ಮೂಡಲಗಿ: ಸಂಘಟನೆಯಲ್ಲಿ ಭಾಗವಹಿಸಿ ಇನ್ನೂ ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳವಂತೆ ರಾಜ್ಯ ಸಂಚಾಲಕ ಡಾ.ಡಿ.ಜೆ.ಸಾಗರ ಅವರ ಆದೇಶದ ಮೇರೆಗೆ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ತಳವಾರ(ಮಯೂರ) ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಮೂಡಲಗಿ: ಪಟ್ಟಣದ ಯುವ ಮುಖಂಡ ಶಿವಾನಂದ ಜಯವಂತ ಸಣ್ಣಕ್ಕಿ ಅವರ ಸಮಾಜ ಸೇವೆ ಗುರುತಿಸಿ ಕರ್ನಾಟಕ ರಾಜ್ಯ ದಲಿತ ಸಂಘ಼ರ್ಷ ಸಮಿತಿ(ಡಾ.ಡಿ.ಜೆ.ಸಾಗರ ಬಣ) ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ನೇಮಕ ಮಾಡಿ ಆದೇಶ ನೀಡಿದ್ದಾರೆ.
Read More »Belagavi Times
ಹಾರೂಗೇರಿ; ಅಕ್ರಮ ಬಡಾವಣೆಗೆ ಅನುಮತಿ ಮುಖ್ಯಾಧಿಕಾರಿ ವಿರುದ್ದ ಕ್ರಮಕ್ಕೆ ಆಗ್ರಹ.
ಬೆಳಗಾವಿ: ಅಕ್ರಮವಾಗಿ ಬಡಡಾವಣಗೆ ಅನುಮತಿ ನಿಡಿದ್ದಲ್ಲದೇ ಲಕ್ಷ ಲಕ್ಷ ರೂ. ಗಳ ಖಜಾನೆಗೆ ನಷ್ಟ ಮಾಡಿದ್ದಾರೆಂದು ಬೆಳಗಾವಿ ಜಿಲ್ಲೆಯ ಹಾರೂಗೇರಿ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಹಾಯಕ ಅಭಿಯಂತರರ ವಿರುದ್ದ ಕ್ರಮ ತಗೆದುಕೊಳ್ಳಬೇಕು ಎಂದು ವಕೀಲ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಆರೋಪಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳ ಪ್ರಕಾರ ಹಾರುಗೇರಿ ಪುರಸಭೆಯ ಅಧಿಕಾರಿಗಳು ಪುರಸಭೆಯ ವ್ಯಾಪ್ತಿಯಲ್ಲಿ ಎರಡು ಬಡಾವಣೆಗಳಲ್ಲಿ ಅನುಮತಿ ನೀಡಿದ್ದು ಅದರಲ್ಲಿ ಒಂದು ಬಡಾವಣೆಯನ್ನು ಅಕ್ರಮವಾಗಿ ಅನುಮೋದನೆ ನಿಡಿದ್ದಾರೆ. ಬಡಾವಣೆಗೆ ತಾಂತ್ರಿಕ ಮಂಜೂರಾತಿ …
Read More »ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್ ಹೆದರುವ ಮಗ ಅಲ್ಲ.ಯಾವುದಕ್ಕೂ ಜಗ್ಗಲ್ಲ ಇದು ಸದ್ಯಕ್ಕೆ ಮುಗೀಯುವುದಿಲ್ಲ :ಡಿಕೆ
ಬೆಂಗಳೂರು: ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್ ಹೆದರುವ ಮಗ ಅಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ. ಚುನಾವಣೆ ನಡೆಯುವವರೆಗೂ ಇರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ ಸಿಬಿಐ ದಾಳಿ ಬಳಿಕ ನಿವಾಸದಿಂದ ಹೊರಬಂದು ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಇರುವ ಎಲ್ಲ ಮಂತ್ರಿಗಳು ಹರಿಶ್ಚಂದ್ರನ ಮೊಮ್ಮಕ್ಕಳು. ಈಗ ನನಗೆ ರಾಜಕೀಯವಾಗಿ ತೊಂದರೆ ನೀಡುತ್ತಿದ್ದರಲ್ಲ ಅವರೆಲ್ಲ ಚೆನ್ನಾಗಿರಲಿ ಎಂದರು.ನಾನು ನನ್ನ ಸಹೋದರ, ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ನಿಮ್ಮ ಅಭಿಮಾನಕ್ಕೆ ತಲೆ ಬಾಗಿ ವಂದಿಸುತ್ತೇನೆ. 2016 ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಆದಾಯ ತೆರಿಗೆ …
Read More »*ಗಾಂಧಿ ಜಯಂತಿಯ ಅಂಗವಾಗಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಆರ್‌ಆರ್ ನಗರದಲ್ಲಿ ಗಾಂಧಿ ಜಯಂತಿ*
