ಘಟಪ್ರಭಾ: ಉತ್ತಮ ಕಲಿಕೆ ಹಾಗೂ ಅಭ್ಯಾಸವನ್ನು ಮಾಡುವುದರಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು ಎಂದು ಅಡಿವಿ ಸಿದ್ದೇಶ್ವರ ತೋಟ ನಾಗನೂರು ಶಾಲೆಯ ಶಿಕ್ಷಕರಾದ ಅನಿಲ್ ಬಂಡಾರಿ ಹೇಳಿದರು.
ಅವರು ಗುರುವಾರ ಸಂಜೆ ಘಟಪ್ರಭಾ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಪ್ಲಾಟ್ ಮಲ್ಲಾಪೂರ ಪಿಜಿ ಶಾಲೆಯ ಏಳನೇ ತರಗತಿಯ ಮಕ್ಕಳ ಬಿಳ್ಕೊಡುವ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸರಾಗಿ ಮಾತನಾಡಿದರು. ವಿದ್ಯುತ್ ಸಂಪರ್ಕವಿಲ್ಲದ ಕೊಳಗೇರಿಯಲ್ಲಿ ವಾಸವಾಗಿದ್ದ ಸೈಕಲ್ ರಿಕ್ಷಾ ಚಾಲಕನ ಮಗ ತನ್ನ ಮೊದಲ ಪ್ರಯತ್ನದಲ್ಲಿ 48ನೇ ರಾಂಕ್ ದೊಂದಿಗೆ 2006ರಲ್ಲಿ ಐಎಎಸ್ ಪಾಸಾದ ಜೈ ಸ್ವಾಲ ಅವರ ನೈಜ ಘಟನೆ ನಮ್ಮ ಮಕ್ಕಳಿಗೆ ಸ್ಪೂರ್ತಿಯಾಗಿ ಅಂತಹ ಮಕ್ಕಳನ್ನು ನಿರ್ಮಾಣ ಮಾಡುವಲ್ಲಿ ಪಾಲಕರು ಶಿಕ್ಷಕರು ಪಾತ್ರ ಬಹಳ ಮುಖ್ಯವಾದದು ಎಂದರು.
ಗ್ರಾ. ಪಂ. ಮಾಜಿ ಅಧ್ಯಕ್ಷ ಡಿಎಂ ದಳವಾಯಿ, ಕಾರ್ಯಕ್ರಮದ ಅಧ್ಯಕ್ಷ ವಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದಪ್ಪ ತಳವಾರ್, ಆರ್.ಎಸ್. ಗೋಡೆರ. ನ್ಯಾಯಾವಾದಿ ಡಿ.ಪಿ ಗುಡಾಜ. ಹನುಮಂತ ಕರೇವ್ವಗೋಳ, ಶಂಕರ್ ಹಂಚಿನಾಳ, ಸಂತೋಷ್ ಸರಿಕರ, ಬಾಬು ದೊಡಮನಿ, ಪ.ಪಂ ಮಾಜಿ ಸದಸ್ಯರಾದ ಸಲಿಮ ಕಬ್ಬೂರ, ಅಶೋಕ ಸರ್ವಿ, ಶಿಂಧಿಕುರಬೇಟದ ಸ.ಸಿ ಶಾಲೆಯ ಪ್ರಧಾನ ಗುರುಗಳಾದ ಶ್ರೀಕಾಂತ ಹಂಚಿನಾಳ, ಸಿದ್ದಪ್ಪ ತಳವಾರ್, ಕನ್ನಡ ಸೇನೆ ತಾಲೂಕ ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ದಿಲೀಪ್ ಕಲಾರಕೊಪ್ಪ, ಶಾನವಾಜ ದಬಾಡಿ, ಮದನಿ ಮೀಯಾ ಶಾಲೆ ಪ್ರಧಾನ ಗುರುಗಳಾದ ಎಮ.ಎಮ್. ಬಾಗಿ ಇದ್ದರು.
ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅತಿಥಿ ಗುರುಗಳು, ಗುರುಮಾತೆಯರನ್ನು, ಅಡಿಗೆ ಸಿಬ್ಬಂದಿಯವರನ್ನು ಸತ್ಕರಿಸಲಾಯಿತು.
2024ರಿಂದ ಶೈಕ್ಷಣಿಕ ವರ್ಷ ಜೂನ್ ತಿಂಗಳಲ್ಲಿ ದಾಖಲಾತಿಯಾಗುವ ಮಕ್ಕಳಿಗೆ ಉಚಿತವಾಗಿ ೨೦ ಸ್ಕೂಲ್ ಬ್ಯಾಗ್ಗಳನ್ನು ಶ್ರೀಮತಿ ಕಾಂಚಿನಾ ಮಳಿಮಠ. ಶಾಲೆಗೆ ನೀಡಿದರು.
ಪ್ರಧಾನ ಗುರುಗಳಾದ ಎನ್.ಆರ್.ಬಾಗಲೆ, ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಪ್ರೇಮಾ ಘಟವಾಳಿಮಠ. ಸ್ವಾಗತಿಸಿದರು, ಮಾದೇವಿ ಹರಿಜನ್ ಮತ್ತು ಕಲ್ಪನಾ ಭಂಡಾರಿ ಅತಿಥಿ ಗುರುಮಾತೆ ನಿರೂಪಿಸಿದರು. ಪ್ರಮೋದ್ ಹೊರಟ್ಟಿ ಬಹುಮಾನ ವಿತರಿಸಿದರು. ಯಲ್ಲವ್ವ ಹುಕ್ಕೇರಿ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಎಫ್. ವೈ ಚಿಗರಿ ಗುರುಗಳು ವಂದಿಸಿದರು.