*ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ*

Share The News

ಹುಕ್ಕೇರಿ: ಎಂ. ಇ ಎಸ್ ಕಾರ್ಯಕರ್ತನ ಅಟ್ಟಹಾಸ ಒರ್ವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಹುಕ್ಕೇರಿ ತಾಲೂಕಿನ ಗೋಟುರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯವಾಗಿ ಅಲ್ಲಿನ ಗ್ರಾಮಸ್ಥರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಆ ಒಂದು ಗ್ರಾಮದಲ್ಲಿ ಲಕ್ಷ್ಮಿ ಗುಡಿ ಹತ್ತಿರ ನಾಟಕ ನಡೆಯುತ್ತಿತ್ತು ಇದನ್ನು ನೋಡಲು ಹನುಮಂತ ಮಲ್ಲಪ್ಪ ಶೇಖನ್ನವರ ಇದ್ದನು ಅಲ್ಲೇ ಹತ್ತಿರ ಮನೆ ಇರುವುದರಿಂದ ತಮ್ಮ ಬೈಕನ್ನು ಬದಿಗೆ ನಿಲ್ಲಿಸಿ ನಾಟಕವನ್ನು ನೋಡುತ್ತಾ ನಿಂತಿರುವಾಗ ದೀಪಕ್ ಸನಧಿ ಗಡಹಿಂಗ್ಲಜ್ ತಾಲೂಕಿನ ಅಳಗುಂಡಿ ಗ್ರಾಮದವನಾದ ಇವನು ಫಾರ್ಚನರ್ ಕಾರಿನಲ್ಲಿ ಬಂದು ಆ ಕಾರ್ ನಲ್ಲಿ ಇದ್ದ ಡ್ರೈವರ್ ಬಂದು
ಗಾಡಿ ಏಕೆ ಅಡ್ಡ ನಿಲ್ಲಿಸಿದ್ದಿ ಎಂದು ಕೇಳಿದ. ಅದಕ್ಕೆ ಹನುಮಂತನು ಮರು ಉತ್ತರ ನೀಡದೆ ಸುಮ್ಮನಿದ್ದನು. ನಂತರ ರಾತ್ರಿ 12 ಗಂಟೆಗೆ ಅಡಿವೆಪ್ಪ ತಿಗಡಿ ಎಂಬಾತನಿಗೆ ದೀಪಕ್ ಸನದಿ ಪೊನ ಮಿಖಾಂತರ ಕರೆಯನ್ನು ಮಾಡಿ ಹಣುಮಂತನನ್ನು ಕರೆದುಕೊಂಡು ಬಾ ಅವನ ಹತ್ತಿರ ಮಾತಾಡಬೇಕು ಎಂದು ಹೇಳಿದರು. ಅದಕ್ಕೆ ಹಣುಮಂತ ಅವನು ನಾನು ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದರು ಅದಕ್ಕೆ ಒಪ್ಪದ ಇವರು ಅವನನ್ನು ಒತ್ತಾಯದ ಮೂಲಕ ಕರೆಯಿಸಿ ಗೋಟುರು ಗ್ರಾಮದ ಸಮೀಪ ಸಾಯಿ ಧಾಭಾ ಹತ್ತಿರ ಹಣಮಂತನನ್ನ ಮತ್ತು ಅವನ ಗೆಳೆಯನಾದ ಅಡಿವೆಪ್ಪ ಹೋಗುತ್ತಾರೆ ಅಲ್ಲಿ ಹೋದಾಗ ದೀಪಕ್ ಸನದಿ ಅವರು ಫಾರ್ಚನರ್ ಕಾರ್ ಗಾಡಿ ಯಿಂದ ಬಂದು ಹೊಡೆಯಲು ಪ್ರಾರಂಭಿಸಿದರು. ಮೊದಲು ಕಪಾಳಕ್ಕೆ ಹೊಡೆದು ಪಿಸ್ತುಲ್ ತೆಗೆದು ಹಿಂದುಗಡೆಯಿಂದ ಹನೆಯ ಮೇಲೆ ಗುದ್ದಿದನು. ಗಾಡಿಯಲ್ಲಿ ಕುಳಿತುಕೋ ಇಲ್ಲವಾದರೆ ನಿನ್ನನ್ನು ಶೂಟ್ ಮಾಡುತ್ತೇನೆ ಎಂದು ಹೇಳುತ್ತಾನೆ. ಅವನ ತಮ್ಮನಾದ ಓಂಕಾರ್ ಸನದಿ ಹಾಗೂ ಡ್ರೈವರ್ ಇದ್ದರು ಇವರೆಲ್ಲರೂ ಸೇರಿ ಹನುಮಂತನನ್ನು ಹಾಗೂ ಅಡಿವಪ್ಪನನ್ನು ಕಾರಿನಲ್ಲಿ ಹಾಕಿಕೊಂಡು ಗೋಟೂರು ಗ್ರಾಮದ ಹತ್ತಿರ ಇರುವ ಹಳ್ಳದ ಹತ್ತಿರ ಕರೆದುಕೊಂಡು ಹೋಗಿರುತ್ತಾರೆ.

