ಘಟಪ್ರಭಾ; ಸತೀಶ ಜಾರಕಿಹೊಳಿಯವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸುತ್ತಿರುವ ವೇಳೆ ಅಲ್ಲಿಂದ ಹೊರಟಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಪ್ರತಿಭಟನೆಕಾರರಿಂದ ಮುತ್ತಿಗೆ ಹಾಕಿದ ಪ್ರತಿಭಟಿಸಿದ ಘಟನೆ ಶುಕ್ರವಾರ ಸಂಜೆ ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ನಡೆಯಿತು.
ಸತೀಶ ಜಾರಕಿಹೊಳಿಯವರ ವಿರುದ್ಧ ಪಿತೂರಿ ಮತ್ತು ಅವರ ತೇಜೋವಧೆಯನ್ನು ವಿರೋಧಿಸಿ ದಲಿತಪರ, ಕನ್ನಡಪರ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಇಲ್ಲಿಂದ ತೆರಳುತ್ತಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಕಾರಿಗೆ ಸತೀಶ ಜಾರಕಿಹೊಳಿಯವರ ಬೆಂಬಲಿಗರು ತಡೆಯಲು ಮುಂದಾಗಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಮುಂದಾದ ಪೋಲೀಸರು ಹರಸಾಹಸ ಪಡಬೇಕಾಯಿತು.