ಘಟಪ್ರಭಾ: ಇಂದು ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಬಂದಿದೆ. ಆದರೆ ಅಲ್ಲಿಯೂ ಕುಟುಂಬ ರಾಜಕಾರಣ ನಡೆಯುತಿರುವುದರಿಂದ ಮಹಿಳೆಯರಿಗೆ ಮನ್ನಣೆ ಇಲ್ಲದಂತಾಗಿದೆ. ಅಂಥ ಸಂದರ್ಭದಲ್ಲಿ ಸಾಮಾನ್ಯ ಮಹಿಳೆಯರಿಗೆಲ್ಲಿ ಅವಕಾಶ ಸಿಗುತ್ತದೆ ಹಾಗಾಗಿ ಇಂದು ಮೀಸಲಾತಿಯನ್ನೇ ಮರು ಚಿಂತನೆಗೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಲೇಖಕಿ ಹಂಪಿ ವಿವಿಯ ವಿಶ್ತಾಂತ ಕುಲಪತಿ ಡಾ. ಮಲ್ಲಕಾ ಘಂಟಿ ಅಭಿಪ್ರಾಯಪಟ್ಟರು.
ಅವರು ಗುರುವಾರ ರಂದು ಘಟಪ್ರಭಾದ ಎನ್.ಎಸ್.ಹರ್ಡೀಕರ್ ಸೇವಾದಳದಲ್ಲಿ ಕರ್ನಾಟಕ ಲೇಖಿಕಿಯರ ಸಂಘ ಮತ್ತು ಕರ್ನಾಟಕ ಲೇಖಿಕಿಯರ ಸಂಘ ಬೆಳಗಾವಿ ಜಿಲ್ಲಾ ಶಾಖೆ ಹಾಗೂ ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ನಡೆದ ಸಮುದ್ರದ ತಡಿಯಲೊಂದು ಮನೆಯ ಮಾಡಿ ಎಂಬ ಮಹಿಳೆಯರ ಏಕವ್ಯಕ್ತಿ ನಾಟಕ ರಚನಾ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಾವು ಎಲ್ಲಿಯವರಿಗೆ ಪುರಷರು ಹೇಳಿದ ಮಾತುಗಳನ್ನೇ ಕೇಳುತ್ತ ಬರುವುದು, ನಾವು ನಮ್ಮದೇ ಮಾತುಗಳನ್ನು ಆಡುವುದು ಯಾವಾಗ ನಮ್ಮದೇ ಧ್ವನಿ ಬರುವುದು ಯಾವಾಗ ಹಾಗಾಗಿ ಮಹಿಳೆಯರ ತರ್ಕದ್ಧವಾಗಿ ಮಹಿಳೆಯರಿದ್ದೆಡೆ ಸಂಕಟಗಳನ್ನು ಒಳಗೊಂಡಂತಹ ನಾಟಕಗಳನ್ನು ರಚಿಸುವಂತಾಗಬೇಕು. ಬುದ್ಧ ಅಂಬೇಡ್ಕರ್ ಅವರನ್ನು ಅರಾಧಿಸುತ್ತೇವೆ. ಅವರನ್ನು ಭೂಮಿಗೆ ತಂದವರು ಮಹಿಳೆಯರು. ನಾವು ಎಂದಿಗೆ ಆ ಸ್ಥಾನಕ್ಕೆ ಬರುವುದು? ಎಂದು ಪ್ರಶ್ನಿಸಿದರು. ಮಹಿಳೆಯರು ಮನಶಾಸ್ತ್ರೀಯ ಹಿನ್ನೆಲೆಯಲ್ಲಿ ಹೆಣ್ಣಿನ ಮಾನಸಿಕ ತುಮಲವನ್ನು ಹಿಡಿದಿಡುವ ನಾಟಕ ಬರಬೇಕು. ಒಬ್ಬ ಗಂಡ ಬಸವಣ್ಣನನ್ನು ಹಂಚಿಕೊಂಡ ಇಬ್ಬರು ಹೆಂಡತಿಯರ ಮನಸ್ಥಿತಿ, ಐವರು ಗಂಡಂದಿರನ್ನು ಹಂಚಿಕೊಂಡ ದ್ರೌಪದಿಯ ಮನಸ್ಥಿತಿಗಳನ್ನು ಹೊರಗೆಡುವಂತಹ ಚಿತ್ರಣಗಳು ಬೇಕು ಎಂದು ಹೇಳಿದರು.
ಶಿಬಿರವನ್ನು ಶ್ರೀಕೃಷ್ಣ ಪಾರಿಜಾತದ ಒಂದು ತುಣುಕನ್ನು ಹೇಳುವುದರ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದ ಕಲಾವಿದ ವಿಶ್ವೇಶ್ವರಿ ಹಿರೇಮಠ ಅವರ ಏಕವ್ಯಕ್ತಿ ನಾಟಕವೆಂಬುದು ಇತ್ತೀಚಿಗಿನ ಪ್ರಯೋಗ ಅನುವಾದಗಳ ಮೂಲಕವೇ ಕನ್ನಡದಲ್ಲಿ ನಾಟಕ ರಚನೆ ಆರಂಭವಾಯಿತು. ಈಗ ನಾಟಕಗಳು ೩ ತಾಸಿನಿಂದ ಒಂದೂವರೆ ತಾಸಿಗೆ ಇಳಿದಿದೆ. ಅಂದರೆ ಕಾಲಕಾಲಕ್ಕೆ ನಾಟಕದ ಅವಧಿ ಮತ್ತು ವಿಧಾನಗಳಲ್ಲಿ ಸಾಕಷ್ಟು ಪ್ರಯೋಗಗಳಾಗಿವೆ. ಈ ಶಿಬಿರದ ಮೂಲಕ ಒಳ್ಳೆಯ ನಾಟಕಗಳು ಹೊರಬರಲಿ ಎಂದು ಆಶಿಸಿದರು.
ಶಿಬಿರದ ನಿರ್ದೇಶಕರಾದ ನಟರಾಜ ಹೊನ್ನವಳ್ಳಿಯವರು ಕಲೆ ಎಂದರೆ ಸುತ್ತಿಗೆಯಂತೆ ಅದು ವಸ್ತುವೊಂದನ್ನು ರೂಪಿಸುವ ಪ್ರಯತ್ನ ಮಾಡುತ್ತದೆ. ಕನ್ನಡಿ ಕೇವಲ ಕಾಣಿಸುತ್ತದೆ ರೂಪಿಸುವುದಿಲ್ಲ ನಾಟಕ ರಚನೆಗೆ ಮೊದಲು ನಾಟಕ ಓದುವುದು ಹೇಗೆ ಮತ್ತು ನೋಡುವುದು ಹೇಗೆ ಎಂದು ಮೊದಲು ತಿಳಿಯಬೇಕು. ಸಾಹಿತ್ಯ ರಂಗಭೂಮಿಯ ಒಂದಂಶ ಮಾತ್ರ ನಟನಟಿಯರು ವಸ್ತು, ಪ್ರಸತುತ ರಾಜಕೀಯ, ಸಾಮಾಜಿಕ ಪರಿಸ್ಥಿತಿ, ನಿರ್ವಹಣೆ ಎಲ್ಲವೂ ಮುಖ್ಯ ನಾಟಕಕ್ಕೆ ತತ್ವ ತಂತ್ರ ಎರಡೂ ಮುಖ್ಯ ಎಂದು ನಾಟಕ ರಚನೆಯ ಕುರಿತು ಮಾತನಾಡಿದರು.
ಆರಂಭದಲ್ಲಿ ಆಶಯ ನುಡಿಯನ್ನಾಡಿದ ಕರ್ನಾಟಕ ಲೇಖಿಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಇಡೀ ಭಾರತದಲ್ಲಿಯೇ ಲೇಖಿಕಿಯರಿಗಾಗಿಯೇ ಇರುವ ಏಕೈಕ ಸಂಘ ಕರ್ನಾಟಕ ಲೇಖಿಕಿಯರ ಸಂಘ ಮಾತ್ರ. ಮಹಿಳಾ ಮಂಡಳಿಗಳು ಬೇಕಾದಷ್ಟಿವೆ. ಆದರೆ ಲೇಖಿಕಿಯರ ಸಂಘ ಅಂತ ಇರುವುದು ನಮ್ಮದು ಮಾತ್ರ ಸಾಹಿತ್ಯದೊಂದಿಗೆ ಕಲೆ ಮತ್ತು ಸಂಸ್ಕೃತಿ ಎಲ್ಲವನ್ನೂ ಈ ಸಂಘ ಒಳಗೊಂಡಿದೆ. ನಾಲ್ಕು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಬಂದ ಉತ್ತಮ ನಾಟಕಗಳನ್ನು ಆಯ್ದು ಕಲೇಸಂ ವತಿಯಿಂದ ಪ್ರಕಟಿಸುವ ಉದ್ದೇಶವಿದೆ ಎಂದರು.
