ಅರಭಾವಿ:ಜಯ ಕರ್ನಾಟಕ ಸಂಘಟನೆಯ ಅರಭಾಂವಿಯ ಘಟಕದ ಉದ್ಘಾಟನಾ ಸಮಾರಂಭ ಶುಕ್ರವಾರದಂದು ಪಟ್ಟಣದ ವಾರಿ ಸಮೀಪ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮಲಿಕಜಾನ ಮೀ ತಲವಾರ, ನಾಡು,ನುಡಿ,ನೆಲ,ಜಲ, ಸಮಸ್ಯೆ ಉಂಟಾದಾಗ ಸಮಾಜದ ಎಲ್ಲಾ ಭಾಂದವರು ಒಂದಾಗಿ ಶ್ರಮಿಸಿ ಕರ್ನಾಟಕದ ಆಸ್ಮೀಯತೆಯನ್ನು ಉಳಿಸುವ ಅವಶ್ಯಕತೆ ಇದೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ
ಅಡವೆಪ್ಪ ಬಿಲಕುಂದಿ, ರಮೇಶ ಮಾದರ, ರಿಯಾಜ್ ಯಾದವಾಡ, ಪ.ಪಂ. ಮುಖ್ಯಾಧಿಕಾರಿ ತುಕಾರಾಮ ಮಾದರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯ, ಗೋಕಾಕ ತಾಲೂಕ ಅಧ್ಯಕ್ಷರಾದ ಅಜೀಜ ಮೊಕಾಶಿ, ಬಾಳೇಶ ಪೂಜೇರಿ, ದಸ್ತಗೀರ್ ಮುಲ್ಲಾ, ಮುಬಾರಕ್ ಬಾಳೆಕುಂದ್ರಿ,
ಅರಭಾಂವಿ ಘಟಕದ ಅಧ್ಯಕ್ಷರಾಗಿ ರಸೂಲ ಮಕಾನದಾರ ಇವರಿಗೆ ಆಯ್ಕೆ ಮಾಡಲಾಗಿದೆ, ಅಬ್ದುಲ್ ಮಜ್ಜೀದ ಶೇಗಡಿ, ಜಾವೀದ ಶೇಗಡಿ ಸೇರಿದಂತೆ ಅನೇಕ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.