ಬೆಂಗಳೊರು:ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ
ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು
ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ
ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದವರು. ಎರಡು ಬಾರಿ
ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ-
ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು.
ದೇವಯ್ಯ ಮತ್ತು ವೆಂಕಮ್ಮ ಎಂಬ ದಂಪತಿಗಳಿಗೆ ಡಾ.
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954
ರಲ್ಲಿ ಜನಿಸಿದರು.
ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ:
ಜನಸ್ಪಂದನ್ ನ್ಯೂಸ್ ಕಳಕಳಿ.
ದಲಿತ ಧ್ವನಿ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ದಲಿಂಗಯ್ಯ
ಸಾಮಾಜಿಕ ಸಮಾನತೆ, ಹೋರಾಟದ ಬಗ್ಗೆ ಕಾವ್ಯ,
ಸಾಹಿತ್ಯಗಳ ಮೂಲಕ ಗಮನ ಸೆಳೆದಿದ್ದರು. ನಾಟಕ,
ಪ್ರಬಂಧ, ವಿಮರ್ಷೆ, ಸಂಶೋಧನೆ, ಆತ್ಮಕಥನ
ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದರು.
ಹೊಲೆಮಾದಿಗರ ಹಾಡು, ಮೆರವಣಿಗೆ, ಸಾವಿರಾರು
ನದಿಗಳು, ಕಪ್ಪು ಕಾಡಿನ ಹಾಡು, ಅಲ್ಲೆಕುಂತವರೆ
ಸಿದ್ದಲಿಂಗಯ್ಯ ಅವರ ಪ್ರಮುಖ ಕವನ ಸಂಕಲನಗಳು.
ಹಕ್ಕಿ ನೋಟ, ರಸಗಳಿಗೆಗಳು, ಎಡಬಲ, ಉರಿಕಂಡಾಯ
ವಿಮರ್ಶನಾ ಕೃತಿಗಳು. ಅವತಾರಗಳು ಸದನದಲ್ಲಿ
ಸಿದ್ದಲಿಂಗಯ್ಯ ಲೇಖನಗಳ ಸಂಕಲನಗಳಾಗಿದ್ದು,
ಏಕಲವ್ಯ ಹಾಗೂ ನೆಲಸಮ ಪ್ರಮುಖ ನಾಟಕ ಕೃತಿ.ಇನ್ನು ಹಲವು ವಿಚಾರಗಳನ್ನು ಒಳಗೊಂಡವರು ಇವರು ಬಹುಬೇಗನೆ ಅಗಲಿರುವುದು ನಮ್ಮ ನಾಡಿನ ದುರ್ದೈವವೇ ಸರಿ. ದೇವರು ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ನಮ್ಮ ಬಳಗದಿಂದ ಮತ್ತು ಪತ್ರಿಕಾ ಸಂಸ್ಥೆಯಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ.. ಈ ಮೂಲಕ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸುತ್ತಿದ್ದೇವೆ.
