ಸ್ಥಳ : ಬೈಲಹೊಂಗಲ
ಹೌದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹೊಳೆ ಹೊಸೂರು ಗ್ರಾಮದ ಎಂಕೆ ಹುಬ್ಬಳ್ಳಿ ರಸ್ತೆಯಲ್ಲಿ ಬರುವ ಅನುಭವ ಮಂಟಪ ಕಾರ್ಯಾಲಯದಲ್ಲಿ ಇಂದು ಕನ್ನೇರಿ ಮಠದ ಶ್ರೀಗಳು, ಕಿತ್ತೂರು ಕಲ್ಮಠ ಶ್ರೀಗಳು, ನಿಚ್ಚನಕಿ, ಹಾಗೂ ಧಾರವಾಡ , ದೇವರ ಶಿಗಿಹಳ್ಳಿ ಶ್ರೀಗಳ ದಿವ್ಯಸಾನಿದ್ಯದಲ್ಲಿ, ಡಾ. ಜಗದೀಶ್ ಹಾರೋಗೋಪ್ಪ, ಮಾಜಿ ಸಿ.ಎಂ ಸುಪುತ್ರ ಮಹಿಮಾ ಪಟೇಲ್ ಸೇರಿದಂತೆ ಎಲ್ಲಾ ನೇತೃತ್ವದಲ್ಲಿ, ಸಮಸ್ತ ರೈತರು, ಎಲ್ಲಾ ರೈತಪರ ಹೋರಾಟಗಾರರ ಸಮ್ಮುಖದಲ್ಲಿ ಶ್ರೀಗಳ ನಡೆ, ರೈತರ ಕಡೆ ಕಾರ್ಯಕ್ರಮವು ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಡೆಯಿತು, ಬೆಳಿಗ್ಗೆ 9.30 ಕ್ಕೆ ಆರಂಭವಾದ ಈ ಕಾರ್ಯಕ್ರಮದಲ್ಲಿ ರೈತರಿಗೆ ಸಾವಯುವ ಕೃಷಿ ಬಗ್ಗೆ ಕನ್ನೇರಿ ಶ್ರೀಗಳು ಸಮಗ್ರವಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಕಿತ್ತೂರು ಶ್ರೀಗಳು, ಹಾಗೂ ಕಾರ್ಯಕ್ರಮದ ರುವಾರಿಗಳು ಆದ ಜಗದೀಶ್ ಹಾರೋಗೋಪ್ಪರವರು ಮಾಹಿತಿನೀಡಿದರು, ಕಿತ್ತೂರು, ಬೈಲಹೊಂಗಲ, ಸವದತ್ತಿ, ಖಾನಾಪುರ ತಾಲ್ಲೂಕಿನ ಸಮಸ್ತ ರೈತ ಬಾಂಧವರು ಉಪಸ್ಥಿತರಿದ್ದರು, ಎಲ್ಲರಿಗೂ ಸಹ ಊಟದ ವ್ಯವಸ್ಥೆ ಮಾಡಲಾಗಿತ್ತು.
ವರದಿ:ಬಸವರಾಜು