ಗೋಕಾಕ : ವರದಿ ಬ್ರಹ್ಮಾನಂದ ಪತ್ತಾರ ಐಜಿಪಿ ರಾಘವೇಂದ್ರ ಸುಹಾಸರಿಂದ ತನಿಖೆ ಬಯಲಾಯ್ತು ಗೋಕಾಕ ಡಿಎಸ್ಪಿ ಹಾಗೂ ಗುರುರಾಜ ಕಲ್ಯಾಣಶೆಟ್ಟಿ ಸಿಪಿಐ ಹುಕ್ಕೇರಿ ಪಿಎಸ್ಐ ಯಮಕನಮರಡಿ ರಮೇಶ್ ಪಾಟೀಲ್ ಖಾಕಿ ಕಳ್ಳಾಟ. ಬೆಳಗಾವಿ ಜಿಲ್ಲೆ ಯನಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.20, 2020ರಂದು ದಾಖಲೆ ಇಲ್ಲದೆ ಚಿನ್ನಾ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆದಾರ ಪೊಲೀಸರು ಮೇಲೆ ದಾಳಿ, ವಾಹನ ಜಪ್ತಿ ಮಾಡಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ.
ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ದಾಖಲೆ ಇಲ್ಲದೆ ಮಂಗಳೂರಿನಿಂದ ಗೋಲ್ಡ್ ಸಾಗಿಸುತ್ತಿದ್ದು ಚೆಕ್ ಮಾಡುವಂತೆ ಸೂಚಿಸಿದ್ದಾರೆ. ಕೂಡಲೇ ಯಮಕನಮರಡಿ ಪೊಲೀಸರು ಹತ್ತರಕ್ಕಿ ಟೋಲ್ ಬಳಿ ಹೋಗಿ ತಪಾಸಣೆ ಮಾಡಿದ್ದಾರೆ. ಆದರೆ ಈ ಕಾರಿನಿಂದ ಯಾವುದೇ ತರನಾದ ಚಿನ್ನ ಸಿಕ್ಕಿಲ್ಲ. ಬಳಿಕ ಪೊಲೀಸರು ಕಾರು ಸಿಜ್ ಮಾಡಿದ್ದಾರೆ. ಇಷ್ಟಕ್ಕೆ ಮುಗಿಯದ ಈ ಪ್ರಕರಣ ಮುಂದೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡಿದೆ.
ಕಾರು ಬಿಡಿಸಲು 60 ಲಕ್ಷ ಡಿಮ್ಯಾಂಡ್ : ಯಮಕನಮರಡಿ ಠಾಣೆಯಲ್ಲಿ ಸಿಜ್ ಆಗಿರುವ ಕಾರನ್ನು ಬಿಡಿಸಿಕೊಡಲು ಕಾರು ಮಾಲೀಕ ತೀಲಕಗೆ ಕಿರಣ ಎಂಬಾತ 60 ಲಕ್ಷ ರೂಗಳಿಗೆ ಡಿಮ್ಯಾಂಡ್ ಮಾಡಿದ್ದಾನೆ. ಕೊನೆಗೆ 30 ಲಕ್ಷರೂಗೆ ಈ ಡಿಲ್ ಪೈನಲ್ ಆಗಿ, ಅಡ್ವಾನ್ಸ್ ಕಿರಣ ಎಂಬಾತನಿಗೆ 25 ಲಕ್ಷರೂ. ಹಣ ನೀಡಿದ್ದಾನೆ.
ಬಳಿಕ ಕಿರಣ ಎಂಬಾತನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಪೋನ್ ಮಾಡಿ ಸಿಜ್ ಆದ ಕಾರನ್ನು ಬಿಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಇವನ ಮನವಿಗೆ ಹಿರಿಯ ಅಧಿಕಾರಿಯೊಬ್ಬರು ಯಮಕನಮರಡಿ ಠಾಣೆಗೆ ಕರೆಮಾಡಿ ಕಾರು ಬಿಡುವಂತೆ ಆದೇಶ ಮಾಡಿದ್ದಾರೆ. ಆದರೆ ಪ್ರಕರಣ ದಾಖಲಾಗಿದ್ದರಿಂದ ಕಾರನ್ನು ಕೋರ್ಟ್ ನಿಂದ ಬಿಡಿಸಿಕೊಳ್ಳುವಂತೆ ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ್ ಹೇಳಿದ್ದಾರೆ.
ಕಾರು ಕದಿಯಲು ಪ್ಲ್ಯಾನ್ , ಡಿವೈಎಸ್ ಪಿ ಸಾಥ್ : ಗೋಕಾಕ ಡಿವೈಎಸ್ ಪಿ ಜಾವೇದ ಇನಾಂದಾರ ಜೊತೆ ಸೇರಿ ಕಾರು ಮಾಲೀಕ ತೀಲಕ್ ಮಿಡಿಟರ್ ಕಿರಣ ಫೆಬ್ರವರಿ 28 ರ ಮಧ್ಯರಾತ್ರಿ ಕಾರು ಕದಿಯೊಕ್ಕೆ ಮುಂದಾಗಿ ಚಾಲಕ ಒಬ್ಬನನ್ನು ಕಳುಹಿಸಿದ್ದಾರೆ. ಆದರೆ ಕಾರು ಜೋರಾಗಿ ಶಬ್ದ ಮಾಡಿದ್ದರಿಂದ ಚಾಲಕ ಬೆದರಿ ಅಲ್ಲಿಂದ ಫರಾರಿಯಾಗಿದ್ದಾನೆ.
ಕಾರಿನ ಏರಬ್ಯಾಗನಲ್ಲಿ 4 ಕೆಜಿ 900 ಗ್ರಾಂ ಚಿನ್ನ : ಕಾರು ಕೊಡಿಸಲು ಮುಂದಾಗಿದ್ದ ಡಿಲರ್ ಕಿರಣಗೆ ಕಾರಿನ ಏರಬ್ಯಾಗನಲ್ಲಿ 2.5 ಕೋಟಿಯ 4ಕೆಜಿ 900 ಗ್ರಾಂ ಚಿನ್ನ ಅಡಗಿಸಿ ಇಟ್ಟಿರುವದು ಗೊತ್ತಾಗಿದೆ. ಆಗ ಕಿರಣ ಗೋಕಾಕ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಜೊತೆಗೆ ಸೇರಿ ಚಿನ್ನ ಲಪಟಾಯಿಸಿ ಹುಬ್ಬಳ್ಳಿಯ ಚಿನ್ನದ ವ್ಯಾಪಾರಿಯೊಬ್ಬರಿಗೆ ಮಾರಿ ಹಣ ಪಡೆದು ಹಾಯಾಗಿ ತಿರುಗಾಡಿದ್ದಾರೆ.
ಬಳಿಕ 2020 ಏಪ್ರಿಲ್ 16 ರಂದು ಕಾರು ಮಾಲೀಕ ತಿಲಕ್ ಪೂಜಾರಿ ಕೋರ್ಟ್ ಗೆ ದಂಡ ತುಂಬಿ ಕಾರನ್ನು ಬಿಡುಗಡೆ ಮಾಡಿಕೊಂಡಾಗ ಕಾರಿನಲ್ಲಿದ್ದ 2.5 ಕೋಟಿ ಬೆಲೆ ಬಾಳುವ ಚಿನ್ನ ಮಾಯವಾಗಿದನ್ನು ಗಮನಿಸಿ ಕೂಡಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸಗೆ ದೂರು ನೀಡಿದ್ದಾರೆ.
ಎಸ್ಪಿ ನಿಂಬರಗಿ ತನಿಖೆಯಿಂದ ಬಯಲಾದ ಗೋಲ್ಡ್ ಪುರಾಣ : ಕಾರಿನಲ್ಲಿದ್ದ ಚಿನ್ನ ಮಾಯವಾಗಿರುವ ಬಗ್ಗೆ ದೂರು ದಾಖಲಾದ ನಂತರ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಅವರು, ಈ ಪ್ರಕರಣದ ಜವಾಬ್ದಾರಿ ಬೆಳಗಾವಿ ಪೋಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ವಹಿಸಿ, ತನಿಖೆಗೆ ಸೂಚಿಸಿದ್ದಾರೆ.
ತನಿಖೆ ಚುರುಕುಗೊಳಿಸಿದಾಗ ಖಾಕಿ ಕಳ್ಳಾಟ ಬಯಲಿಗೆ ಬಂದಿದೆ. ಎಸ್.ಪಿ ನಿಂಬರಗಿ ಅವರು ನಡೆಸಿದ ತನಿಖೆಯಲ್ಲಿ ಡಿಲರ್ ಕಿರಣ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಸೇರಿ ಯಮಕನಮರಡಿ ಠಾಣೆಯ ಪಿಎಸ್ಐ ರಮೇಶ ಪಾಟೀಲ್, ಓರ್ವ ಪೇದೆ ಹಾಗೂ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರ ಕೈವಾಡ ಇರುವದು ಪತ್ತೆಯಾಗಿದೆ.
ಆರೋಪಿ ಕಿರಣ ಹಾಗೂ ಹಿರಿಯ ಅಧಿಕಾರಿಯೊಬ್ಬರು ನಡೆಸಿರುವ ಸಂಭಾಷಣೆಯೂ ಸಹ ಎಸ್.ಪಿ ನಿಂಬರಗಿ ಅವರಿಗೆ ದೊರೆತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಪ್ರಕರಣ ಸಿಐಡಿಗೆ ಹಸ್ತಾಂತರ ಆಗಿದ್ದು, ತನಿಖೆ ಚುರುಕುಗೊಂಡಿದ್ದು ಸದ್ಯದಲ್ಲೇ ಗೋಲ್ಡ್ ಕದ್ದ ಖಾಕಿ ಮುಖಗಳು ಬಟಾ ಬಯಲಾಗಲಿವೆ.
ರಾತ್ರೋರಾತ್ರಿ ಜಾವೇದ ಸೇರಿ ಹಲವರ ವರ್ಗಾವಣೆ : ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಇಲಾಖೆ ತಕ್ಷಣದಲ್ಲಿ ಜಾರಿಗೆ ಬರುವಂತೆ ಗೋಕಾಕ ಡಿ.ವೈ.ಎಸ್.ಪಿ ಜಾವೇದ ಇನಾಂದಾರ ಅವರಿಗೆ ಐ.ಎಸ್.ಡಿ ಗೆ ವರ್ಗಾವಣೆ ಮಾಡಿದೆ. ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಗೆ ಪಿ .ಟಿ.ಎಸ್. ಹುಬ್ಬಳ್ಳಿ-ಧಾರವಾಡ,ಗೆ ಮತ್ತು ಪಿಎಸ್ಐ ರಮೇಶ ಪಾಟೀಲ್ ಅವರಿಗೆ ಸಿ.ಎನ್.ಎ ಪೊ.ಠಾ ಹುಬ್ಬಳ್ಳಿ – ಧಾರವಾಡ ಗೆ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಗೋಲ್ಡ್ ಆರೋಪ ಹೊತ್ತಿರುವ ಈ ಅಧಿಕಾರಿಗಳು ಸಿಐಡಿ ತನಿಖೆಯಾಗುವವರೆಗೆ ಅಮಾನತಿನಲ್ಲಿದ್ದು ತನಿಖೆ ಎದುರಿಸಬೇಕಾಗುತ್ತದೆ .
ಆದರೆ ಜಿಲ್ಲೆಯಲ್ಲಿ ಮುಜುಗರ ತಪ್ಪಿಸಲು ಇಲಾಖೆ ಈ ವರ್ಗಾವಣೆ ಆದೇಶ ಮಾಡಿದೆ ಎಂದು ಜಿಲ್ಲೆಯ ಜನರು ಮಾತನಾಡುತ್ತಿದ್ದಾರೆ