*ಸರ್ಕಾರಿ ಜಾಗದ ಗರಸು ಭ್ರಷ್ಟರಪಾಲು ತಹಸೀಲ್ದಾರ ಸಾಹೇಬರೆ ಇಲ್ಲಿ ನೋಡಿ ಒಂದು ಕಂಪ್ಲೇಂಟು*

Share The News

ಬೆಳಗಾವಿ:-ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಸರ್ಕಾರಿ ಜಮೀನನಲ್ಲಿ ಅಕ್ರಮವಾಗಿ ತಮ್ಮ ಲಾಭಕ್ಕಾಗಿ ಸರಕಾರಿ ಭೂಪ್ರದೇಶವನ್ನು ಸರ್ಕಾರಿ ಕಾಮಗಾರಿಗಳಿಗೆ ಅನುದಾನವಿದ್ದರು ಕೆಲವು ವ್ಯಕ್ತಿಗಳು ಸರ್ಕಾರಿ ಭೂ ಪ್ರದೇಶವನ್ನು ಅಗೆದು(ಗರಸನ್ನು ) ರಸ್ತೆ ಕಾಮಗಾರಿಗಳಿಗೆ ಬಳಿಸುತ್ತಿದ್ದಾರೆ.ಈ ಕಾಮಗಾರಿಗಳಿಗೆ ಅನುದಾನ ಸಾಕಷ್ಟು ಇದ್ದರು ಗ್ರಾಮದ ನೈಸರ್ಗಿಕ ಸಂಪತ್ತು ಹಾಳುಮಾಡುವದರಲ್ಲಿ ಕೆಲವು ಭ್ರಷ್ಟಾಚಾರಿಗಳು ಪ್ರಮುಖ ಪಾತ್ರವಯಿಸುತ್ತಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ 2019-20 ರಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕಿನ ದಂಡಾಧಿಕಾರಿಗಳು ಈ ಪ್ರದೇಶವನ್ನು ಅಗೆಯಬಾರದೆಂದು ಆದೇಶ ಮಾಡಲಾಗಿತ್ತು. ಈ ಆದೇಶವಿದ್ದರೂ ದಿನಾಂಕ 24:07:2021 ರಂದು ಗ್ರಾಮದ ಅಶೋಕ ಕಾಲತಿಪ್ಪಿರವರು ತಮ್ಮ ಜೇಸಿಬಿ ಮತ್ತು ಟಿಪ್ಪರ್ ಮೂಲಕ ಊರಿನ ಪ್ರಮುಖರ ಹೆಸರು ಹೇಳುತ್ತಾ ಈ ಕ್ರತ್ಯ ನಡೆಸುತ್ತಿದ್ದಾರೆ.

ವರದಿ :- ಮಹಾಲಿಂಗ ಹ ಗಗ್ಗರಿ


Share The News

Leave a Reply

Your email address will not be published. Required fields are marked *

error: Content is protected !!