Belagavi Times

ರಾಯಬಾಗದ ಕೋವಿಡ್ – 19 ಅಕ್ರಮದ ತನಿಖೆಗೆ ಒತ್ತಾಯ – ಪಿ ರಾಜೀವ್.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೋವಿಡ 19 ನ ನಿರ್ವಹಣೆಯ ಹಣವನ್ನು ದುರಪಯುಗ ಮಾಡಿಕೊಂಡಿರುವದರ ಬಗ್ಗೆ ಅಂದಿನ ತಹಸೀಲ್ದಾರ ಅಧಿಕಾರಿ ವಿರುದ್ದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಶಾಸಕರು ಪಿ.ರಾಜೀವ್ ದ್ವನಿ ಎತ್ತಿದ್ದಾರೆ. ರಾಯಬಾಗ ತಾಲೂಕಿನ ಕೋವಿಡ 19 ನಿರ್ವಹಣೆಯ ಸಂದರ್ಭದಲ್ಲಿ ಯಾವ ಯಾವ ಕಾರಣಕ್ಕೆ ಹಾಗೂ ಯಾವ ಯಾವ ಸಂದರ್ಭದಲ್ಲಿ ಚಿಕಿತ್ಸೆಗೆ ಹಣವನ್ನು ಎಷ್ಟು ವೆಚ್ಚವನ್ನು ಓದಗಿಸಿದ್ದಾರೆ ಹಾಗು ಹಣ ದುರ್ಬಳಕೆ ಮಾಡಿ ಕೊಂಡಿರುವದರ ಬಗ್ಗೆ ತಪ್ಪಿತಸ್ತ ಅಧಿಕಾರಿ ವಿರುದ್ದ ಏನು ಕ್ರಮ …

Read More »

ಹಾಡುಹಗಲೇ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ,ಇಬ್ಬರು ಯುವತಿಯರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ

ಬೆಳಗಾವಿ- ಹಾಡುಹಗಲೇ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ,ಇಬ್ಬರು ಯುವತಿಯರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಹೊರವಲಯದಲ್ಲಿರುವ ಮಚ್ಛೆ ಗ್ರಾಮದ ಬ್ರಹ್ಮ ನಗರದ ಬಳಿ ಇಬ್ಬರು ವಿವಾಹಿತ ಯುವತಿಯರನ್ನು ಕೊಲೆ ಮಾಡಿರುವ ಧಾರುಣ ಘಟನೆ ಇಂದು ಸಂಜೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಶಿಂಧೋಳಿ ಗ್ರಾಮದ ರಾಜಶ್ರೀ ಒಂದೂವರೆ ವರ್ಷದ ಹಿಂದೆ ಕಾಳೆನಟ್ಟಿ ಗ್ರಾಮದ ರವಿ ಜೊತೆ ಹಾಗೂ ಸುಳಗಾ ಗ್ರಾಮದ ರೋಹಿಣಿ ಅದೆ ಗ್ರಾಮದ ಗಂಗಪ್ಪಾ ಜೊತೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. 21 …

Read More »

ದೆಹಲಿಯಲ್ಲೇ ಸುರೇಶ ಅಂಗಡಿ ಅಂತ್ಯಕ್ರಿಯೆ ಬೆಳಗಾವಿಗೆ ಸುರೇಶ ಅಂಗಡಿ ಪಾರ್ಥೀವ ಶರೀರ ಕೊಂಡೊಯ್ಯಲು ನಕಾರ

