ಸ್ಥಳ : ಬೈಲಹೊಂಗಲ
ಹೌದು ಬೆಳಗಾವಿ ಜಿಲ್ಲೆಯ ಕ್ರಾಂತಿ ನೆಲ ಕಿತ್ತೂರಿನಲ್ಲಿ ಇದೇ 23, 23 ಹಾಗೂ 25 ರಂದು ರಾಜ್ಯ ಮಟ್ಟದ ಕಿತ್ತೂರು ಉತ್ಸವ ನಡೆಯಲಿದ್ದು, ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಉತ್ಸವ ನಡೆಯುತ್ತಿರುವುದಕ್ಕೆ, 2 ಕೋಟಿ ಅನುದಾನ ಕೊಟ್ಟಿದಕ್ಕೆ ಹಾಗೂ ರಾಜ್ಯದ ಮೂಲೆ ಮೂಲೆಗೂ ವೀರ ರಾಣಿ ಚನ್ನಮ್ಮನವರ ಜ್ಯೋತಿಯನ್ನು ತಲುಪಿಸಿದಕ್ಕೆ ಕಿತ್ತೂರು ನಾಡಿನ ಹಿರಿಯ ರಾಜಕಾರಣಿ, ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಆದ ಶಿವಾನಂದ ಕೌಜಲಗಿಯವರು ಹಾಲಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಆದ ಬಸವರಾಜು ಬೊಮ್ಮಾಯಿ ಹಾಗೂ ಕಿತ್ತೂರು ಶಾಸಕರಾದ ಮಹಾಂತೇಶ್ ದೊಡ್ಡಗೌಡರ ಅವಿರತ ಪ್ರಯತ್ನವನ್ನು ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ರವರು ನಡೆಸಿದ ಮುಕ್ತ ಸಂವಾದದಲ್ಲಿ ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವರದಿ:ಬಸವರಾಜು