ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಗ್ರಾಮ ದೇವತೆ (ದ್ಯಾಮವ್ವ) ದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಕಳಸಾರೋಹಣ ಕಾರ್ಯಕ್ರಮವು ದಿ.13 ಮತ್ತು 14 ರಂದು ಎರಡು ದಿನಗಳವರೆಗೆ ಜರುಗಲಿದೆ.
ದಿ.13 ರಂದು ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ನೂತನ ದೇವಾಲಯದಲ್ಲಿ ಗೋಮಾತೆ ಗೃಹ ಪ್ರವೇಶ, ನವಗ್ರಹ ಶಾಂತಿ ಗಾಯತ್ರಿ ಹೋಮ ಜರುಗಲಿದ್ದು, ಸಂಜೆ 4 ಗಂಟೆಗೆ ಶ್ರೀ ಪರಮೇಶ್ವರ ಗುಡಿಯಿಂದ ಶ್ರೀ ಗ್ರಾಮದೇವತೆಯ (ದ್ಯಾಮವ್ವ) ದೇವಸ್ಥಾನದವರೆಗೆ ಕಳಶವನ್ನು ಹಾಗೂ ವಾದ್ಯಮೇಳದೊಂದಿಗೆ ಉತ್ಸವದಿಂದ ತರಲಾಗುತ್ತದೆ. ಸಂಜೆ ಮಹಾಪ್ರಸಾದ ಜರುಗಲಿದೆ.
ದಿ.14ರಂದು ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ದೇವಿ ಪ್ರತಿಷ್ಠಾಪನೆ ಹಾಗೂ ಪೂಜ್ಯರಿಂದ ಕಳಸಾರೋಹಣ ಕಾರ್ಯಕ್ರಮ ಜರುಗಲಿದ್ದು, ನಂತರ ಪ್ರವಚನ ಕಾರ್ಯಕ್ರಮ ನಡೆಯಲಿದ್ದು ಅರಭಾವಿಮಠದ ದುರದುಂಡೇಶ್ವರಮಠದ ಶ್ರೀ ಗುರು ಬಸವಲಿಂಗ ಮಹಾಸ್ವಾಮಿಗಳು, ಇಂಚಲದ ಡಾ: ಶಿವಾನಂದ ಭಾರತಿ ಮಹಾಸ್ವಾಮಿಗಳು, ಅಂಕಲಗಿ-ಕುಂದರಗಿ ಮಠದ ಅಮರೇಶ್ವರ ಮಹಾಸ್ವಾಮಿಗಳು, ಘಟಪ್ರಭಾ ಗುಬ್ಬಲಗುಡ್ಡದ ಡಾ: ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬಬಲಾದಿಮಠದ ಗುರು ಚಕ್ರವರ್ತಿ ಶಿವಯ್ಯಾ ಮಹಾಸ್ವಾಮಿಗಳು, ನಯಾನಗರದ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀಶೈಲಯ್ಯಾ ಮಹಾಸ್ವಾಮಿಗಳು, ದೇವಿ ಅರ್ಚಕರಾದ ಶಂಕರ ಬಡಿಗೇರ ಅವರು ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸಚಿವ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಲಕ್ಷ್ಮಣ ಆಲೋಶಿ, ದಯಾನಂದ ಬೆಳಗಾವಿ, ಶಿಂದಿಕುರಬೇಟ ಗ್ರಾ.ಪಂ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪಿಕೆಪಿಎಸ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಕೆಎಂಎಫ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮದ ಜಂಗಮರು, ಗುರು ಹಿರಿಯರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸುವರು ಎಂದು ಗ್ರಾಮದೇವಿ ಕಮೀಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೋಟೋ: 11 ಜಿಪಿಬಿ-1
ಶ್ರೀ ಗ್ರಾಮದೇವತೆ(ದ್ಯಾಮವ್ವ) ದೇವಿಯ ನೂತನ ದೇವಸ್ಥಾನ
ವರದಿ: ಅಪ್ಪಾಸಾಬ ಮುಲ್ಲಾ