ಬೆಳಗಾವಿ : ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ(65) ಕೊರೊನಾ ಸೋಂಕಿನಿಂದ ನಿಧನರಾಗಿರುವ ಹಿನ್ನೆಲೆಯಲ್ಲಿ ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತೆಗೆದುಕೊಂಡು ಹೋಗಲು ವೈದ್ಯರು ಬಿಡುತ್ತಿಲ್ಲ. ಕೊರೊನಾ ಸೋಂಕಿನಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್ ಅಂಗಡಿ ಚಿಕಿತ್ಸೆ ಫಲಕಾರಿಯಾಗದೇ ಇಂದು ರಾತ್ರಿ ಕೊನೆಯುಸಿರೆಳೆದಿದ್ದರು. ಹೀಗಾಗಿ ಅವರ ಪಾರ್ಥೀವಶರೀರವನ್ನು ಬೆಳಗಾವಿಗೆ ಕೊಂಡೊಯ್ಯಲು ಬಿಡುವುದಿಲ್ಲ. ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸುವಂತೆ ಆಸ್ಪತ್ರೆ ವೈದ್ಯರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ಕಡಾಡಿ ಹಾಗೂ ಸಚಿವ ವಿ.ಸೋಮಣ್ಣ ಏಮ್ಸ್ ವೈದ್ಯರ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಆಸ್ಪತ್ರೆ …

Read More »

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ ಕೇಂದ್ರ ಸಚಿವ, ಬೆಳಗಾವಿ ಸಂಸದ ಶ್ರೀ ಸುರೇಶ ಅಂಗಡಿಯವರ ನಿಧನದ ಸುದ್ದಿ ನಿಜಕ್ಕೂ ಆಘಾತಾಕಾರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಬೆಳಗಾವಿ: ಕಿಲ್ಲರ್ ಕೊರೊನಾ ಸೋಂಕಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ (65) ನಿಧನರಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ರಾಜ್ಯ ಸಚಿವ ಸುರೇಶ್ ಅಂಗಡಿ (65) ನಿಧನರಾಗಿದ್ದಾರೆ. ಸುರೇಶ್ ರವರು ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆಗ ಜನಿಸಿದರು. ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು. ಅವರು ಬೆಳಗಾವಿಯ …

Read More »

ಚಾಹಲ್ ಬಿಗಿ ಬೌಲಿಂಗ್; 10 ರನ್ ಗಳ ಅಮೋಘ ಗೆಲುವು ಸಾಧಿಸಿದ ಆರ್ ಸಿ ಬಿ

ಆಬುಧಾಬಿ : ಐಪಿಎಲ್ ನ ಮೂರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿ ಬಿ 10ರನ್ ಗಳ ಅಂತರದಿಂದ ಜಯ ಗಳಿಸಿದೆ. ಟಾಸ್ ಸೋತು ಬ್ಯಾಟಿಂಗ್ ಸವಾಲಿಗೆ ಇಳಿದ ಆರ್ ಸಿ ಬಿ 5 ವಿಕೆಟ್ ನಷ್ಟಕ್ಕೆ 164 ರ ಗುರಿ ಬಿಟ್ಟು ಕೊಟ್ಟಿತ್ತು. ಆರ್ ಸಿ ಬಿ ನೀಡಿದ 164 ರನ್ ಗಳ ಗುರಿಯನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಲಾರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ 153 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನನುಭವಿಸಿತು. ಸನ್ ರೈಸರ್ಸ್ ಹೈದರಾಬಾದ್ ಪರ ಚಾಹಲ್ 4 ಓವರ್ …

Read More »

