*ಭಕ್ತಿಭಾವದಲ್ಲಿ ಮಿಂದೆದ್ದ ಬಸವಣ್ಣನ ಭಕ್ತರು,ಆಜೂರ ಗ್ರಾಮದ ಪಲ್ಲಕ್ಕಿ ಉತ್ಸವಕ್ಕೆ ತೆರೆ….*

Share The News

*ಭಕ್ತಿಭಾವದಲ್ಲಿ ಮಿಂದೆದ್ದ ಬಸವಣ್ಣನ ಭಕ್ತರು,ಆಜೂರ ಗ್ರಾಮದ ಪಲ್ಲಕ್ಕಿ ಉತ್ಸವಕ್ಕೆ ತೆರೆ….*

*ಬೆಳಗಾವಿ:-* ಅಥಣಿ ತಾಲೂಕಿನ ಆಜೂರ ಗ್ರಾಮದ ಆರಾಧ್ಯದೇವರಾದ ಶ್ರೀ ಬಸವೇಶ್ವರ ಜಾತ್ರೆ ಅತ್ಯಂತ ಸರಳವಾಗಿ ಸಡಗರ ಸಂಭ್ರಮದಿಂದ ಗುರುವಾರ, ಶುಕ್ರವಾರ ಆಚರಣೆಯಾಯಿತು.

ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಆಜೂರ ಗ್ರಾಮಕ್ಕೆ ಹತ್ತಿರವಿರುವ ಪುರಾಣ ಪ್ರಸಿದ್ಧ ಖಿಳೇಗಾಂವಿಯ ಬಸವೇಶ್ವರ ಪಲ್ಲಕ್ಕಿ ಗ್ರಾಮಕ್ಕೆ ಆಗಮಿಸುತ್ತದೆ ಆಜೂರ ಗ್ರಾಮಕ್ಕೆ ಬರುವಾಗ ಪ್ರಸಿದ್ಧಿ ಪಡೆದಿರುವ ಮೋಟ ಬಸವೇಶ್ವರನಿಗೆ ಭೇಟಿ ನೀಡಿ ಪಲ್ಲಕ್ಕಿಯು ಗ್ರಾಮವನ್ನು ಪ್ರವೇಶಿಸುತ್ತದೆ.
ಪಲ್ಲಕ್ಕಿಯ ಆಗಮನದ ಸಮಯದಲ್ಲಿ ಖಿಳೇಗಾಂವ ಗ್ರಾಮದಿಂದ ಆಜೂರಿನವರೆಗೆ ರಸ್ತೆಯುದ್ದಕ್ಕೂ ನೀರು ಹರಿಸಿ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯನ್ನು ಬರಮಾಡಿಕೊಳ್ಳುತ್ತಾರೆ.

ಶ್ರಾವಣ ಮಾಸದ ಕೊನೆಯ ಗುರುವಾರ ಹಾಗೂ ಶುಕ್ರವಾರ ಎರಡುದಿನಗಳ ಕಾಲ ಜರುಗುವ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವವು ಅನೇಕ ಮೊದಲುಗಳಿಗೆ ಸಾಕ್ಷಿಯಾಗುತ್ತದೆ.
ಜಾತ್ರೆಯ ಮೊದಲ ದಿನ ಪಲ್ಲಕ್ಕಿ ಗ್ರಾಮದಲ್ಲಿ ಪ್ರವೇಶಿಸಿದ ನಂತರ ಗ್ರಾಮದ ಯುವಕರು ಸೇರಿದಂತೆ ಎಲ್ಲರೂ ಅಗ್ರಾಣಿಯಲ್ಲಿ ಮಡಿಯಿಂದ ಸ್ನಾನ ಮಾಡಿ ಬಿಂದಿಗೆಯಲ್ಲಿ ನೀರು ತಂದು ಪಲ್ಲಕ್ಕಿಯ ಮುಂಭಾಗದಲ್ಲಿ ಸುರಿಯುವುದು ವಾಡಿಕೆಯಾಗಿದ್ದು ಇದು ಇಲ್ಲಿಯ ಜಾತ್ರೆಗಳಲ್ಲೊಂದಾದ ವಿಶೇಷತೆಯೂ ಆಗಿದೆ ಅಲ್ಲದೆ ಶುಕ್ರವಾರವೂ ನಾನಾ ಬಗೆಯ ಕಾರ್ಯಕ್ರಮಗಳು ನಡೆಯುತ್ತವೆ ನಂದಿಕೋಲು ಕುಣಿತ,ಕುದುರೆ ಕುಣಿತ ಸೇರಿದಂತೆ ವಿವಿಧ ಬಗೆಯ ಮನರಂಜನೆಯ ಜಾನಪದ ಕಲಾ ತಂಡಗಳು, ಸಂಗೀತ ವಾದ್ಯಗಳು ಜನಮನವನ್ನು ಆಕರ್ಷಿಸುತ್ತವೆ.


