ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಮೂತ್ರ ಕುಡಿಸಿದ್ದು ಅತ್ಯಂತ ಕ್ರೂರ ಹಾಗೂ ರಾಜ್ಯವೇ ತಲೆ ತಗ್ಗಿಸುವ ಘಟನೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್,
ಇಂತಹ ಪ್ರಕರಣಗಳು ಬಿಜೆಪಿ ಆಳ್ವಿಕೆಯ ಯುಪಿ, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳಿಂದ ಕೇಳಿಬರುತ್ತಿತ್ತು, ಈಗ ಕರ್ನಾಟಕದಲ್ಲೂ ಘಟಿಸಿದ್ದಕ್ಕೆ ದಲಿತ ವಿರೋಧಿ ಬಿಜೆಪಿಯೇ ಕಾರಣ ಎಂದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಯುವಕನಿಗೆ ಪೊಲೀಸ್ ಇನ್ಸ್ಪೆಕ್ಟರ್ ಮೂತ್ರ ಕುಡಿಸಿದ್ದು ಅತ್ಯಂತ ಕ್ರೂರ ಹಾಗೂ ರಾಜ್ಯವೇ ತಲೆ ತಗ್ಗಿಸುವ ಘಟನೆ
ಇಂತಹ ಪ್ರಕರಣಗಳು ಬಿಜೆಪಿ ಆಳ್ವಿಕೆಯ ಯುಪಿ, ಮಧ್ಯಪ್ರದೇಶ, ಬಿಹಾರದಂತಹ ರಾಜ್ಯಗಳಿಂದ ಕೇಳಿಬರುತ್ತಿತ್ತು, ಈಗ ಕರ್ನಾಟಕದಲ್ಲೂ ಘಟಿಸಿದ್ದಕ್ಕೆ ದಲಿತ ವಿರೋಧಿ ಬಿಜೆಪಿಯೇ ಕಾರಣ
1/1#AntiDalitBJP pic.twitter.com/zwjVX33Iwp— Karnataka Congress (@INCKarnataka) May 23, 2021
ಇಂತಹ ಅಮಾನವೀಯ ಕೃತ್ಯವೆಸಗಿದ ಪೊಲೀಸ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸದೆ, ವಿರೋಧ ತಣಿಸಲು ಕೇವಲ ವರ್ಗಾವಣೆ ಮಾಡಿದ್ದು ಬಿಜೆಪಿಯ ದಲಿತ ವಿರೋಧಿ ನೀತಿಗೆ ಸಾಕ್ಷಿ. ಬಸವರಾಜ ಬೊಮ್ಮಾಯಿ ಅವರೇ, ಕರ್ನಾಟಕಕ್ಕೆ ಈ ಯುಪಿ ಮಾಡೆಲ್ ಬೇಕಿಲ್ಲ. ಕೂಡಲೇ ಇನ್ಸ್ಪೆಕ್ಟರ್ನನ್ನು ಅಮನತುಗೊಳಿಸಿ ಉನ್ನತ ತನಿಖೆಗೆ ವಹಿಸಿ ಎಂದು ಆಗ್ರಹಿಸಿದೆ.
ಇಂತಹ ಅಮಾನವೀಯ ಕೃತ್ಯವೆಸಗಿದ ಪೊಲೀಸ್ ಇನ್ಸ್ಪೆಕ್ಟರ್ನನ್ನು ಅಮಾನತುಗೊಳಿಸದೆ, ವಿರೋಧ ತಣಿಸಲು ಕೇವಲ ವರ್ಗಾವಣೆ ಮಾಡಿದ್ದು ಬಿಜೆಪಿಯ ದಲಿತ ವಿರೋಧಿ ನೀತಿಗೆ ಸಾಕ್ಷಿ.@BSBommai ಅವರೇ, ಕರ್ನಾಟಕಕ್ಕೆ ಈ ಯುಪಿ ಮಾಡೆಲ್ ಬೇಕಿಲ್ಲ. ಕೂಡಲೇ ಇನ್ಸ್ಪೆಕ್ಟರ್ನನ್ನು ಅಮನತುಗೊಳಿಸಿ ಉನ್ನತ ತನಿಖೆಗೆ ವಹಿಸಿ.
2/3#AntiDalitBJP— Karnataka Congress (@INCKarnataka) May 23, 2021
ಮನುವಾದಿ ಸಿದ್ಧಾಂತದ ಬಿಜೆಪಿ ದಲಿತ, ಹಿಂದುಳಿದ ವರ್ಗಗಳನ್ನು ಮತ್ತೊಮ್ಮೆ ಶೋಷಣೆಯ ವಾತಾವರಣಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಶಾಸಕನಿಂದ ಹಲ್ಲೆಗೊಳಪಟ್ಟ ದಲಿತ ಮಹಿಳೆ ಚಾಂದಿನಿ ನಾಯಕ್ ಅವರಿಗೆ ನ್ಯಾಯ ಸಿಗಲಿಲ್ಲ, ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಇದು ಬಿಜೆಪಿಯ ದಲಿತ ಹಾಗೂ ಮಹಿಳಾ ವಿರೋಧಿ ನೀತಿಗೆ ಸಾಕ್ಷಿ ಎಂದು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.