ಸೆಪ್ಟೆಂಬರ್ 14 ರಂದು ಕೆಂದ್ರ ಸರ್ಕಾರ ನಡೆಸುವ ಹಿಂದಿ ದಿವಸ ಆಚರಣೆಗೆ ಕರ್ನಾಟಕ ವಿಶ್ವನಿರ್ಮಾಣ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಯೂಬ ಪೀರಜಾದೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾಷಾ ವೈವಿಧ್ಯದ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ.ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು, ಅದಕ್ಕೆ ವಿಶೇಷ ಮಹತ್ವ,ಪೋತ್ಸಾಹ ನೀಡುವುದು ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿ …
Read More »Belagavi Times
*ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗು ಸಿಬ್ಬಂದಿಗಳ ಮೇಲೆ ಪಿಎಸ್ಐ ಢರ್ಪ:ಕಾನೂನು ಕ್ರಮಕ್ಕೆ ಆಗ್ರಹಿಸಿ ವೈದ್ಯರ ಮನವಿ*
ಬೆಳಗಾವಿ : ನಗರದಲ್ಲಿ ಜನರನ್ನ ರಕ್ಷಣೆ ಮಾಡಬೇಕಾದವರು ತೊಂದರೆ ಕೊಡೊ ರೀತಿ ವರ್ತನೆ ಮಾಡಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ ನಿನ್ನೆ ರಾತ್ರಿ ಗೋಕಾಕ ನಗರದ ಪೀ ಎಸ್ ಆಯ ಅಮೀನ್ ಭಾವಿ ಜನರನ್ನ ರಕ್ಷಣೆ ಮಾಡುವ ವೈದ್ಯರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಆಸ್ಪತ್ರೆ ಯಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ವರ್ಗ ಮನವಿ ಮಾಡಿದೆ. ರಾತ್ರಿ ಹೊತ್ತಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಮೇಲೆ ಇವರು ಅಸಭ್ಯ ವರ್ತನೆ ಮಾಡಿದ್ದಾರೆ ಇದರಿಂದ ಗೋಕಾಕ ನಗರದ ವೈದ್ಯಕೀಯ ಸಿಬ್ಬಂದಿ ಗಳು …
Read More »*ಭಕ್ತಿಭಾವದಲ್ಲಿ ಮಿಂದೆದ್ದ ಬಸವಣ್ಣನ ಭಕ್ತರು,ಆಜೂರ ಗ್ರಾಮದ ಪಲ್ಲಕ್ಕಿ ಉತ್ಸವಕ್ಕೆ ತೆರೆ….*
*ಭಕ್ತಿಭಾವದಲ್ಲಿ ಮಿಂದೆದ್ದ ಬಸವಣ್ಣನ ಭಕ್ತರು,ಆಜೂರ ಗ್ರಾಮದ ಪಲ್ಲಕ್ಕಿ ಉತ್ಸವಕ್ಕೆ ತೆರೆ….* *ಬೆಳಗಾವಿ:-* ಅಥಣಿ ತಾಲೂಕಿನ ಆಜೂರ ಗ್ರಾಮದ ಆರಾಧ್ಯದೇವರಾದ ಶ್ರೀ ಬಸವೇಶ್ವರ ಜಾತ್ರೆ ಅತ್ಯಂತ ಸರಳವಾಗಿ ಸಡಗರ ಸಂಭ್ರಮದಿಂದ ಗುರುವಾರ, ಶುಕ್ರವಾರ ಆಚರಣೆಯಾಯಿತು. ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಆಜೂರ ಗ್ರಾಮಕ್ಕೆ ಹತ್ತಿರವಿರುವ ಪುರಾಣ ಪ್ರಸಿದ್ಧ ಖಿಳೇಗಾಂವಿಯ ಬಸವೇಶ್ವರ ಪಲ್ಲಕ್ಕಿ ಗ್ರಾಮಕ್ಕೆ ಆಗಮಿಸುತ್ತದೆ ಆಜೂರ ಗ್ರಾಮಕ್ಕೆ ಬರುವಾಗ ಪ್ರಸಿದ್ಧಿ ಪಡೆದಿರುವ ಮೋಟ ಬಸವೇಶ್ವರನಿಗೆ ಭೇಟಿ ನೀಡಿ ಪಲ್ಲಕ್ಕಿಯು ಗ್ರಾಮವನ್ನು ಪ್ರವೇಶಿಸುತ್ತದೆ. ಪಲ್ಲಕ್ಕಿಯ ಆಗಮನದ ಸಮಯದಲ್ಲಿ ಖಿಳೇಗಾಂವ ಗ್ರಾಮದಿಂದ ಆಜೂರಿನವರೆಗೆ ರಸ್ತೆಯುದ್ದಕ್ಕೂ ನೀರು ಹರಿಸಿ …
Read More »*ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆಂದು ಕಣ್ಣೀರಿಟ್ಟ ಬಿ.ಎಸ್. ಯಡಿಯೂರಪ್ಪ*
ಬೆಂಗಳೂರು : ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶ ಆಯೋಜನೆ ಮಾಡಲಾಗಿದೆ. ಸಾಧನಾ ಸಮಾವೇಶದಲ್ಲಿ ಸಿಎ ಬಿ.ಎಸ್.ಯಡಿಯೂರಪ್ಪ ತಮ್ಮ ಹಿಂದಿನ ಹೋರಾಟ ನೆನಪುಗಳನ್ನು ನೆನದು ಕಣ್ಣೀರಿಟ್ಟಿದ್ದಾರೆ. ನಿಮ್ಮ ಅಪ್ಪಣೆ ಪಡೆದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮ ಹೋರಾಟದ ದಿನಗಳನ್ನು ಭಾಷಣದ ವೇಳೆ ನೆನಪಿಸಿದ ಸಿಎಂ ಬಿಎಸ್‌ವೈ ಅವರು, ನಾನೊಬ್ಬನೇ ವಿಧಾನಸಭೆಯೊಳಗೆ ಹೋರಾಡಿದ್ದೇನೆ.. ನನ್ನ ಕರ್ತವ್ಯವನ್ನ ಮಾಡಿದ್ದೇನೆ.. ನನಗೆ ತೃಪ್ತಿ ಸಮಾಧಾನವಿದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿ ಸಂಘದ ಕಾರ್ಯಕರ್ತನಾಗಿ ಕಾರ್ಯ ಪ್ರಾರಂಭಸಿದೆ. …
Read More »*ಸರ್ಕಾರಿ ಜಾಗದ ಗರಸು ಭ್ರಷ್ಟರಪಾಲು ತಹಸೀಲ್ದಾರ ಸಾಹೇಬರೆ ಇಲ್ಲಿ ನೋಡಿ ಒಂದು ಕಂಪ್ಲೇಂಟು*
ಬೆಳಗಾವಿ:-ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಸರ್ಕಾರಿ ಜಮೀನನಲ್ಲಿ ಅಕ್ರಮವಾಗಿ ತಮ್ಮ ಲಾಭಕ್ಕಾಗಿ ಸರಕಾರಿ ಭೂಪ್ರದೇಶವನ್ನು ಸರ್ಕಾರಿ ಕಾಮಗಾರಿಗಳಿಗೆ ಅನುದಾನವಿದ್ದರು ಕೆಲವು ವ್ಯಕ್ತಿಗಳು ಸರ್ಕಾರಿ ಭೂ ಪ್ರದೇಶವನ್ನು ಅಗೆದು(ಗರಸನ್ನು ) ರಸ್ತೆ ಕಾಮಗಾರಿಗಳಿಗೆ ಬಳಿಸುತ್ತಿದ್ದಾರೆ.ಈ ಕಾಮಗಾರಿಗಳಿಗೆ ಅನುದಾನ ಸಾಕಷ್ಟು ಇದ್ದರು ಗ್ರಾಮದ ನೈಸರ್ಗಿಕ ಸಂಪತ್ತು ಹಾಳುಮಾಡುವದರಲ್ಲಿ ಕೆಲವು ಭ್ರಷ್ಟಾಚಾರಿಗಳು ಪ್ರಮುಖ ಪಾತ್ರವಯಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ 2019-20 ರಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕಿನ ದಂಡಾಧಿಕಾರಿಗಳು ಈ ಪ್ರದೇಶವನ್ನು ಅಗೆಯಬಾರದೆಂದು ಆದೇಶ ಮಾಡಲಾಗಿತ್ತು. ಈ ಆದೇಶವಿದ್ದರೂ ದಿನಾಂಕ 24:07:2021 ರಂದು ಗ್ರಾಮದ ಅಶೋಕ ಕಾಲತಿಪ್ಪಿರವರು ತಮ್ಮ ಜೇಸಿಬಿ …