ಬೆಂಗಳೂರು : ಗಾಂಧಿ ಜಯಂತಿಯ ಅಂಗವಾಗಿ ಕರ್ನಾಟಕ ವಿಶ್ವನಿರ್ಮಾಣ ಸೇನೆ ಆರ್‌ಆರ್ ನಗರದಲ್ಲಿ ಗಾಂಧಿ ಜಯಂತಿ ಫೋಟೋಗೆ ಪೂಜೆ ಸಲ್ಲಿಸಿ ಮಕ್ಕಳಿಗೆ ಪಠ್ಯ ಪುಸ್ತಕಗಳು , ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಎರಡು ಸಾವಿರ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತ್ತನಾಡಿದ ಯುವ ಘಟಕ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಅವರು ನೆಲ ಜಲ ಭಾಷೆ ವಿಚಾರವಾಗಿ ವಿಶೇಷವಾಗಿ ರೈತಪರ ನೊಂದವರ ಪರ ನ್ಯಾಯದ ಪರ ಘರ್ಜಿಸಲು ಹುಟ್ಟುಹಾಕಿದ ಸಂಘಟನೆ ಕರ್ನಾಟಕ ವಿಶ್ವನಿರ್ಮಾಣ ಸೇನೆ, ಸಂಘಟನೆಯ ಸಾರಥಿಯಾಗಿ ಹುಟ್ಟು ಹೋರಾಟಗಾರರು ರಾಜ್ಯದ ಬಗ್ಗೆ ಜನಿಸಿದ …
Read More »ರೈತರಿಗೆ ತ್ವರಿತಗತಿಯಲ್ಲಿ ಬಿಲ್ ಸಂದಾಯ-ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಸಕ್ತ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಸಿದ್ದಲಿಂಗ ಮಹಾಸ್ವಾಮಿಗಳು
ಗೋಕಾಕ: ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ರೈತರ ಸಹಕಾರದಿಂದ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಅಶೋಕ್ ಪಾಟೀಲ ಹೇಳಿದರು. ಶುಕ್ರವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಸನ್ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಕಬ್ಬು ಪೂರೈಕೆ ಮಾಡಿದಂತೆ ಈ ಹಂಗಾಮಿನಲ್ಲಿಯೂ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಒಳಿತಿಗಾಗಿ ಸಹಕರಿಸುವಂತೆ ರೈತರಲ್ಲಿ ಕೋರಿದರು. ಅರಭಾಂವಿ …
Read More »ರಾಯಬಾಗ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿರುದ್ಧ ತನಿಖೆಗೆ ಆದೇಶ.!!!!
ರಾಯಬಾಗ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವಿರುದ್ದ ತನಿಖೆಗೆ ಆದೇಶ. ಬೆಳಗಾವಿ: ಕಡ್ಡಾಯ ನಿವೃತ್ತಿಯ ನಂತರವೂ ನೌಕರನ ಸೇವೆಯನ್ನು ಮುಂದುವರೆಸಿದಕ್ಕೆ ಬೆಂಗಳೂರಿನ ಪೌರಾಡಳಿತ ಜಂಟಿ ನಿರ್ದೆಶಕರು ರಾಯಬಾಗದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಜೀವ ಮಾಂಗ ವಿರೂದ್ದ ತನಿಖೆಗೆ ಆದೇಶಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿಯಲ್ಲಿ ಸಮುದಾಯ ಸಂಘಟಕ ಲಕ್ಷ್ಮೇಶ ಎಂಬುವರು ಶಹಪುರ ಪುರಸಭೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪೌರಾಡಳಿತ ನಿರ್ದೆಶನಾಲಯವು ಕಡ್ಡಾಯ ನಿವೃತ್ತಿಯ ಆದೇಶ ಮಾಡಿತ್ತು, ಆದರೆ ರಾಯಬಾಗದ ಮುಖ್ಯಾಧಿಕಾರಿ ಅವರನ್ನು ಅಕ್ರಮವಾಗಿ ಸೇವೆಯಲ್ಲಿ ಮುಂದುವರಿಸಿದ್ದರು. ಈ ಕುರಿತು ವಕೀಲ ಮತ್ತು ಮಾಹಿತಿ ಹಕ್ಕು …
Read More »ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್‌ರವರು ಬೆಲೆ ತೆರಬೇಕಾಗುತ್ತದೆ: ಸಿದ್ದರಾಮಯ್ಯ
ಉತ್ತರಪ್ರದೇಶದ ಪೊಲೀಸರು ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ಈ ಇಬ್ಬರು ನಾಯಕರ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆಗೆ ಯೋಗಿ ಆದಿತ್ಯನಾಥ್ ಅವರು ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ಹೊರಟಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸರು ಅಡ್ಡಹಾಕಿದ್ದಾರೆ. ಪಟ್ಟು ಬಿಡದೇ ಮುಂದೆ ಸಾಗಿದಾಗ ರಾಹುಲ್ ಗಾಂಧಿಯನ್ನು ಪೊಲೀಸರು ತಳ್ಳಾಡಿದ್ದರಿಂದ ರಾಹುಲ್ ಕುಸಿದು ಬಿದ್ದ ಘಟನೆ …
Read More »ತಪ್ಪು ಮಾಡಿಬಿಟ್ಟಿರಿ ಯಡಿಯೂರಪ್ಪನವರೇ….. ( ಮಾಧ್ಯಮದ ಮೇಲೆ ದಾಳಿ )
ತಪ್ಪು ಮಾಡಿಬಿಟ್ಟಿರಿ ಯಡಿಯೂರಪ್ಪನವರೇ….. ( ಮಾಧ್ಯಮದ ಮೇಲೆ ದಾಳಿ ) ಮೊದಲಿಗೆ ಮಾನ್ಯ ಯಡಿಯೂರಪ್ಪನವರಿಗೆ…. ಸೇಮ್ ಮಹಾರಾಷ್ಟ್ರದ ಅನನುಭವಿ ಉದ್ದವ್ ಠಾಕ್ರೆ ಕಂಗನಾ ರಾವುತ್ ವಿಷಯದಲ್ಲಿ ಮಾಡಿದಂತೆ……. ವೈಯಕ್ತಿಕ ಟೀಕೆಗಳಿಗೆ ಪೋಲೀಸರ ಮೂಲಕ ರೌಡಿಸಂ ಮಾಡಿಸಿದಿರಿ……… ಅಭಿವ್ಯಕ್ತಿ ಸ್ವಾತಂತ್ರ್ಯದ ನಿಜವಾದ ಧ್ವನಿ ಮಾಧ್ಯಮ ವ್ಯವಸ್ಥೆ. ಹೌದು, ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ನೈತಿಕ ಅಧಃಪತನದತ್ತ ಸಾಗಿರುವುದು ನಿಜ. ವಿವೇಚನಾ ರಹಿತ ತೀರ್ಮಾನ, ಭ್ರಷ್ಟಾಚಾರ, ಬ್ಲಾಕ್ ಮೇಲ್ ಎಲ್ಲವೂ ಇದೆ. ಆದರೆ ಅದು ವ್ಯಕ್ತಿಗಳು ಮಾಡುವ ಅಪರಾಧ. ಅದನ್ನು ಶಿಕ್ಷಿಸಬೇಕು. ಅದಕ್ಕೆ ಸಾಕಷ್ಟು …
Read More »ಮೂಡಲಗಿ ತಾಲೂಕಾ ಪತ್ರಕರ್ತರ ಪತ್ರಿಭಟನೆ | ಸರ್ಕಾರದ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಸರ್ಕಾರದಿಂದ ಮಾಧ್ಯಮ ಕ್ಷೇತ್ರದ ಕಗ್ಗೊಲೆ ಖಂಡನೀಯ
ಮೂಡಲಗಿ : ಸಿಎಂ ಪುತ್ರನ ಬಂಡವಾಳ ಬಯಲು ಮಾಡಿದ ಹಿನ್ನಲೆ ಮುಖ್ಯಮಂತ್ರಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಪವರ ಟಿವಿ ಚಾನಲ್ ಬಂದ್ ಮಾಡಿದ ಘಟನೆ ಖಂಡಿಸಿ ಬುಧುವಾರದಂದು ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದಿಂದ ಪಟ್ಟಣದ ಕಲ್ಮೇಶ್ವರ ಸರ್ಕಲ್‌ನಲ್ಲಿ ಸರ್ಕಾರದ ವಿರುದ್ದ ಪ್ರತಿಭಟಿಸಿ, ಕೆಲ ಸಮಯಗಳ ಕಾಲ ರಸ್ತೆ ಬಂದ್ ಮಾಡಿ ಸ್ಥಳೀಯ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಹಾಗೂ ಸಿಸಿಬಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆಯಲ್ಲಿ ಹಿರಿಯ ಪತ್ರಕರ್ತ ವಾಯ್ ವಾಯ್ ಸುಲ್ತಾನಪೂರ …
Read More »ಕರ್ನಾಟ ರಾಜ್ಯ ಬಂದ” ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಾದ್ಯಂತ ಮುಂಜಾಗೃತಾ ಕ್ರಮಕ್ಕೆ ಪೊಲೀಸ್ ಆಯುಕ್ತರಿಂದ ಸೂಚನೆ
ನಾಳೆ ದಿನಾಂಕ 28 ರಂದು ವಿವಿಧ ರೈತ ಸಂಘಟನೆಗಳು, ಕನ್ನಡ ಪರ ಹಾಗೂ ದಲಿತ ಸಂಘಟನೆಗಳು “ಕರ್ನಾಟಕ ರಾಜ್ಯ ಬಂದ” ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರ ಪೊಲೀಸ್‍ರಿಂದ ಎಲ್ಲ ಸುರಕ್ಷತಾ ಮತ್ತು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಇರುತ್ತದೆ. ಇದರೊಂದಿಗೆ ಕಾನೂನು ಬಾಹಿರ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಂದ ಹಿನ್ನೆಲೆಯಲ್ಲಿ ಸಂಘನೆಗಳು/ ಸಂಘಟಕರು ಮತ್ತು ಸಾರ್ವಜನಿಕರಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದೆ. ಯಾವುದೇ ವ್ಯಾಪಾರ ವಹಿವಾಟುಗಳನ್ನು ಒತ್ತಾಯ ಪೂರ್ವಕ ಬಂದ …
Read More »