ಬೆಳಗಾವಿ : ಕುಡಚಿ ಶಾಸಕ ಪಿ.ರಾಜೀವ್ ಅವರ ತಾಯಿ ಶಾಂತಮ್ಮ ಪಾಂಡಪ್ಪಾ ಲಮಾಣಿ ( 75 ) ಕೊರೊನಾಗೆ ಬಲಿಯಾಗಿದ್ದಾರೆ. ಕೆಲವು ದಿನಗಳಿಂದ ಕೊರೊನಾ ಸೋಂಕು ತಗುಲಿ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
Read More »Belagavi Times
*ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜು*
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸೇವೆಗೆ 12 ಆಕ್ಸಿಜನ್ ಬಸ್ ಗಳು ಸಜ್ಜಾಗಿದ್ದು, ತಲಾ 10 ಲಕ್ಷ ರೂ. ವೆಚ್ಚದಲ್ಲಿ ತಲಾ 5 ಹಾಸಿಗೆಗಳುಳ್ಳ ಬಸ್ ಗಳನ್ನು ತಯಾರಿಸಲಾಗಿದೆ. ಬುಧವಾರ ಬೆಂಗಳೂರಿನ ಕೆಎಸ್‍ಆರ್ ಟಿ ಸಿ, ಕೇಂದ್ರ ಕಛೇರಿಯ ಮುಂಭಾಗದಲ್ಲಿ ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೆಎಸ್ಆರ್ ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಸಾರಿಗೆ ಸುರಕ್ಷಾ “ಸಂಚಾರಿ – ಐ ಸಿ ಯು” ಮತ್ತು ಆಕ್ಸಿಜನ್ ಬಸ್ಸುಗಳಿಗೆ ಚಾಲನೆ ನೀಡಿದರು. ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ …
Read More »*1250 ಕೋಟಿ ಮೊತ್ತದ ಪರಿಹಾರ ಘೋಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಪ್ರಕೋಶ್ಠ ಸಹ ಸಂಚಾಲಕ ನಿಖಿಲ ಅಶೋಕ ಓಸ್ವಾಲ ಹೇಳಿದರು*
ರೂ 1250 ಕೋಟಿ ಮೊತ್ತದ ಪರಿಹಾರ ಘೋಷಣೆ: ರೈತರ, ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿರುವ ಸಿ.ಎಂ ಕಾರ್ಯ ಶ್ಲಾಘನೀಯ –ಯಾವ ನಾಯಕ್ ಹಾಗೂ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಪ್ರಕೋಷ್ಠ ಸಹ ಸಂಚಾಲಕರಾದ ನಿಖಿಲ್ ಅಶೋಕ್ ಓಸ್ವಾಲ್ ಗೋಕಾಕ್ : ಕರೋನಾ 2ನೇ ಅಲೆ ನಿಯಂತ್ರಣ ಸಂಬಂಧ ಲಾಕ್‍ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕೊಳಗಾಗಿರುವ ರೈತರು, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ರೂ. 1250 ಕೋಟಿ ಮೊತ್ತದ ಪರಿಹಾರ ಘೋಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಬೆಳಗಾವಿ ಜಿಲ್ಲಾ …
Read More »*ಸಂಪೂರ್ಣವಾಗಿ ಲಾಕ್ ಡೌನ್ ಘೋಷಣೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ* *ಶನಿವಾರ (ಮೇ.22) ಬೆಳಿಗ್ಗೆ 06.00 ಗಂಟೆಯಿಂದ (ಮೇ.24) ಸೋಮವಾರ ಬೆಳಿಗ್ಗೆ 06.00 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.*
