*ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ನಕಲಿ ಐಡಿ ತೋರಿಸಿದ ನಕಲಿ ಪತ್ರಕರ್ತನ ನಕಲಿ ಐಡಿ ಇಟ್ಟುಕೊಂಡು ಓಡಾಡಿದ ವ್ಯಕ್ತಿ ಪೊಲೀಸರ ಅತಿಥಿ*

Share The News

ನಕಲಿ ಪ್ರೆಸ್ ಐಡಿ ಸಿದ್ದಪಡಿಸಿಕೊಂಡು ಅನಗತ್ಯವಾಗಿ ಆಟೋದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ರಸ್ತೆಗೆ ಇಳಿದಿದ್ದ ನಕಲಿ ಪತ್ರಕರ್ತನನ್ನು ಬೆಳಗಾವಿ ಪೊಲೀಸರು ಚನ್ನಮ್ಮ ವೃತ್ತದಲ್ಲಿ ಬಂಧಿಸಿ, ಅಟೋ ವಶಕ್ಕೆ ಪಡೆದಿದ್ದಾರೆ.

ಆಟೋದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ರಸ್ತೆಗೆ ಇಳಿದಿದ್ದ ವ್ಯಕ್ತಿಯನ್ನು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪಿಎಸ್‍ಐ ಆರ್.ಬಿ.ಸೌದಾಗರ್ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಆತ ಪತ್ರಕರ್ತನ ಕಾರ್ಡ್ ತೋರಿಸಿದ. ಆದರೆ ಆ ಕಾರ್ಡ್ ನಕಲಿಯಾಗಿತ್ತು. ನಕಲಿ ಪತ್ರಕರ್ತ ಉಲಾಸ.ನನ್ನು  ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದರು. ಈತ ಗೋಕಾಕದ ನ್ಯಾಯವಾಣಿ ಪತ್ರಿಕೆಯ ವರದಿಗಾರ ಎಂದು ಈತ ಹೇಳಿದ್ದ.

ಅನುಮಾನ ಬಂದು ಸಂಪಾದಕರಿಗೆ ಕರೆ ಮಾಡಲು ಹೇಳಿದಾಗ ಸ್ಥಳದಲ್ಲಿ ಹೈಡ್ರಾಮಾ ಮಾಡಿದ ನಕಲಿ ಪತ್ರಕರ್ತ ನನಗೆ ಶಾಸಕ ಅನಿಲ್ ಬೆನಕೆ ಗೊತ್ತು. ಅವರ ಫೆÇೀಟೋ ನಾನೇ ತೆಗೆದಿದ್ದೇನೆ ಎಂದು ಉಡಾಫೆ ಉತ್ತರ ಹೇಳಿದ. ಪೆÇಲೀಸರು ಆತನನ್ನು ಖಡೇಬಜಾರ್ ಪೆÇಲೀಸ್ ಠಾಣೆಗೆ ಆಟೋ ಸಮೇತ ಕರೆದುಕೊಂಡು ಹೋದರು.


Share The News

Leave a Reply

Your email address will not be published. Required fields are marked *

error: Content is protected !!