Belagavi Times

*ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಕೋಣ್ಣೂರ ಸ್ತಬ್ದ್*

ಕೊಣ್ಣೂರಲ್ಲಿ ಫೀಲ್ಡಿಗಿಳಿದ ಪಿ,ಎಸ್,ಐ,ಖಿಲಾರೆ, ಕೊಣ್ಣೂರ ಸ್ತಬ್ದ್, ಬೆಳಗಾವಿ:ಕೋರನಾ ತನ್ನ ಎರಡನೇ ಅಲೆಯ ರುದ್ರ ನರ್ತನ ನಡೆಸುತ್ತಿರುವ ಹೊತ್ತಿನಲ್ಲಿಯೂ ಬುದ್ದಿ ಕಲಿಯದ ಜನರಿಗೆ ಗೋಕಾಕ ಗ್ರಾಮೀಣ ಪಿ,ಎಸ್,ಐ,ನಾಗರಾಜ ಖಿಲಾರೆಯವರು ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ, ಶನಿವಾರ ಸಂಜೆ ಕೊಣ್ಣೂರಲ್ಲಿ ಫೀಲ್ಡಿಗಿಳಿದ ಗೋಕಾಕ ಗ್ರಾಮೀಣ ಪಿ,ಎಸ್,ಐ, ನಾಗರಾಜ ಖಿಲಾರೆ ಹಾಗೂ ಸಿಬ್ಬಂದಿಗಳು ತಾವೇ ಖುದ್ದಾಗಿ ರಸ್ತೆಗಿಳಿದು ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ಬೈಕ್ ಸವಾರರಿಗೆ ಶಾಕ್ ನೀಡಿ ರಾತ್ರಿ ಹೊತ್ತಲ್ಲಿ ಮಾರ್ಗಸೂಚಿ ಉಲ್ಲಂಘನೆ ಮಾಡಿ ರೇಷನ್ ನೀಡುತಿದ್ದ ರೇಷನ್ ಮಾಲಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಾನಿಟೈಜರ ಬಳಸಲು ತಿಳಿಸಿದರು. ಕೊರೋನಾ …

Read More »

*ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದ ಸರಕಾರ: ಒಂದೇ ದಿನದಲ್ಲಿ ಸಿಟಿ ಸ್ಕ್ಯಾನ್ ದರ ಪರಿಷ್ಕರಣೆ*

ಬೆಂಗಳೂರು: ಕೊರೋನಾ ಸಿಟಿ ಸ್ಕ್ಯಾನ್ ಮಾಡಿಸುವವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಹೆಚ್.ಆರ್. ಸಿಟಿ ಸ್ಕ್ಯಾನ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಬಿಪಿಎಲ್ ಕಾರ್ಡ್ ಇದ್ದವರಿಗೆ 1500 ರೂ. ದರ ನಿಗದಿ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೆ 2500 ರೂ. ನಿಗದಿ ಮಾಡಲಾಗಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಆಯುಕ್ತ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆನ್ನಲಾಗಿದೆ. ನಿನ್ನೆಯಷ್ಟೇ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಗೆ ಗರಿಷ್ಠ 1500 ರೂ. ದರ ನಿಗದಿಪಡಿಸಲಾಗಿತ್ತು. ಸಿಟಿ ಸ್ಕ್ಯಾನ್ ಕೆ 1500 ರೂ., ಎದೆಯ ಡಿಜಿಟಲ್ ಅಥವಾ ಸಾಮಾನ್ಯ …

Read More »

*ಬೆಳಗಾವಿ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಅಟ್ಟಹಾಸ: ಇಂದು 991 ಪಾಸಿಟಿವ್, 2 ಬಲಿ*

ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಹೊಸದಾಗಿ 991 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು. ಅದೇ ರೀತಿ ಇಬ್ಬರನ್ನು ಕಿಲ್ಲರ್ ಬಲಿ ಪಡೆದುಕೊಂಡಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 991 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 38,292ಕ್ಕೆ ಏರಿಕೆಯಾಗಿದೆ. ಇನ್ನು ಅಥಣಿ-44, ಬೆಳಗಾವಿ ನಗರ-ತಾಲೂಕು-440, ಬೈಲಹೊಂಗಲ-63, ಚಿಕ್ಕೋಡಿ-86, ಗೋಕಾಕ-81, ಹುಕ್ಕೇರಿ-36, ಖಾನಾಪುರ-12, ರಾಮದುಗ-24, ರಾಯಬಾಗ-31, ಸವದತ್ತಿ-159, ಇತರೆ 11 ಪ್ರಕರಣಗಳು …

Read More »