ಬೆಳಗಾವಿಯಲ್ಲಿ ಶನಿವಾರದಿಂದ ಸೋಮವಾರದವರೆಗೆ ಸಂಪೂರ್ಣವಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದಲ್ಲಿ ದಿನೇ ದಿನೇ ಕೋವಿಡ್ ಸಂಖ್ಯೆ ಹೆಚ್ಚುತ್ತಾ ಸಾಗಿವೆ. ಈ ಹಿನ್ನಲೆಯಲ್ಲಿ ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿವಿಧ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಆ ಬಳಿಕ ಸಂಪೂರ್ಣ ಲಾಕ್ ಡೌನ್ ಹೇರುವ ಸಂಪೂರ್ಣ ಅಧಿಕಾರವನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಬಿಟ್ಟುಕೊಟ್ಟಿದ್ದರು. ಪ್ರಧಾನಿ ಅಧಿಕಾರ ಕೊಡುತ್ತಿದ್ದಂತೆ ವಿವಿಧ ರಾಜ್ಯಗಳ ಜಿಲ್ಲಾಧಿಕಾರಿಗಳು ಸಂಬಂಧಿಸಿದ …
Read More »*ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ನಕಲಿ ಐಡಿ ತೋರಿಸಿದ ನಕಲಿ ಪತ್ರಕರ್ತನ ನಕಲಿ ಐಡಿ ಇಟ್ಟುಕೊಂಡು ಓಡಾಡಿದ ವ್ಯಕ್ತಿ ಪೊಲೀಸರ ಅತಿಥಿ*
ನಕಲಿ ಪ್ರೆಸ್ ಐಡಿ ಸಿದ್ದಪಡಿಸಿಕೊಂಡು ಅನಗತ್ಯವಾಗಿ ಆಟೋದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ರಸ್ತೆಗೆ ಇಳಿದಿದ್ದ ನಕಲಿ ಪತ್ರಕರ್ತನನ್ನು ಬೆಳಗಾವಿ ಪೊಲೀಸರು ಚನ್ನಮ್ಮ ವೃತ್ತದಲ್ಲಿ ಬಂಧಿಸಿ, ಅಟೋ ವಶಕ್ಕೆ ಪಡೆದಿದ್ದಾರೆ. ಆಟೋದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ರಸ್ತೆಗೆ ಇಳಿದಿದ್ದ ವ್ಯಕ್ತಿಯನ್ನು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪಿಎಸ್‍ಐ ಆರ್.ಬಿ.ಸೌದಾಗರ್ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಆತ ಪತ್ರಕರ್ತನ ಕಾರ್ಡ್ ತೋರಿಸಿದ. ಆದರೆ ಆ ಕಾರ್ಡ್ ನಕಲಿಯಾಗಿತ್ತು. ನಕಲಿ ಪತ್ರಕರ್ತ ಉಲಾಸ.ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದರು. ಈತ ಗೋಕಾಕದ ನ್ಯಾಯವಾಣಿ ಪತ್ರಿಕೆಯ ವರದಿಗಾರ ಎಂದು ಈತ ಹೇಳಿದ್ದ. ಅನುಮಾನ …
Read More »*ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಆಕ್ಸಿಜನ್ ಕೊರತೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೋವಿಡ್ ಮೂರನೇ ಅಲೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ*
ಬೆಳಗಾವಿ : ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್ ಗಳಿವೆ. ಆದರೆ, ಸಿಬ್ಬಂದಿ ಹಾಗೂ ಆಕ್ಸಿಜನ್ ಕೊರತೆ ಇದ್ದು, ಸರ್ಕಾರ ತಕ್ಷಣ ಸಿಬ್ಬಂದಿ ನೇಮಿಸಿ, ಆಕ್ಸಿಜನ್ ಪೂರೈಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಖಬೇಕೆಂದರು. ಸರ್ಕಾರಕ್ಕೆ ಸೋಂಕು ತಡೆಗಟ್ಟುವ ಇಚ್ಛಾಶಕ್ತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ಆಕ್ಸಿಜನ್ ನೀಡದೆ ಹೊರತು. ಯಾವುದೇ ರೀತಿ ಸೌಲಭ್ಯಗಳನ್ನು …
Read More »*ಗೋಕಾಕ ನಗರದಲ್ಲಿ ಕಾರು ಆಟೋ ಬೈಕ ಸರಣಿ ಅಪಘಾತ*
