*ಏನಿದು ಪಿಂಕ್ ವಾಟ್ಸಾಪ್ ? : ಮೊಬೈಲ್​ ಬಳಕೆದಾರರೇ ಎಚ್ಚರ!*

Share The News

ನವದೆಹಲಿ:ಇತ್ತೀಚೆಗೆ ವಾಟ್ಸಾಪ್​ನಲ್ಲಿ ನೀವೆಲ್ಲರೂ ಭಾರೀ ಕಿರಿ ಕಿರಿ ಅನುಭವಿಸುತ್ತಿರಬಹುದು.  ಕಾರಣ ಏನೆಂದರೆ ಪಿಂಕ್​ ಮೆಸೆಜ್​.

ಹೌದು, ವಾಟ್ಸಾಪ್‌ ಇದೀಗ ಹೊಸ ಮಾದರಿಯಲ್ಲಿ ಬಂದಿದೆ. ಪಿಂಕ್‌ ಬಣ್ಣದಲ್ಲಿರುವ ಈ ಸೌಲಭ್ಯವನ್ನು ನೋಡಲು ಈ ಕೆಳಗಿನ ಲಿಂಕ್‌ ಒತ್ತಿ ಎಂಬ ವಾಟ್ಸಾಪ್‌ ಸಂದೇಶವೊಂದು ದೇಶಾದ್ಯಂತ ವಾಟ್ಸಾಪ್‌ ಬಳಕೆದಾರರಿಗೆ ಭಾರೀ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಆದರೆ ಈ ಬಗ್ಗೆ ಎಚ್ಚರ ಕಡ್ಡಾಯ.

ಇದು ವಾಟ್ಸಾಪ್‌ ಕಂಪನಿಯ ಅಧಿಕೃತ ಲಿಂಕ್‌ ಅಲ್ಲ. ಯಾರೋ ಕಿಡಿಗೇಡಿಗಳು ವಾಟ್ಸಾಪ್‌ ಬಳಕೆದಾರರ ಮಾಹಿತಿ ಕದಿಯಲು ಹ್ಯಾಕರ್‌ಗಳು ಹರಿಯಬಿಟ್ಟಿರುವ ವೈರಸ್‌ ಆಗಿದೆ. ಈ ಹಿನ್ನೆಲೆ ಲಿಂಕ್‌ ಅನ್ನು ಒತ್ತಬೇಡಿ ಎಂದು ಸೈಬರ್‌ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಪ್ರಮುಖ ವಿಷಯ ಎಂದರೆ ಬಳಕೆದಾರರು ಈ ಲಿಂಕ್‌ ಕೊಂಡಿಯನ್ನು ಒತ್ತಿದಾಕ್ಷಣ ಅವರ ವಾಟ್ಸಾಪ್‌ನಲ್ಲಿರುವ ಎಲ್ಲಾ ನಂಬರ್‌ಗಳಿಗೂ ತಂತಾನೇ ಆ ಲಿಂಕ್‌ ರವಾನೆಯಾಗಿದೆ. ಹೀಗಾಗಿ ಕೆಲವೇ ಹೊತ್ತಿನಲ್ಲೇ ಈ ಲಿಂಕ್‌ ಕೋಟ್ಯಂತರ ಸಂಖ್ಯೆಯಲ್ಲಿ ಫಾರ್ವಾಡ್‌ ಆಗಿದೆ.


Share The News

Leave a Reply

Your email address will not be published. Required fields are marked *

error: Content is protected !!