ಬೆಳಗಾವಿ- ಪೋಲೀಸರು ಕಳ್ಳರನ್ನು ದರೋಡೆಕೋರರನ್ನು,ವಂಚಕರನ್ನು ಅರೆಸ್ಟ್ ಮಾಡಿದ್ದನ್ನು ನಾವು ಕೇಳಿದ್ದೇವೆ ಆದ್ರೆ ಇವತ್ತು ಬೆಳಗಾವಿಯಲ್ಲಿ ಪೋಲೀಸರು,ಮತ್ತೊಬ್ಬ ಪೋಲೀಸ್ ಪೇದೆಯನ್ನು ಬಂಧಿಸಿದ್ದಾರೆ.ಬೆಳಗಾವಿ ಮಾರ್ಕೆಟ್ ಠಾಣೆಯ ಪೋಲೀಸರು ಇವತ್ತು, ಸಿದ್ಧಾರೂಢ ವಡ್ಡರ್
ಕೆಎಸ್ ಆರ್ ಪಿ ಎರಡನೇಯ ಬಟಾಲಿಯನ್ ಪೇದೆಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಸಿದ್ಧಾರೂಡ ವಡ್ಡರ್ ಎಂಬ ಕೆ.ಎಸ್ ಆರ್.ಪಿ ಎರಡನೇಯ ಬಟಾಲಿಯನ್ ಪೇದೆ,ಈತ ಲಾಕ್ಡೌನ್ ಅವಧಿಯಲ್ಲಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಸುತ್ತಾಡಿ ನಾನು ಕ್ರೈಂ ಬ್ರ್ಯಾಂಚ್ ಪೋಲೀಸ್ ಎಂದು ಹೇಳಿಕೊಂಡು,ಅಂಗಡಿಕಾರರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.ಇವತ್ತು ಬೆಳಿಗ್ಗೆ ಸಿದ್ಧಾರೂಢ ವಡ್ಡರ್ ಬೆಳಗಾವಿ ಮಾರುಕಟ್ಟೆ ಪ್ರದೇಶದಲ್ಲಿ ಹಣ ವಸೂಲಿ ಮಾಡುತ್ತಿರುವಾಗ ಸಾರ್ವಜನಿಕರು ಈತನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮಾರ್ಕೆಟ್ ಠಾಣೆಯ ಪೋಲೀಸರು ಕೆ.ಎಸ್.ಆರ್.ಪಿ ಪೋಲೀಸ್ ಪೇದೆಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.