಆರೋಪಿಗಳಾದ ಪ್ರಕಾಶ ಮಹಾವೀರ ಚೌಗಲೆ ಮತ್ತು ಆತನ ಬೆಂಬಲಿತ ಪಾರೇಶ ಸುರೇಶ ಕವಟಗಿ ಅನ್ನು ಬೇಗ ಬಂಧಿಸಿ ನನ್ನ ಜೀವ ರಕ್ಷಣೆ ಮಾಡಿಕೊಡಬೇಕು ಹಾಗೆ ನನಗೆ ನ್ಯಾಯ ದೋರಿಕಿಸಿ ಕೊಡಬೆಕೆಂದಯ ಮಾಧ್ಯಮಗಳ ಮುಖಾಂತರ ಕೇಳಿಕೊಂಡಿದ್ದಾರೆ.