ಬೆಳಗಾವಿ :ಯುವರತ್ನ ಚಿತ್ರ ತಂಡ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆ ಪವರ್ ಸ್ಟಾರ್ ನೋಡಲು ಅಭಿಮಾನಿಗಳು ಉತ್ಸಾಹ ತೋರಿದರು. ಕನ್ನಡ ಬಾವುಟ, ಪುನೀತ್ ರಾಜಕುಮಾರ್ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದರು.
ಯುವರತ್ನ ಚಿತ್ರದ ಪ್ರಮೋಷನ್ ಹವಾ ಹಿನ್ನೆಲೆಯಲ್ಲಿ ಯುವರತ್ನ ಚಿತ್ರ ತಂಡ ಬೆಳಗಾವಿಗೆ ಆಗಮಿಸಿದೆ. ಕುಂದಾನಗರಿ ಬೆಳಗಾವಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕ್ರೇಜ್ ಮುಗಿಲು ಮುಟ್ಟಿದೆ. ಪವರ್ ಸ್ಟಾರ್ ನೋಡಲು ಅಭಿಮಾನಿಗಳ ಕಾತುರದಿಂದ ಕಾದರು. ಐನಾಕ್ಸ್ ಚಿತ್ರಮಂದಿರ ಆವರಣದಲ್ಲಿ ಪುನೀತ್ ಅಭಿಮಾನಿಗಳು ಡಾನ್ಸ್ ಮಾಡಿದರು. ಕನ್ನಡ ಬಾವುಟ, ಪುನೀತ್ ರಾಜಕುಮಾರ್ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದರು.