*ಗೋಕಾಕ ನಗರದಲ್ಲಿ ಕಾರು ಆಟೋ ಬೈಕ ಸರಣಿ ಅಪಘಾತ*

Share The News

ಬೆಳಗಾವಿ :ಜಿಲ್ಲೆಯ ಗೋಕಾಕ ತಾಲ್ಲೂಕಿನ ಬ್ಯಾಳಿಕಾಟಾ ಬಳಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿ, ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಗರದ ಕಡೆ ಆಗಮಿಸುತ್ತಿದ್ದ ಇಂಡಿಕಾ ಕಾರ್, ಇಲ್ಲಿನ ನಾಕಾ 1 ರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಆಟೊ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಇದರಿಂದ ಆಟೋದ ಹಿಂಬದಿ ಇದ್ದ ಬೈಕ್ ಗೂ ಆಟೋ ಡಿಕ್ಕಿಯಾಗಿ ಸರಣಿ ಅಪಘಾತವಾಗಿದೆ.

ಅಪಘಾತದ ಭೀಕರತೆಗೆ ಕಾರ್, ಆಟೋ, ಬೈಕ್ ಮೂರು ವಾಹನಗಳ ಚಾಲಕರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದಿಂದ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರ್ ಹಾಗೂ ಬೈಕ್ ಕೂಡ ಜಖಂಗೊಂಡಿವೆ.

ಸದ್ಯ ಗಾಯಾಳುಗಳು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Share The News

Leave a Reply

Your email address will not be published. Required fields are marked *

error: Content is protected !!