ಘಟಪ್ರಭಾ: ಘಟಪ್ರಭಾ ಪಟ್ಟಣದಲ್ಲಿ ಇಂದು ಶಾಸಕರಾದ ರಮೇಶ ಜಾರಕಿಹೊಳಿ ಅವರ ಸೂಚನೆಯಂತೆ ಹಾಗೂ ಗೋಕಾಕ ಮತಕ್ಷೇತ್ರದ ಸಾರಥಿ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಂತೆ ಕಾರ್ಯಕ್ರಮಕ್ಕೆ ಸಾಹುಕಾರ್ ಆಪ್ತ ಸಹಾಯಕರಾದ ಸುರೇಶ ಸನದಿ ಅವರು ಭಾಗವಹಿಸಿ ಸ್ಥಳೀಯ ಕಾಳಿಕಾ ದೇವಸ್ಥಾನ ಹತ್ತಿರ ಇರುವ ರಸ್ತೆಗೆ ಭೂಮಿ ಪೂಜೆ ಸಲ್ಲಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಕೋಳಿ,ಗಂಗಾಧರ ಬಡಕುಂದ್ರಿ,ಮಾರುತಿ ಹುಕ್ಕೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ,ಪ್ರವೀಣ್ ಮಟಗಾರ, ಉಮೇಶ್ ತುಕ್ಕಾನಟ್ಟಿ, ಬಾಳೇಶ ಕಮತ,ಜಾಕೀರ ಬಾಡಕರ,ಅಲ್ತಾಫ ಉಸ್ತಾದ್, ರಮೇಶ ಗಂಡವ್ವಗೋಳ,ಪ್ರತಾಪ್ ಬೇವಿನಗಿಡದ,ಲಕ್ಷ್ಮಣ ಮೇತ್ರಿ,ನಾಗು ಜಂಬ್ರಿ, ಇನ್ನೂ ಅನೇಕರು ಉಪಸ್ಥಿತರಿದ್ದರು.