*ಮಾಜಿ ಸಚಿವ ರಮೇಶ ಜಾರಕಿಹೊಳಿ ಗೋಕಾಕ ತಾಲ್ಲೂಕಿನ ಅಧಿಕಾರಿಗಳ ಸಭೆ ನಡೆಸಿ ಯಾವದೇ ರೀತಿಯ ತೊಂದರೆ ಆಗದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ಹಾಗು ಹಳ್ಳಿ ಜನ ಸೀಟಿಗೆ ಬಾರದಂತೆ ಹಾಗು ಹಳ್ಳಿ ಜನ ಸೀಟಿಗೆ ಬಾರದಂತೆ ನೋಡಿಕೊಳ್ಳಿ*

ಬೆಳಗಾವಿ-ರಾಜಕೀಯ ಷಡ್ಯಂತ್ರದ ಬಿರುಗಾಳಿಗೆ ಸಿಲುಕಿ,ಜೊತೆಗೆ ಕೊರೋನಾ ಸೊಂಕಿಗೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ರಮೇಶ್ ಜಾರಕಿಹೊಳಿ ಅವರು ಇವತ್ತಿನಿಂದ ಮತ್ತೆ ಅಖಾಡಕ್ಕಿಳಿದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ,ಹಾಗು ಗೋಕಾಕಿನಲ್ಲಿ ಕೊರೋನಾ ಮಹಾಮಾರಿ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ಮಾಜಿ ಸಚಿವ,ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಇವತ್ತು ಏಕಾಏಕಿ ಬೆಳಗಾವಿ ತಾಲ್ಲೂಕ ಭವನದಲ್ಲಿ ಕೋವೀಡ್ ನಿರ್ವಹಣೆ ಕುರಿತು ಗೋಕಾಕ ತಾಲ್ಲೂಕಿನ ಅಧಿಕಾರಿಗಳ ಸಭೆ ಕರೆದು ಕೋವೀಡ್ ಚಿಕಿತ್ಸೆ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲ ವ್ಯೆವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಗೋಕಾಕ ತಾಲ್ಲೂಕಿನಲ್ಲಿ ಆಕ್ಸಿಜನ್ ವ್ಯೆವಸ್ಥೆ,ಜೊತೆಗೆ ಕೋವೀಡ್ ಕೇರ್ …

Read More »

*ತರಕಾರಿ ತರೋದಿದ್ರೆ ನಡ್ಕೊಂಡೆ ಹೋಗಬೇಕು : ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ*

ಬೆಂಗಳೂರು : ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಘೋಷಣೆಯಾಗಿದ್ದಂತ ಕೊರೋನಾ ಕರ್ಪ್ಯೂನಿಂದ ಕೊರೋನಾ ನಿಯಂತ್ರಣಗೊಂಡಿಲ್ಲ. ಹೀಗಾಗಿ ರಾಜ್ಯಾಧ್ಯಂತ ಮೇ.10ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗುತ್ತಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಬೆಳಿಗ್ಗೆ ಸುಮಾರು 2 ಗಂಟೆ ಕಾಲ ನಮ್ಮ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆಗೆ, ಕೋವಿಡ್ ನಿಯಂತ್ರಣ ಬಾರದ ಈ ಸಂದರ್ಭದಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳಬೇಕು ಎನ್ನುವ ಬಗ್ಗೆ ಚರ್ಚಿಸಲಾಯಿತು. ಈಗ ಅಧಿಕಾರಿಗಳ ಜೊತೆಗೆ ತೀರ್ಮಾನಿಸಿಲಾಗಿದೆ ಎಂದರು. ರಾಜ್ಯದಲ್ಲಿ …

Read More »

*ಪತ್ರಕರ್ತರನ್ನು ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಣೆ ಮಾಡಿದ ಸಿಎಂ*

ಬೆಂಗಳೂರು : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ) ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಕರ್ತರನ್ನು ಕೋವಿಡ್ ಫ್ರಂಟ್ ಲೈನ್ ವರ್ಕರ್ಸ್ ಎಂದು ಘೋಷಣೆ ಮಾಡಿದ್ದಾರೆ. ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಉಚಿತ ಕೋವಿಡ್-19 ಲಸಿಕೆಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಹಲವಾರು ರಾಜ್ಯಗಳಾದ ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು, ಬಿಹಾರ, ಒಡಿಶಾ ಮತ್ತು ಇತರರು ಪತ್ರಕರ್ತರನ್ನು ಮುಂಚೂಣಿ ಯೋಧರು ಎಂದು ಘೋಷಿಸಿದ್ದಾರೆ ಮತ್ತು ವ್ಯಾಕ್ಸಿನೇಷನ್ ಚಾಲನೆಯಲ್ಲಿ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದಲ್ಲಿ ಇಂದು ಮುಖ್ಯಮಂತ್ರಿ …

Read More »

