ಬೆಳಗಾವಿ:ರಾಯಬಾಗ ತಾಲ್ಲೂಕಿನ ನೀಡಗುಂದಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಅಶೋಕ ಪಾಟೀಲ ಅವರ ನೇತೃತ್ವದಲ್ಲಿ ರಾಯಾಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಹಾಗು ಅಮ್ಮಾ ನಗರದಲ್ಲಿ ಇಂದು ಕೋವಿಡ್ ಸೋಂಕು ಮುಂಜಾಗೃತೇಗಾಗಿ ಕೋವಿಡ ಸೋಂಕು ಹರಡದಂತೆ ಗ್ರಾಮದ ಜನರಿಗೆ.ಆರೋಗ್ಯ ಇಲಾಖೆ ಹಾಗು ಕೋವಿಡ್ ಪರೀಕ್ಷಾ ಕಾರ್ಯಕ್ರಮ ಜಾರಿ ಮಾಡಲಾಗಿದ್ದು.
ಅಮ್ಮಾ ನಗರ ಹಾಗು ನಾಗರಾಳ ಗ್ರಾಮದಲ್ಲಿ ಕೋವಿಡ್ ಪರೀಕ್ಷಾಗೆ ಚಾಲನೆ ನೀಡಿ ಅಶೋಕ ಪಾಟೀಲ ಮಾತನಾಡಿ ರೋಗ ಹರಡದಂತೆ ತಡೆಯುವುದು ಹೇಗೆ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಮತ್ತು ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ. ನಿಮ್ಮ ಕಣ್ಣು ಮತ್ತು ಮೂಗು ಮುಟ್ಟುತ್ತಿರಬೇಡಿ. ಮೂಗು, ಕಣ್ಣು ಅಥವಾ ಗಂಟಲಿನಲ್ಲಿ ತುರಿಕೆ ಕಾಣಿಸಿಕೊಂಡರೆ, ವೈದ್ಯರ ಬಳಿಗೆ ಹೋಗಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಗರ ಜೇಡ್ಡೇನ್ನವರ್ ಶಾಬು ಮುಲ್ಲಾ ರಮೇಶ ದಾವನೆ ದೇವಾನಂದ ದೊಡಮನಿ.ಗಜಾನನ ಕೋಕಾಟೆ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನೀಡಗುಂದಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಗು ಗ್ರಾಮ ಲೆಕ್ಕಾಧಿಕಾರಿ ಭಾತೇಅವರು ಸ್ಥಳೀಯಆರೋಗ್ಯ ಇಲಾಖೆ ಸಿಬ್ಬಂದಿಗಳು, ಉಪಸ್ಥಿತರಿದ್ದರು.