ನೇತ್ರ ಚಿಕಿತ್ಸೆಯಲ್ಲಿ ಅಕ್ರಮ ತನಿಖೆಗೆ ಒತ್ತಾಯ.
ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಯೋಜನೆಯ ಅಭಿಯಾನದ ಅಡಿಯಲ್ಲಿ ಬಡವರ್ಗದ ಜನರಿಗೆ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವ ಉದ್ದೇಶದಿಂದ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಇಲಾಖೆ ಹಾಗೂ ಎನ್ ಜಿ ಓ ಗಳು ಸೇರಿ ದುರೂಪಯೋಗ ಪಡಿಸಿಕೊಂಡಿವೆ ಎಂದು ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದಾರೆ.
ಸರಕಾರವು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಕುಷ್ಠರೋಗದ ಇಲಾಖೆಗೆ ವರ್ಷಕ್ಕೆ ಅನುದಾನವನ್ನು ಬಿಡುಗಡೆ ಮಾಡಿದೆ. ಸನ್ 2015-16 ರಿಂದ 2019-20 ರವರೆಗೆ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದೆ. ಆದ್ರೆ ಇಲಖೆಯು ಎನ್ ಜಿ ಓ ಗಳಿಂದ ಯಾವುದೇ ದಾಖಲೆಗಳನ್ನು ಪಡೆಯದೇ ಅನುದಾನವನ್ನು ಬಿಡುಗಡೆ ಮಾಡಿದೆ. ಅದರಂತೆ ರಾಜ್ಯದ ಅನುದಾನವನ್ನು ಮಹಾರಾಷ್ಟ್ರ ರಾಜ್ಯದ ಎನ್ ಜಿ ಓ ಗಳಿಗೆ ಕೂಡಾ ಬಿಡುಗಡೆ ಮಾಡಿದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಮನವಿ ಕುರಿತು ಯಾವುದೇ ದಾಖಲೆಗಳನ್ನು ನೋಡದೇ ಅದು ಹೇಗೆ ಹಣ ಬಿಡುಗಡೆ ಮಾಡಿದರು ಹಾಗು ಕ್ಯಾಂಪ ಮಾಡಿದ್ದರೆ ಬಗ್ಗೆ ಯಾವೂದೇ ದಾಖಲೆಗಳು ಲಭ್ಯವಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಹೇಳಿದರು.
ಬೆಳಗಾವಿಯ ಕುಷ್ಠರೋಗದ ಇಲಾಖೆಯ ಅಧಿಕಾರಿಗಳು ಹಾಗೂ ಹನ್ನೆರಡು ಹೆಚ್ಚು ಎನ್ ಜಿ ಓಗಳ ಒಂದಾಗಿ ಅಕ್ರಮ ಮಾಡಿದ್ದು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಅವರ ಕಡೆಯಿಂದ ಅಕ್ರಮವಾಗಿ ಸಂದಾಯವಾದ ಹಣವನ್ನು ವಸೂಲಿ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೆಖಿಸಿದ್ದಾರೆ.