ಬೆಳಗಾವಿ:ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ತರುವ ಸದುದ್ದೇಶದಿಂದ ಪ್ರತಿ ಸರ್ಕಾರಿ ಕಚೇರಿಯ ಮುಂಬಾಗದಲ್ಲಿ ದ್ವಜಾರೋಹನ ಮಾಡಬೇಕು ಎಂದು ಸರ್ಕಾರವು ಆದೇಶ ಹೋರಡಿಸಿತ್ತು ಆದರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ರಾಯಬಾಗ ನಲ್ಲಿ ಸುಮಾರು ವರ್ಷಗಳಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ರಾಯಬಾಗ್ ಇವರು ಸರ್ಕಾರದ ಯಾವುದೇ ಆಚರಣೆಯನ್ನು ಮಾಡದೆ ತಮಗೆ ಇಷ್ಟ ಬಂದಂತೆ ಸರಕಾರದ ಮಾರ್ಗ ಸೂಚಿಗಳನ್ನು ಸರ್ಕಾರದ ಆದೇಶವನ್ನು ಸರ್ಕಾರಿ ಕಚೇರಿಯ ಈ ದಪ್ಪ ಚರ್ಮದ ಮಂದ ಬುದ್ದಿಯ.ದುರಂಕಾರದ ಅಧಿಕಾರಿಗಳು ಮಾತ್ರ ಪಾಲನೆ ಮಾಡುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿಯಾಗಿದೆ.. ಹಾಗೆಯ ತಮ್ಮ ಇಲಾಖೆಯ ಮುಂದೆ ಈ ವರ್ಷ ವು ಕೂಡಾ ಧ್ವಜಾರೋಹಣ ಮಾಡದೆ ನಮ್ಮ ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ…….
ಮಾಹಿತಿಯ ಮೇರೆಗೆ ಹೋಗಿ ಕೇಳಿದರೆ ನಾವು ಸುಮಾರು ವರ್ಷಗಳಿಂದ ಪಂಚಾಯತ್ ರಾಜ್ ಇಲಾಖೆ ಉಪ ವಿಭಾಗ ರಾಯಬಾಗ್ ಅವರೊಂದಿಗೆ ಧ್ವಜಾರೋಹಣ ಮಾಡುತ್ತಿದ್ದೇವೆ ಅಷ್ಟೇ ಅಲ್ಲದೆ ಸರ್ಕಾರದ ಎಲ್ಲ ಆಚರಣೆಯನ್ನು ಪಂಚಾಯತ್ ರಾಜ್ ಇಲಾಖೆಯ ಮುಂದೆ ಮಾಡುತ್ತೇವೆ ಎಂದು ಬೇಜವಾಬ್ದಾರಿತನದಿಂದ ತಮ್ಮ ಲಿಖಿತ ರೂಪದಲ್ಲಿ ಕೊಟ್ಟಿದ್ದಾರೆ.ನೋಡಿ…..
ಇಷ್ಟೇ ಅಲ್ಲದೇ ನಮಗೆ ಇದುವರೆಗೆ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ನಮ್ಮನ್ನು ಇದರ ಬಗ್ಗೆ ಪ್ರಶ್ನೆ ಮಾಡಿಲ್ಲ ಈಗ ನೀವು ಮಾಡಿದ್ದೀರಿ, ನಿಮ್ಮ ಇಷ್ಟದಂತೆ ನಮ್ಮ ಇಲಾಖೆಯ ಮುಂದೆ ದ್ವಜದ್ ಕಂಬವನ್ನೂ ನಿರ್ಮಿಸುತ್ತೇವೆ….ಮುಂದೆ ಬರುವ ಗಣರಾಜ್ಯೋತ್ಸವ ಹಾಗೂ ಆಗಸ್ಟ್ 15 ಸ್ವತಂತ್ರ ದಿನಾಚರಣೆಯನ್ನು ನಮ್ಮ ಇಲಾಖೆಯ ಮುಂದೆ ಮಾಡುತ್ತೇವೆ ಎಂದು ನಾಚಿಕೆ ಇಲದ ಹಾಗೆ ಹೇಳುತ್ತಾರೆ ನೊಡಿ… ನಾವು ಕೇಳಿದಾಗ ನಮ್ಮ ಇಷ್ಟದಂತೆ ನಡೆದುಕೊಳ್ಳುತ್ತಿರುವ ಇವರು ಸರ್ಕಾರದ ಮಾರ್ಗಸೂಚಿಯನ್ನು ಏಕೆ ಪಾಲನಿ ಮಾಡುತ್ತಿಲ್ಲ ಎಂಬುವುದು ಗೊತ್ತಾಗ್ತಾಯಿಲ್ಲ. ಇವರಿಗೆ ಸರಿಯಾಗಿ ತಿಂಗಳಿಗೊಮ್ಮೆಸರ್ಕಾರದ ಸಂಬಳ ಬೇಕು, ಆದರೆ ಸರ್ಕಾರದ ಕಾರ್ಯಕ್ರಮ ಗಳು, ಆಚರಣೆಗಳು ಮಾರ್ಗಸೂಚಿಗಳು ಏಕೆ ಬೇಡ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಅಲ್ಲದೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಲಾಖೆ ಉಪಯೋಗ ಅಧಿಕಾರಿ ಯವರನ್ನು ದೂರವಾಣಿ ಕರೆಯ ಮುಖಾಂತರ ಕೇಳಿದಾಗ ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಇಲಾಖೆಯು ಬೆರೆ ಬೇರೆ ಇದ್ದೂ ಅವರು. ಅವರ ಇಲಾಖೆಯ ಮುಂದೆ ಯ ಧ್ವಜಾರೋಹಣ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ…ಇಷ್ಟೆಲ್ಲಾ ಕಣ್ಣಾಮುಚ್ಚಾಲೆ ನಡೆಯುತ್ತಿದ್ದರು ಧ್ವಜಾರೋಹಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇವರಿಗೆ ಆಗುತ್ತಿಲ್ಲವೇ
ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಚೇರಿಯ ಮುಂಭಾಗದಲ್ಲಿ ಧ್ವಜಾರೋಹಣವನ್ನು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಅಥವಾ ಈ ಹಿಂದಿನಂತೆ ಉದಾಸೀನದ ಮಾತುಗಳಿಂದ ಬೇಜವಾಬ್ದಾರಿತನ ತೋರುತ್ತಾರೆ ಕಾದು ನೋಡಬೇಕಾಗಿದೆ .