ಹಣುಮಂತನನ್ನು ಗಾಡಿಯಿಂದ ಕೆಳಗೆ ಇಳಿಸಿ ಬಿದಿರಿನ ಕಟ್ಟಿಗೆಯಿಂದ ಹಾಗೂ ಬೆಲ್ಟಿನಿಂದ ಬೆನ್ನಿಗೆ ಕಾಲಿಗೆ ತುಂಬಾ ಗಾಯ ಆಗೋ ರೀತಿಯಲ್ಲಿ ಹೊಡೆದಿರುತ್ತಾರೆ. ಹನುಮಂತ್ ಶೇಖನವರ್ ನಾನೊಬ್ಬ ದಲಿತ ನನಗೆ ತುಂಬಾ ಅನ್ಯಾಯವಾಗಿದೆ. ದೀಪಕ್ ಸನಧಿ ಇವರು ಎಂ. ಈ.ಎಸ್. ಸಂಘದ ಮುಖಂಡರಾಗಿರುತ್ತಾರೆ.ಇವನು ಒಬ್ಬ ರೌಡಿಸಹ ಆಗಿರುತ್ತಾನೆ, ಇವನಿಗೆ ಇಲ್ಲಿಗೆ ಬರಲು ಪರ್ಮಿಷನ್ ಸಹ ಕೊಟ್ಟಿರುತ್ತಾರೆ ಎಂ ಇ ಎಸ್ ರವರಿಗೆ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಬರಲು ಅವಕಾಶ ಕೊಟ್ಟಿಲ್ಲ ಆದರೂ ಸಹ ಇವನು ಬಂದು ಗುಂಡಾ ವರ್ತನೆ ತೋರಿದ್ದಾನೆ ಎಂದು ಹನುಮಂತ್ ಶೇಖಣ್ಣವರ್ ಹೇಳಿದ್ದಾರೆ. ಇದರ ಬಗ್ಗೆ ಸಂಕೇಶ್ವರ್ ಪೊಲೀಸ್ ಠಾಣೆಯಲ್ಲಿ ದೀಪಕ್ ಸನದಿ ಮೇಲೆ ದೂರು ದಾಖಲಿಸಿದ್ದಾರೆ. ಆದರೂ ಸಹ ಇನ್ನೂವರೆಗೂ ಅವನನ್ನು ಬಂದಿಸಿಲ್ಲ ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.ಇನ್ನೂ ಸಂಕೇಶ್ವರ ಪೋಲಿಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ರೀತಿ ಚೆಕ್ ಮೆಟ ಮಾಡುತ್ತಾರೆಂದು ಕಾದು ನೋಡಬೇಕಿದೆ.

ವರದಿ ಬ್ರಹ್ಮಾನಂದ ಪತ್ತಾರ


Share The News

Leave a Reply

Your email address will not be published. Required fields are marked *

error: Content is protected !!