ಏಸಬಿ ಅಧಿಕಾರಿಗಳೆಂದು ಹೇಳಿ ಅಧಿಕಾರಿಗಳಿಗೆ ವಂಚನೆ ಯತ್ನ ಬೈಲಹೊಂಗಲ ಪೊಲೀಸರಿಂದ ಇಬ್ಬರ ಬಂಧನ

ಬೈಲಹೊಂಗಲ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯಂದು ಸರ್ಕಾರಿ ನೌಕರರನ್ನು ವಂಚಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೈಲಹೊಂಗಲ ಪೊಲೀಸರು ಬಂಧಿಸಿ, ವಂಚನೆಗೆ ಬಳಸುತ್ತಿದ್ದ ವಾಹನವನ್ನು  ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಹಾಲಿ ವಣ್ಣೂರ, ದೇಶನೂರ ಗ್ರಾಮ ಮೂಲದ  ವಿಶಾಲ ಭಾಂವೆಪ್ಪ ಪಾಟೀಲ (42), ಬೆಂಗಳೂರಿನ ಕೊಡಗೆಹಳ್ಳಿ ಸಹಕಾರ ನಗರದ ಶ್ರೀನಿವಾಸ ತಂದೆ ಅಶ್ವಥ್ಥನಾರಾಯಣ (38)ಇವರನ್ನು ದಸ್ತಗೀರ ಮಾಡಿ ಬಂಧಿತರಿಂದ ಮೋಬೈಲ್ ಫೋನ್ ಮತ್ತು ಕಾರನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕೃಷಿ ಇಲಾಖೆಯ ಹುಲಗಣ್ಣವರ ಇವರಿಗೆ ರೂ. 5 ಲಕ್ಷ ಹಣ ತೆಗೆದುಕೊಂಡು ನೇಸರಗಿ ಕ್ರಾಸ ಬಳಿ ಬನ್ನಿ ಎಂದು …

Read More »

ಮಹಾನಾಯಕ ಇಂದು ಪ್ರಸಾರ ವಾಗಿಲ್ಲ ಏಕೆ ❓

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ‘ಮಹಾನಾಯಕ’ ಇಂದು ಪ್ರಸಾರವಾಗದ ಹಿನ್ನೆಲೆಯಲ್ಲಿ ವೀಕ್ಷಕರು ಆತಂಕಕ್ಕೊಳಗಾಗಿದ್ದಾರೆ.ಕೆಲವು ದಿನಗಳ ಹಿಂದೆಯಷ್ಟೇ ಜೀ ಕನ್ನಡಕ್ಕೆ ಮಹಾನಾಯಕ ಪ್ರಸಾರ ಮಾಡದಂತೆ ಬೆದರಿಕೆ ಕರೆಗಳು ಬಂದಿರುವ ವಿಚಾರ ಸಾಕಷ್ಟು ಚರ್ಚೆಗೀಡಾದ ಬೆನ್ನಲ್ಲೇ ಇಂದು ಮಹಾನಾಯಕ ಪ್ರಸಾರವಾಗದೇ ಇರುವುದು ವೀಕ್ಷಕರ ಆತಂಕಕ್ಕೆ ಕಾರಣವಾಯಿತು. ಇನ್ನೂ ಈ ವಿಚಾರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜೀ ಕನ್ನಡಕ್ಕೆ ಕರೆ ಮಾಡಿ ವಿಚಾರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಪರ್ಕ ಸಂಖ್ಯೆಯಲ್ಲಿಯೂ ಬಿಝಿ ಟೋನ್ ಕೇಳಿ ಬರುತ್ತಿದೆ. ಸದ್ಯ ದೊರೆಯಿತಿರುವ ಮಾಹಿತಿಯ ಪ್ರಕಾರ, ಪಾಪ್ …

Read More »

ರಿಪಬ್ಲಿಕನ್ ಸೇನಾ ಸಂಘಟನೆಯಿಂದ ಜಿಲ್ಲಾ ಮತ್ತು ತಾಲೂಕಾ ನೂತನ ಘಟಕವನ್ನು ಉದ್ಘಾಟನಾ ಕಾರ್ಯಕ್ರಮ ಜರುಗೀತ್ತು

ಚಿಕ್ಕೋಡಿ: ರಿಪಬ್ಲಿಕನ್ ಸೇನಾ ಸಂಘಟನೆಯು ಜಿಲ್ಲಾ ಮತ್ತು ತಾಲೂಕಾ ಪದಾದಿರ್ಕಾರಿಗಳ ಅದೇಶ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಜರೀಗೀತು ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರುಗಳು ಹಾಗು ತಾಲೂಕ ಅಧ್ಯಕ್ಷರುಗಳನ್ನು . ಗೋಕಾಕ .ರಾಮದುರ್ಗ.ಹುಕ್ಕೇರಿ. ತಾಲೂಕಗಳ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಈಶ್ವರ ಗುಡಜ ಮಾತನಾಡಿ ಈ ದೇಶ ಸರ್ವ ಜಾತಿ ಸರ್ವಧರ್ಮ ಸಮಾನತೆಯ ದೇಶ ಎತ್ತಿ ಹಿಡಿಯುವಂತಾ ದೇಶ ಈ ದೇಶಕ್ಕೆ ಸಂವಿಧಾನ ಕೊಡಬೇಕಂತ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೇವಲ …

Read More »

ಇಬ್ಬರು ಸರಗಳ್ಳರನ ಬಂಧಿಸಿದ ಮೂಡಲಗಿ ಪೊಲೀಸರು

ಮೂಡಲಗಿ : ಮಹಿಳೆ ಕೊರಳಲ್ಲಿ ಇರುವ ಬಂಗಾರದ ಮಂಗಳಸೂತ್ರವನ್ನು(ಗಂಟನ) ಕಿತ್ತುಕೊಂಡು ಪರಾರಿಯಾದ ಇಬ್ಬರು ಸರಗಳ್ಳರನ್ನು ಪೊಲೀಸರು ಬಂಧಿಸಿ ಆಭರಣವನ್ನು ವಶ ಪಡಿಸಿಕೊಂಡಿದ್ದಾರೆ. ರಾಯಬಾಗ ತಾಲೂಕಿನ ಮುಗಲಖೋಡ ಪಟ್ಟಣದ ರಾಜಶ್ರೀ ಬೆಣಚಿನಮರಡಿ ಎಂಬ ಮಹಿಳೆ ಸಪ್ಟಂಬರ್ 13 ರಂದು ತನ್ನ ಗಂಡನೊಂದಿಗೆ ಮೂಡಲಗಿ ತಾಲೂಕಿನ ಮಸಗುಪ್ಪಿಗೆ ಬೈಕ್ ಮೇಲೆ ಹೋಗುವಾಗ ಮಹಿಳೆಯ ಕೊರಳಲ್ಲಿರುವ ಸುಮಾರು 1,25,000 ಬೆಲೆಬಾಳುವ ಮಂಗಳಸೂತ್ರವನ್ನು (ಗಂಟನ) ಬೈಕ್ ಮೇಲೆ ಬಂದು ಕಿತ್ತುಕೊಂಡು ಪರಾರಿಯಾಗಿದ್ದರು. ಮೂಡಲಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 166/2020 ಕಾಲಂ 392 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಸಿಪಿಐ …

Read More »

ಸಮಾಜ ಸೇವಕ ಆನಂದ ಚೋಪ್ರಾ ಅವರು ಇನ್ನಿಲ್ಲ

  ಬೆಳಗಾವಿ:ಸವದತ್ತಿ, ಸೆ.19: ಸವದತ್ತಿಯ ಸಮಾಜ ಸೇವಕರು ಹಾಗೂ ರಾಜಕಾರಣಿ, ಸವದತ್ತಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಕಾಂಗ್ರೆಸ್ ಮುಂಖಡ ಆನಂದ ಚೋಪ್ರಾ ಅವರು ಶನಿವಾರ ಹೃದಯಾಘಾತದಿಂದ ಅಸುನೀಗಿದ್ದಾರೆ. ಮೊದಲಿಗೆ ಅನಾರೋಗ್ಯದಿಂದ ಬಳಲುತ್ತಿದ್ದರು, ಚಿಕಿತ್ಸೆ ನೀಡಲಾಗಿತ್ತು ಆದರೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ ಶನಿವಾರ ಬೆಳಗಿನ ಜಾವ ಏಕಾಕಿಯಾಗಿ ತೀವ್ರ ಉಸಿರಾಟದ ತೊಂದರೆಯಾಗಿದ್ದು ಇಂದು ಬೆಳಗಿನ ಜಾವ ಹೃದಯಾಘಾತದಿಂದ ಅವರು ನಿಧನರಾದರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವೃದ್ಧ ತಾಯಿ, ಪತ್ನಿ ,ಪುತ್ರಿ ಹಾಗೂ ಪುತ್ರನನ್ನು ಮತ್ತು ಅಪಾರ ಬಂಧು ಬಳಗವನ್ನು ಅವರು ತಮ್ಮ ಹಿಂದೆ ಬಿಟ್ಟು ಅಗಲಿದ್ದಾರೆ. …

Read More »
error: Content is protected !!