ಮಾನವ ಬಂಧುತ್ವ ವೇದಿಕೆಯ ಪ್ರಾಧ್ಯಪಕರಾದ ಪ್ರದೀಪ್ ಮಾಲ್ಗುಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಿಕಿಯರ ಸಂಘದ ಬೆಳಗಾವಿ ಶಾಖೆಯ ಅಧ್ಯಕ್ಷರಾದ ಗಂಗಾಸ್ವಾಮಿ ಸ್ವಾಗತಿಸಿದರು. ನಂತರ ವಿವಿಧ ಗೋಷ್ಠಿಗಳು ನಡೆದವು. ಡಾ.ರಾಮಕೃಷ್ಣ ಮರಾಠೆ, ಸುಧಾ ಆಡುಕಳ, ಡಾ.ಡಿ.ಎಸ್.ಚೌಗಲೆಯವರು ಅನುಕ್ರಮವಾಗಿ ರಂಗಭೂಮಿಯಲ್ಲಿ ಕಂಡ ಹೆಣ್ಣಿನ ಚಿತ್ರಣಗಳು ವಸ್ತುವೊಂದು ನಾಟಕವಾಗುವ ಬಗೆ ಮರಾಠಿ ರಂಗಭೂಮಿಯಲ್ಲಿ ಹಿನ್ನಲೆಯಲ್ಲಿ ಕಂಡ ಸ್ತ್ರೀ ಚಿತ್ರಣಗಳ ಕುರಿತು ಮಾತನಾಡಿದರು ಕೊನೆಯಲ್ಲಿ ಶಿಬಿರಾರ್ಥಿಗಳಿಂದ ಸಂವಾದ ನಡೆಯಿತು. ಜ್ಯೋತಿ ಬದಾಮಿ ವಂದಿಸಿದರು ಕರ್ನಾಟಕ ಲೇಖಿಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಖೋಟ:- ಇದುವರೆಗೆ ಮಹಿಳಾ ಏಕವ್ಯಕ್ತಿ ನಾಟಕದ ಕುರಿತಾಗಿ ನಡೆದ ಮೊದಲ ಮಹಿಳಾ ಕಮ್ಮಟವಿದು. ಮಹಿಳೆಯರು ತಮ್ಮನ್ನು ಕುರಿತು ತಾವೇ ಬರೆದು ನಾಟಕಗಳಲ್ಲಿ ಮಹಿಳೆಯರ ಬದುಕು, ಹೋರಾಟ, ಸಂಘರ್ಷಗಳುಒಳಗೊಂಡಿರುತ್ತದೆ. ಮಹಿಳೆಯರ ಬದುಕೆ ಒಂದು ಏಕಪಾತ್ರವಾಗಿರುತ್ತದೆ. ದಿನ ನಿತ್ಯ ಆಕೆ ಹಲವು ಪಾತ್ರಗಳನ್ನು ಏಕ ಕಾಲಕ್ಕೆ ನಿರ್ವಹಿಸುತ್ತಿರುತ್ತಾಳೆ. ಹಾಗಾಗಿ ಮಹಿಳೆಯರದ್ದೆ ಏಕವ್ಯಕ್ತಿ ನಾಟಕ ಶಿಬಿರವನ್ನು ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದೇವೆ ಡಾ| ಎಚ್.ಎಲ್.ಪುಷ್ಪ ಅಧ್ಯಕ್ಷರು ಕರ್ನಾಟಕ ಲೇಖಿಕಿಯರ ಸಂಘ.
ಪೋಟೋ: ೨೩ಜಿಪಿಬಿ೩
ಘಟಪ್ರಭಾ: ಸ್ಥಳೀಯ ಎನ್.ಎಸ್.ಹರ್ಡೀಕರ ಸೇವಾದಳದ ತರಭೇತಿ ಕೇಂದ್ರದಲ್ಲಿ ಮಹಿಳೆಯರ ಏಕವ್ಯಕ್ತಿ ನಾಟಕ ಶಿಬಿರಕ್ಕೆ ಚಾಲನೆ ನೀಡುತ್ತಿರುವುದು.
—
Gpb Press Club
Ghataprabha