*ಖ್ಯಾತ ನಿರ್ಮಾಪಕ, ವಿತರಕ ಶ್ರೀ ರಾಮುರವರ ಇನ್ನಿಲ್ಲ…!* *ಮಾಲಾಶ್ರೀ ಪತಿ ರಾಮು ಕೊರೋನಾಗೆ ಬಲಿ…!*

ಬೆಂಗಳೂರು: ಖ್ಯಾತ ನಿರ್ಮಾಪಕ ರಾಮು ತೀವ್ರ ಉಸಿರಾಟದಿಂದ ಬಳಲಿ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ರಾಮು, ಅವರು ತೀವ್ರ ಉಸಿರಾಟದಿಂದ ಬಳಲುತ್ತಿದ್ದರು. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೊರೋನಾದಿಂದ ಸಾವಿಗೀಡಾಗಿದ್ದಾರೆ

Read More »

*ನೇತ್ರ ಚಿಕಿತ್ಸೆಯಲ್ಲಿ ಅಕ್ರಮ ತನಿಖೆಗೆ ಒತ್ತಾಯ*

ನೇತ್ರ ಚಿಕಿತ್ಸೆಯಲ್ಲಿ ಅಕ್ರಮ ತನಿಖೆಗೆ ಒತ್ತಾಯ. ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಯೋಜನೆಯ ಅಭಿಯಾನದ ಅಡಿಯಲ್ಲಿ ಬಡವರ್ಗದ ಜನರಿಗೆ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡುವ ಉದ್ದೇಶದಿಂದ ಸರಕಾರ ಬಿಡುಗಡೆ ಮಾಡಿದ ಅನುದಾನವನ್ನು ಇಲಾಖೆ ಹಾಗೂ ಎನ್ ಜಿ ಓ ಗಳು ಸೇರಿ ದುರೂಪಯೋಗ ಪಡಿಸಿಕೊಂಡಿವೆ ಎಂದು ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಇವರು ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದಾರೆ. ಸರಕಾರವು ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಕುಷ್ಠರೋಗದ ಇಲಾಖೆಗೆ ವರ್ಷಕ್ಕೆ ಅನುದಾನವನ್ನು ಬಿಡುಗಡೆ …

Read More »

*ನಾಳೆ ರಾತ್ರಿಯಿಂದ ಕರ್ನಾಟಕ 14 ದಿನ ಲಾಕ್ ಡೌನ್ .ಸಿಎಂ ಯಡಿಯೂರಪ್ಪ ಘೋಷಣೆ*

ಬೆಂಗಳೂರು – ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದಲೇ ಜನತಾ ಕರ್ಫ್ಯೂ ಜಾರಿಗೆ ಸರಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮಂಗಳವಾರ ರಾತ್ರಿಯಿಂದ ಮೇ 10ರ ವರೆಗೆ ಜನತಾ ಕರ್ಫ್ಯೂ ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು. ಅಗತ್ಯ ಸೇವೆಗಳನ್ನು ಹೊರತುಪಡಿಸಿ 15 ದಿನ ಎಲ್ಲವೂ ಬಂದ್ ಆಗಲಿದೆ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿ ಮಾಡಬಹುದು. ನಂತರ ಯಾವುದಕ್ಕೂ ಅವಕಾಶವಿಲ್ಲ. ಬಸ್ …

Read More »

*ಶಿಕ್ಷಣ ಕ್ಷೇತ್ರದಲ್ಲಿ ಹಾಗು ಚಿಕ್ಕೋಡಿ ಜಿಲ್ಲಾ ಹೋರಾಟ ಮಾಡಿದ ನಿಸ್ವಾರ್ಥ ಸೇವೆ ಸಲ್ಲಿಸಿದ ಬಿ.ಆರ್,ಸಂಗಪ್ಪಗೋಳ ಇನ್ನಿಲ್ಲ*

ಬೆಳಗಾವಿ :ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದ ಬಿ.ಆರ್.ಸಂಗಪ್ಪಗೋಳ (76) ಅವರು ನಿಧನಹೊಂದಿದ್ದಾರೆ. ಅನಾರೋಗ್ಯದಿಂದ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾಯಂಕಾಲ ಕೊನೆಯುಸಿರೆಳೆದಿದ್ದಾರೆ. ಮೂಲತಃ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದವರಾಗಿದ್ದ ಸಂಗಪ್ಪಗೋಳ ಅವರು ಚಿಕ್ಕೋಡಿಯಲ್ಲಿಯೇ ನೆಲೆಸಿದ್ದರು. ಕಳೆದ ಹಲವಾರು ವರ್ಷಗಳಿಂದ ಚಿಕ್ಕೋಡಿ ಜಿಲ್ಲಾ ರಚನೆಗೆ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರು. ಸಧ್ಯ ಇವರ …

Read More »
error: Content is protected !!