ಜಾತಿಭೇದ ಮೆಟ್ಟಿನಿಂತ ಮಹಾನ್ ಸಂತ

Share The News

ಜಾತಿಭೇದ ಮೆಟ್ಟಿನಿಂತ ಮಹಾನ್ ಸಂತ
ಪರೋಪಕಾರ ಗೈಯುವ ಧೀಮಂತ
ಅಬಲರಲ್ಲಿ ಆತ್ಮಸ್ಥೈರ್ಯ ತುಂಬಿದ ಮಹಾ0ತ
ಇವರೇ ಶ್ರೀ ಮಹಾಮಹಿಮ ಬಸವಣ್ಣ

ಶರಣರ ಪಡೆಯ ಸಂಘಟನಾ ಶಿಲ್ಪಿ ಸಾತ್ವಿಕ ಸಮಾಜದ ಸಮಾಜ ಶಿಲ್ಪಿ
ಸರಳ ಶಬ್ದ ಸೋಪಾನ ಕಟ್ಟಿದ ವಚನ ಶಿಲ್ಪಿ
ಇವರೇ ಶ್ರೀ ಮಹಾ ಮಹಿಮ ಬಸವಣ್ಣ

ಸಂಪ್ರದಾಯಗಳನ್ನು ಮೆಟ್ಟಿನಿಂತ
ವೈಚಾರಿಕ ಕ್ರಾಂತಿಕಾರಿ
ಪುರಾಣ ಕಥೆಗಳನ್ನು ಪ್ರಶ್ನಿಸಿದ
ಭಕ್ತಿ ಭಂಡಾರಿ
ಭಾವ ಬಂಧನಗಳ ಬಿಡಿಸುವ
ಭವರೋಗ ಪರಿಹಾರಿ
ಇವರೇ ಶ್ರೀ ಮಹಾಮಹಿಮ ಬಸವಣ್ಣ

ಅರಿಷಡ್ವರ್ಗಗಳನ್ನು ಬಗ್ಗುಬಡಿದ ಅನಿಕೇತನ
ಶತ್ರುಗಳನ್ನು ಮಿತ್ರರಂತೆ ಕಂಡ ಮಹಾನ್ ಚೇತನ
ಮರಣವು ಮಹಾನವಮಿ ಎಂದ ಶಿವಶರಣ
ಇವರೇ ಶ್ರೀ ಮಹಾಮಹಿಮ ಬಸವಣ್ಣ

ಕಲ್ಯಾಣವೆಂಬ ಪ್ರಣತಿಯ ದಿವ್ಯ ಜ್ಯೋತಿ
ಮಾನವೀಯತೆಯ ಪ್ರತಿಪಾದಕ ವಿಶ್ವಜ್ಯೋತಿ
ಆದರ್ಶಗಳನ್ನು ಸಾರಿದ ಪರಂಜ್ಯೋತಿ
ಇವರೇ ಶ್ರೀ ಮಹಾಮಹಿಮ ಬಸವಣ್ಣ


Share The News

Leave a Reply

Your email address will not be published. Required fields are marked *

error: Content is protected !!