ಹುಬ್ಬಳ್ಳಿ-ಧಾರವಾಡ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ
ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು.ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ದಲಿತ ಯುವಕನ ಬಾಯಿಗೆ ಮೂತ್ರ ಕುಡಸಿದ ಗೇೂಣೀಬೀಡ ವಿಕೈತ ಪಿಎಸ್ಐ ಅಜು೯ನ್ .
ಮನು ಕುಲವನ್ನೇ ಬೆಚ್ಚಿ ಬೀಳಿಸಿದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ
ಅರ್ಜುನ್ ಎಂಬ ವಿಕೃತ ಪಿಎಸ್ಐ ತಲೆದಂಡವಾಗಲೇಬೇಕು
ಕೋವಿಡ್ ನಡುವೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು. ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ಯುವಕನ ಬಾಯಿಗೆ ಮೂತ್ರ ಕುಡಿಸಿ ಕೊನೆಗೆ ನೆಲಕ್ಕೆ ಸುರಿದಿದ್ದ ಮೂತ್ರವನ್ನು ನಾಲಗೆಯಿಂದ ನೆಕ್ಕಿಸಿದ ಗೋಣಿಬೀಡಿದ ಪಿಎಸ್ಐ ಅರ್ಜುನ್ ಎಂಬಾತ ತನ್ನ ವಿಕೃತಿಯನ್ನು ಮರೆದ.
ನಿಜ…
ಕೋವಿಡ್ ಇಲ್ಲದಿದ್ದರೆ ಇಡೀ ರಾಜ್ಯಕ್ಕೆ ರಾಜ್ಯವೇ ಈ ಘಟನೆಯನ್ನು ಖಂಡಿಸುತ್ತಿತ್ತು. ನಾನು ಪುನೀತ್ ಪರ `am stand with puneeth ‘ ಎಂದು ಜನ ದಂಗೆ ಏಳುತ್ತಿದ್ದರು ಮೂಡಿಗೆರೆ, ಕಿರಗುಂದ ಚಲೋಗಳು… ನಡೆಯುತ್ತಿದ್ದವು.ಇದರ ಪ್ರತಿಪಾಲದ ಗ್ರಾಮದ ಅಮಾಯಕ ಪುನೀತ್ ಗೆ ಮೂತ್ರ ಕುಡಿಸಿದ ಆರೋಪದ ಮೇಲೆ ಪಿ.ಎಸ್ ಐ ಅರ್ಜುನ್ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಅದು ನಡೆದಿದ್ದು ಚಿಕ್ಕಮಗಳೂರಿನ ಗ್ರಾಮದಲ್ಲಿ ಆದರೆ ವಿಷಯದ ಗಂಭೀರತೆಯು ರಾಜ್ಯಾದ್ಯಂತ ಜನತೆಯು ತಲ್ಲನಗೊಳ್ಳುವಂತೆ ಮಾಡಿದೆ.
ಒಂದು ಹೋರಾಟಕ್ಕೆ ಸಾವಿರಾರು ಕೈಗಳು ಸೇರಿದರೆ ಜಯ ನಮ್ಮದೇ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ.
ಅನೇಕರು ಡಿಸಿ, ಎಸ್ಪಿ, ಡಿಜಿ. ಐಜಿ, ಸಿಎಂ , ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹಸಚಿವರು ಹೀಗೆ ಎಲ್ಲರಿಗೂ ಟ್ವೀಟ್ ಮಾಡಿದ್ದಾರೆ. ಪುನೀತನ ಪರ ಸುದ್ದಿ ಮಾಡಿದೆವು.
ಇಂದು ನಡೆದಿದ್ದು ಅಕ್ಷರಶಃ ಡಿಜಿಟಲ್ ಚಳುವಳಿ.
ಅಮಾಯಕ ಪುನೀತನು ನೀರು ಕೇಳಿರುವದಕ್ಕೆ ವಿಕೃತ ಮನಸ್ಸಿನ P.S.I ಅರ್ಜುನ್ ಅವರು ಅಧಿಕಾರದ ಮದದಿಂದ ಮೂತ್ರ ಕುಡಿಸಿದ ಪ್ರಯುಕ್ತ P.S.I ಅರ್ಜುನ್ ಮೇಲೆ F.I.R ದಾಖಲಾಗಿದೆ.