ಗ್ರಾಮದ ತುಂಬೆಲ್ಲ ಜಾತ್ರೆಯ ಸಮಯದಲ್ಲಿ ಹಬ್ಬದ
ಎರಡನೇ ದಿನ ಶುಕ್ರವಾರ ಭಕ್ತರ ದರ್ಶನ ಮಾಡಿದ ನಂತರವಷ್ಟೇ ಪಲ್ಲಕ್ಕಿ ಉತ್ಸವ ಜರುಗುತ್ತದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಮೂರ್ತಿ ಹಾಗೂ ಪಟ್ಟದ ಕುದುರೆಯ ಮೆರವಣಿಗೆ ಅತ್ಯಂತ ಭಕ್ತಿಯಿಂದ ನಡೆಯಿತು ನೃತ್ಯ ಮಾಡುತ್ತ ಜಾತ್ರೆಯ ಸಂತೋಷದ ಹೊನಲಿನಲ್ಲಿ ಗ್ರಾಮದ ಯುವಕರು ತೇಲಿಹೋದದ್ದು ವಿಶೇಷವಾಗಿತ್ತು.ನಮ್ಮ ಗ್ರಾಮದ ಜಾತ್ರೆಯು ಅತ್ಯಂತ ವಿಶೇಷವಾದ ಜಾತ್ರೆಯಾಗಿದೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ನೀಡುವ ಕಾರ್ಯಕ್ರಮಗಳು ಜರುಗುತ್ತವೆ ಎಲ್ಲ ವರ್ಗದ ಜನರೂ ಸಹ ಜಾತ್ರೆಯಲ್ಲಿ ಭಾಗವಹಿಸಿ ಬಸವೇಶ್ವರ ಕೃಪೆಗೆ ಪಾತ್ರರಾಗುತ್ತಾರೆ ಎನ್ನುತ್ತಾರೆ ಶ್ರೀ ಬಸವೇಶ್ವರ ಯುವಕ ಸೇವಾ ಸಂಘದ ಶೀತಲ್ ಪಾಟೀಲ.
ಇನ್ನೂ ನಮ್ಮ ಗ್ರಾಮದಲ್ಲಿ ಬಸವೇಶ್ವರ ಯುವಕ ಸೇವಾ ಸಂಘದ ವತಿಯಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ರೆಗೆ ವಿಶೇಷ ಮೆರುಗು ನೀಡುವುದು ಯುವಕರು ಸಂಭ್ರಮದಿಂದ ಜಾತ್ರೆಯಲ್ಲಿ ಭಾಗವಹಿಸುವಂತಾಗುತ್ತಿತ್ತು ಆದರೆ ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ಜಾತ್ರೆ ಅಷ್ಟೊಂದು ವಿಜೃಂಭಣೆಯಿಂದ ನಡೆಯದೆ ಸರಳವಾಗಿ ನಡೆಯಿತು ಎನ್ನುತ್ತಾರೆ ಶೀತಲ್ ಪಾಟೀಲ.
ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿ ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ನಡೆಯುವ ಪಲ್ಲಕ್ಕಿ ಉತ್ಸವವು ಈ ಬಾರೀ ಕೊರೋನಾ ಕಾಟದಿಂದ ಅತ್ಯಂತ ಸರಳವಾಗಿ ಆಚರಣೆಯಾಗಿ ಗ್ರಾಮದ ಹಿರಿಯರು, ಯುವಕ, ಯುವತಿಯರು ಸೇರಿದಂತೆ ಸುಮಂಗಲೆಯರು ಭಕ್ತಿಭಾವದಲ್ಲಿ ಮಿಂದೆದ್ದರು.


Share The News

Leave a Reply

Your email address will not be published. Required fields are marked *

error: Content is protected !!