Read More »*ಅಧಿಕಾರಿಗಳಿಗೆ ರಜೆ ಹಾಕದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಸೂಚನೆ!*
ಅತಿವೃಷ್ಟಿಯಾಗುತ್ತಿರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. “ಯಾವುದೇ ಕಾರಣಕ್ಕೂ ಅಧಿಕಾರಿಗಳು ರಜೆ ಹಾಕಬಾರದು” ಎಂದು ಸೂಚಿಸಿರುವ ಸಿಎಂ ಯಡಿಯೂರಪ್ಪ ಅವರು, “ಅಧಿಕಾರಿಗಳು ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜೊತೆಗೆ ಮುಂದಿನ 48 ಗಂಟೆ ಏನು ಆಗಬಹುದು ಎಂಬುದನ್ನು ಊಹೆ ಮಾಡಿ ಕೆಲಸ ಮಾಡಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಪ್ರವಾಹ ಉಂಟಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಸಹ ಮುಂಜಾಗ್ರತಾ ಕ್ರಮವಾಗಿ …
Read More »*ಸರ್ಕಾರದ ಖಜಾನೆಗೆ ಗುಂಡಿ ತೋಡೇಬಿಟ್ರಾ? ಗುಂಡೂರಾವ್,ಸಂಬರಗಿ ಗ್ರಾಂಪಂ ಅಭಿವೃದ್ಧಿ ಅಧಿಕಾರಿಗಳ ಅಂಧಾ ದರ್ಬಾರ್ ಗೆ ಬ್ರೇಕ್ ಹಾಕೋರಾರು,*
ಬೆಳಗಾವಿ :- ಮೇಲಧಿಕಾರಿಗಳ ಅನುಮತಿ ಪಡೆಯದೆ ಎಸ್ಟ್ರೋ ಖಾತೆಯ ಹಣ ದುಂದುವೆಚ್ಚ ಮಾಡಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗುಂಡೂರಾವ್ ಮಿರಜಕರ್ ಹಾಗೂ ಅಧ್ಯಕ್ಷರ ವಿರುದ್ಧ ಹಣ ದುರುಪಯೋಗದ ಆರೋಪವನ್ನು ಸಂಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗನೂರು ಗ್ರಾಮದ ಕುಮಾರ್ ಕಾಂಬಳೆ ಎಂಬುವವರು ಆರೋಪ ಮಾಡಿದ್ದಲ್ಲದೆ ಮೇಲಧಿಕಾರಿಗಳಿಗೆ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯತಿ ಎದುರು ಪ್ರತಿಭಟಿಸುವ ಮೂಲಕ ಅಕ್ರಮವೆಸಗಿರುವ ಅಧಿಕಾರಿಯ ವಿರುದ್ಧ ಆಕ್ರೋಶ …
Read More »*ದಲಿತ ದ್ವನಿ ಎಂದೇ ಪ್ರಸಿದ್ದಿ ಪಡೆದಿದ್ದ ಕವಿ ಡಾ. ಸಿದ್ದಲಿಂಗಯ್ಯ ಇನ್ನು ನೆನಪು ಮಾತ್ರ*