ಬೆಳಗಾವಿ :ಜಿಲ್ಲೆಯ ಗೋಕಾಕ ತಾಲ್ಲೂಕಿನ ಬ್ಯಾಳಿಕಾಟಾ ಬಳಿ ಇಂದು ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿ, ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರದ ಕಡೆ ಆಗಮಿಸುತ್ತಿದ್ದ ಇಂಡಿಕಾ ಕಾರ್, ಇಲ್ಲಿನ ನಾಕಾ 1 ರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಆಟೊ ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಇದರಿಂದ ಆಟೋದ ಹಿಂಬದಿ ಇದ್ದ ಬೈಕ್ ಗೂ ಆಟೋ …
Read More »*ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ: 1748 ಹೊಸ ಪ್ರಕರಣ, 6 ಸಾವು*
ಬೆಳಗಾವಿ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ಇಂದು ಒಂದೇ ದಿನ ಹೊಸದಾಗಿ 1748 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.6 ಸೋಂಕಿತರು ಕೋವಿಡ್‍ಗೆ ಬಲಿಯಾಗಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಮತ್ತೆ 1748 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48,569ಕ್ಕೆ ಏರಿಕೆಯಾಗಿದೆ. ಅಥಣಿ ತಾಲೂಕಿನಲ್ಲಿ 236, ಬೆಳಗಾವಿಯಲ್ಲಿ 470, ಬೈಲಹೊಂಗಲದಲ್ಲಿ 83, ಚಿಕ್ಕೋಡಿ 154, ಗೋಕಾಕ 301, ಹುಕ್ಕೇರಿ 74, ಖಾನಾಪುರ 129, ರಾಮದುರ್ಗ 64, …
Read More »*ಲಸಿಕೆ ಖರೀದಿಗೆ ಕಾಂಗ್ರೆಸ್ ನಿಂದ 100 ಕೋಟಿ ರೂ.: ಸಿದ್ದರಾಮಯ್ಯ ಘೋಷಣೆ*
ಕೊರೊನಾ ಲಸಿಕೆ ಖರೀದಿಸಲು ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ನಂತೆ 100 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ನಿಧಿಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ರಾಜ್ಯ ಸರಕಾರಕ್ಕೆ …
Read More »*ಮಾದ್ಯಮಗಳ ವರದಿಗಳ ಮೇಲೆ ದೂರು ನೀಡುವುದನ್ನು ನಿಲ್ಲಿಸಿ-ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಸೂಚನೆ*
ನವದೆಹಲಿ(06-05-2021)): ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಗಳು, ಮಾದ್ಯಮ ವರದಿಗಳ ಮೇಲೆ ದೂರುಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮದ್ರಾಸ್ ಹೈಕೋರ್ಟ್ ತೀರ್ಪಿನ ಮಾದ್ಯಮ ವರದಿಗಳ ಬಗ್ಗೆ ದೂರು ನೀಡಿರುವ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ರಾಜಕೀಯ ರ್ಯಾಲಿಗಳನ್ನು ನಿಲ್ಲಿಸದ ಕಾರಣ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ಯಾಕೆ ದಾಖಲಿಸಬಾರದೆಂಬ ಕೋರ್ಟ್ ಪ್ರಶ್ನೆಯನ್ನು ಮಾದ್ಯಮ ವರದಿ ಮಾಡುವುದು ಚುನಾವಣಾ ಆಯೋಗಕ್ಕೆ ಮುಜುಗರ ತಂದಿತ್ತು.ಇದನ್ನು ಪ್ರಶ್ನಿಸಿ ಆಯೋಗ ಸುಪ್ರೀಂ ಮೆಟ್ಟಿಲೇರಿತ್ತು. ಆರ್ಟಿಕಲ್ 19 ವಾಕ್ ಮತ್ತು …
Read More »