*ಮಹಿಳಾ ಪಿಎಸ್ ಐ ಕೊರೊನಾಗೆ ಬಲಿ*

Share The News

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ ಆಗಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ವಿಜಯಪುರ ಆದರ್ಶನಗರದ ಪೊಲೀಸ್ ಠಾಣೆಯ ಮಹಿಳಾ ಪಿಎಸ್ ಐ ಆಗಿದ್ದ ಸುಲೋಚನಾ ಭಜಂತ್ರಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರು ಇತ್ತೀಚೆಗೆ ನಡೆದ ಬೆಳಗಾವಿ ಉಪಚುನಾವಣೆಯಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ನಿಯೋಜನೆಗೊಂಡಿದ್ದರು. ವಿಜಯಪುರಕ್ಕೆ ಮತ್ತೆ ವರ್ಗಾವಣೆಯಾಗಿ ನಿನ್ನೆ ಭಾನುವಾರವಷ್ಟೇ ವಿಜಯಪುರಕ್ಕೆ ಮರಳಿದ್ದರು. ಏಕಾಏಕಿ ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾರೆ.ಸುಲೋಚನಾ ಭಜಂತ್ರಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಸುಲೋಚನಾ ಅವರಿಗೆ ಕೊರೊನಾ ಸೋಂಕು ಅಗುಲಿತ್ತು ಎಂದು ತಿಳಿದುಬಂದಿದೆ. ಕೇವಲ 45 ವರ್ಷದ ಸುಲೋಚನಾ ಕರ್ತವ್ಯದಲ್ಲಿರುವಾಗಲೇ ಕೊರೊನಾಗೆ ಬಲಿಯಾಗಿದ್ದಾರೆ


Share The News

Leave a Reply

Your email address will not be published. Required fields are marked *

error: Content is protected !!