ಬೆಂಗಳೊರು:ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ‘ದಲಿತ ಕವಿ’ ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ್ದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಅಧ್ಯಾಪನ- ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದವರು. ದೇವಯ್ಯ ಮತ್ತು ವೆಂಕಮ್ಮ ಎಂಬ ದಂಪತಿಗಳಿಗೆ ಡಾ. ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954 ರಲ್ಲಿ ಜನಿಸಿದರು. ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿ: ಜನಸ್ಪಂದನ್ ನ್ಯೂಸ್ ಕಳಕಳಿ. ದಲಿತ ಧ್ವನಿ ಎಂದೇ …
Read More »*ಪಿಡಬ್ಲ್ಯೂ ಡಿ ಜಮೀನು ಗುಳುಂ ಪ್ರಕರಣ ತನಿಖೆಗೆ ಸಿಪಿಐ ಆರ್ ಆರ್ ಪಾಟೀಲ್ ಸ್ಥಳಕ್ಕೆ ಭೇಟಿ ಪರಿಶೀಲನೆ*
ಚಿಕ್ಕೋಡಿ: ಪಿಡಬ್ಲ್ಯೂ ಡಿ ಜಮೀನು ಗುಳುಂ ಪ್ರಕರಣ ತನಿಖೆಗೆ ಸಿಪಿಐ ಆರ್ ಆರ್ ಪಾಟೀಲ್ ಸ್ಥಳಕ್ಕೆ ಭೇಟಿ ಪರಿಶೀಲನೆ. ಅಕ್ರಮ ಸರಕಾರಿ ಜಮೀನು ಉತಾರ ಮಾಡಿರುವ ಆರೋಪ ಹಿನ್ನಲೆ ಮೇಲಾಧಿಕಾರಿಗಳು ತನಿಖೆ ಮಾಡಬೇಕೆಂದು ಮೇಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನ್ಯಾಯವಾದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹಾಗೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಕುರಿತು ವಿಡಿಯೋನಲ್ಲಿ ಹೊಡಿಬಡಿ ಮಾಡಿರುವ 150 ಜನರ ಗುಂಪು ಯಾವೂರದು ಅವರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕೆಂದು ಮೇಲಧಿಕಾರಿಗಳಿಗೆ ಭೇಟಿ ನೀಡಿದ ಹಿನ್ನಲೆ ಸ್ಥಳಕ್ಕೆ …
Read More »ಮಹಾಯುದ್ಧ ಟಿವಿ ಸಂಪಾದಕನ ಬರ್ಬರ ಹತ್ಯೆ ಮಾಡಿ ಪರಾರಿಯಾದ ದುಷ್ಕರ್ಮಿಗಳು…!
ಮೂಡಲಗಿ :ತಾಲೂಕಿನ ಸಮೀಪದ ರಾಜಾಪುರ ಗ್ರಾಮದ ಚುನಿಮಟ್ಟಿಯಲ್ಲಿ ಮಹಾಯುದ್ದ ಟಿವಿ ಸಂಪಾದಕನ ಬರ್ಬರ ಹತ್ಯೆ ಹೌದು ಬೆಳಗಾವಿ ಜಿಲ್ಲೆಯಲ್ಲಿ ಇದೀಗ ಸದ್ದು ಮಾಡುತ್ತಿರುವ ಮಹಾಯುದ್ದ ಟಿವಿ ಸಂಪಾದಕನನ್ನ ದುಷ್ಕರ್ಮಿಗಳು ರಾತ್ರೋ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಇನ್ನು ಯಾವ ಕಾರಣ ತಿಳಿದು ಬಂದಿಲ್ಲ ಮನೆಯಿಂದ ಕೇವಲ 100 ಮೀಟರ್ ಅಂತರದಲ್ಲಿ ಶವ ಪತ್ತೆ ರಾತ್ರಿ ನೋಡಿದ ಜನ ದಂಗಾಗಿಹೋಗಿದ್ದರು. ಇನ್ನು ತನಿಖೆಯ ನಂತರ ಆರೋಪಿಗಳ ಹೆಸರು ಬಯಲಿಗೆ ಬರುತ್ತದೆ. ಇನ್ನು ಚಿಗುರುವ ವಯಸ್ಸಿನಲ್ಲೆ ಬರ್ಬರವಾಗಿ ಹತ್ಯೆಯಾದ ಶಿವಾನಂದ ಕಾಚ್ಯಾಗೋಳ. ಇನ್ನು ಸ್ಥಳಕ್ಕೆ ದಾವಿಸಿದ ಘಟಪ್ರಭಾ ಪೊಲೀಸರು …
Read More »