ಸೆಪ್ಟೆಂಬರ್ 14 ರಂದು ಕೆಂದ್ರ ಸರ್ಕಾರ ನಡೆಸುವ ಹಿಂದಿ ದಿವಸ ಆಚರಣೆಗೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಯೂಬ ಪೀರಜಾದೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ.
ಭಾಷಾ ವೈವಿಧ್ಯದ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ.ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು, ಅದಕ್ಕೆ ವಿಶೇಷ ಮಹತ್ವ,ಪೋತ್ಸಾಹ ನೀಡುವುದು ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ.
ಹಿಂದಿ ಭಾಷೆ ಯೊಂದನ್ನು ಇಡೀ ದೇಶದಲ್ಲಿ ಬೆಳೆಸುವ ಪ್ರಮುಖ ಉದ್ದೇಶ, ಹಿಂದಿ ಭಾಷಿಕರಿಗೆ ಎಲ್ಲ ರಾಜ್ಯಗಳಲ್ಲೂ ಅಗತ್ಯ ಸೇವೆಗಳನ್ನು ಕಲ್ಪಿಸುವುದೇ ಆಗಿದೆ ಇದರ ಮೂಲಕ ಇತರ ಭಾಷಿಕರಿಗೆ ಒದಗಿಸಲಾಗುತ್ತಿದೆ.ಇದು ಸಂವಿಧಾನದ ಅಂಶಗಳ ವಿರುದ್ಧವಾಗಿದೆ.
ಇದರಿಂದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತವೆ.ಕನ್ನಡಿಗರ ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ.
ಜೊತೆಗೆ ,ಉತ್ತರ ಭಾರತದ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.ಇದರಿಂದಾಗಿ ಕನ್ನಡಿಗರ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಉದ್ಯೋಗದಲ್ಲಿ 80 ℅ ಉದ್ಯೋಗಗಳನ್ನು ಕನ್ನಡಿಗರಿಗೆ ಕಡ್ಡಾಯ ನೀಡಬೇಕು. ಇದರ ಬಗ್ಗೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಹೋರಾಟ ಮಾಡುವುದೆಂದು ತಿಳಿಸಿದರು.
ಅದಕ್ಕಾಗಿ ಹಿಂದಿ ದಿವಸ ಆಚರಣೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ವಿರೋಧಿಸಲಿದೆ ಎಂದು ತಿಳಿಸಿದ್ದಾರೆ.